Uttar Pradesh Election: ವಿಭಿನ್ನ ಪ್ರಣಾಳಿಕೆ ನೀಡಲು ತಯಾರಿ ನಡೆಸುತ್ತಿರುವ ಕಾಂಗ್ರೆಸ್

ಪ್ರಣಾಳಿಕೆಯ ಅಂತಿಮ ಕರಡನ್ನು ಶೀಘ್ರದಲ್ಲೇ ಸಂಕಲಿಸಲಾಗುವುದು. ಪ್ರಾಯೋಗಿಕವಾಗಿ ಸಾಧ್ಯವಾಗದ ಯಾವುದನ್ನೂ ನಾವು ಘೋಷಿಸಲ್ಲ ಎಂದು‌ ಉತ್ತರಪ್ರದೇಶ ಕಾಂಗ್ರೆಸ್​ ತಿಳಿಸಿದೆ

ರಾಹುಲ್ ಗಾಂಧಿ-ಸೋನಿಯಾ ಗಾಂಧಿ.

ರಾಹುಲ್ ಗಾಂಧಿ-ಸೋನಿಯಾ ಗಾಂಧಿ.

  • Share this:
ನವದೆಹಲಿ, (ಸೆ. 15): ಮುಂದಿನ‌ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections)  ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ.‌ ಅಲ್ಲದೆ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ. ಯುವಕರು ಮತ್ತು ಹಿರಿಯರಿಗೆ ಭತ್ಯೆ, ಕೃಷಿ ಸಾಲ ಮನ್ನಾ ಮಾಡುವುದು ಮಾಮೂಲು ಸಂಗತಿಗಳು‌. ಇವುಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು (Training Center For Competitive Exams) ತೆರೆಯುವ ಘೋಷಣೆ ಮಾಡಲಿದೆ‌. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಘೋಷಣೆ ಮಾಡಿದಂತೆ ಉಚಿತ ವಿದ್ಯುತ್ (Free Electricity) ಅನ್ನೂ ಘೊಷಿಸಲಿದೆ ಎಂದು ಹೇಳಲಾಗುತ್ತಿದೆ‌.

ಕಾಂಗ್ರೆಸ್ ಪಕ್ಷವು 2022 ರ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಅಂತಿಮಗೊಳಿಸಲು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ತನ್ನ ಪ್ರಣಾಳಿಕೆಗೆ ಒಳಹರಿವುಗಳನ್ನು ಸಂಗ್ರಹಿಸಲು ರಾಜ್ಯದಾದ್ಯಂತ ಸಾರ್ವಜನಿಕ ಅಭಿಯಾನವನ್ನು ನಡೆಸುತ್ತಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು (Social Media) ಮತ್ತು ಇತರ ಡಿಜಿಟಲ್ ಮಾಧ್ಯಮಗಳ (Digital Media) ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಅಲ್ಲದೆ ರಾಜ್ಯದಾದ್ಯಂತ ಬೌದ್ಧಿಕ ವರ್ಗ ಮತ್ತು ಸಮೂಹ ಸಂಸ್ಥೆಗಳಿಂದ ಲಿಖಿತ ಸಲಹೆಯನ್ನು ಪಡೆಯುತ್ತಿದೆ.

ರೈತರ ಸಾಲಮನ್ನಾ?

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಪ್ರಣಾಳಿಕೆ ರೂಪಿಸುವ ಹಿನ್ನಲೆಯಲ್ಲಿ ಆರು ತಿಂಗಳಿಂದ ರಾಜ್ಯದ ಪರಿಚಿತ, ಬೌದ್ಧಿಕ ಮತ್ತು ಸಾಮಾನ್ಯ ಜನರಿಂದ ಸಲಹೆ, ಶಿಫಾರಸುಗಳನ್ನು ಪಡೆಯುತ್ತಿದೆ. ಪದೇ ಪದೇ ಕೇಂದ್ರ ಸರ್ಕಾರದ (Union Government) ಕೆಟ್ಟ ನಿಲುವುಗಳಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಕಾಂಗ್ರೆಸ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದೆ.
ಇದರ ಹೊರತಾಗಿ ಪ್ರತಿ ಜಿಲ್ಲೆಯಲ್ಲಿ ವಕೀಲರು ಮತ್ತು ರೈತರ ಬಳಿ ತೆರಳಿ ಚರ್ಚೆ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ, ರೈತರ ಮೇಲಿನ ಸಾಲಗಳು ಮತ್ತು ಸಂಭವನೀಯ ಸಾಲ ಮನ್ನಾ, ಉದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅವರನ್ನು ಹೇಗೆ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂಬ ಪ್ರಮುಖ ಅಂಶಗಳ ಮೇಲೆ ಗಮನಹರಿಸಿದೆ.

ಜನರ ಅಭಿಪ್ರಾಯಕ್ಕೆ ಮುಂದಾದ ಪಕ್ಷ

ಪ್ರಣಾಳಿಕೆಯ ಸಮಿತಿಯ ಮುಖ್ಯಸ್ಥ ಸಲ್ಮಾನ್ ಖುರ್ಷೀದ್ ಎರಡು ದಿನಗಳ ಕನಿಷ್ಠ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಜನರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮತ್ತು ಮುಂದಿನ 200 ಯೂನಿಟ್‌ಗಳಿಗೆ ದರಗಳನ್ನು 50% ಕಡಿತಗೊಳಿಸುವ ಬಗ್ಗೆಯೂ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

"ನಾವು ಗ್ರಾಮೀಣ ಮಟ್ಟದಲ್ಲಿ ಕೋಚಿಂಗ್ ಸೆಂಟರ್‌ಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಂದ್ರೀಕರಿಸುತ್ತಿದ್ದೇವೆ. ನಗರಗಳಲ್ಲಿ ಇಂತಹ ಕೇಂದ್ರಗಳನ್ನು ತೆರೆಯುವುದು ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಕಾರ್ಯಸಾಧ್ಯವಾಗಿದೆ. ಇದರ ಹೊರತಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯೋವೃದ್ಧರಿಗೆ ಅವರ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ಕೆಲವು ಭತ್ಯೆಯನ್ನು ಒದಗಿಸುವುದಕ್ಕಾಗಿ ಕೆಲವು ಭತ್ಯೆಯನ್ನು ರೂಪಿಸಲಾಗುತ್ತಿದೆ. ನಾವು ಯುವಕರಿಗೆ ಭತ್ಯೆಯ ಸಲಹೆಗಳನ್ನು ಸಹ ಪಡೆದುಕೊಂಡಿದ್ದೇವೆ. ಅದಕ್ಕಾಗಿ ಚರ್ಚೆ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಘೋಷಿಸಲು ಪ್ರಯತ್ನಿಸುತ್ತದೆ ಏಕೆಂದರೆ ನಾವು ಯಾವಾಗಲೂ ಕೋಮು ಮತ್ತು ಧಾರ್ಮಿಕ ಭಾವನೆಗಳ ಜೊತೆ ಆಟ ಆಡುತ್ತಿರುವ ಬಿಜೆಪಿಯಂತಲ್ಲದೆ ನೈಜ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇವೆ" ಎಂದು ಕಾಂಗ್ರೆಸ್ ನಾಯಕರೊಬ್ಬರು "ನ್ಯೂಸ್ 18 ನೆಟ್ ವರ್ಕ್" ಗೆ (News 18 Network) ತಿಳಿಸಿದ್ದಾರೆ.

ಅಂತಿಮ ಹಂತದಲ್ಲಿ ಪ್ರಣಾಳಿಕೆ

ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ (Uttar Pradesh Congress President) ಅಜಯ್ ಕುಮಾರ್ ಲಲ್ಲು (Ajay Lallu) ಅವರು ಪ್ರಣಾಳಿಕೆಯ ಕೆಲಸ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. "ಕಾರ್ಯಸಾಧ್ಯತೆಯೊಂದಿಗೆ ದತ್ತಾಂಶ ಸಂಗ್ರಹಣೆ ಮತ್ತು ಭರವಸೆಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಣಾಳಿಕೆಯ ಅಂತಿಮ ಕರಡನ್ನು ಶೀಘ್ರದಲ್ಲೇ ಸಂಕಲಿಸಲಾಗುವುದು. ಪ್ರಾಯೋಗಿಕವಾಗಿ ಸಾಧ್ಯವಾಗದ ಯಾವುದನ್ನೂ ನಾವು ಘೋಷಿಸಲು ಬಯಸುವುದಿಲ್ಲ" ಎಂದು ಹೇಳಿದ್ದಾರೆ.

ಇದನ್ನು ಓದಿ: ನಿಗೂಢ ಜ್ವರಕ್ಕೆ 10 ದಿನದಲ್ಲಿ 8 ಮಕ್ಕಳು ಬಲಿ; ಆತಂಕದಲ್ಲಿ ಗ್ರಾಮಸ್ಥರು

ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ((Uttar Pradesh Congress In charge Priyanka Gandhi Vadra) ಇತ್ತೀಚೆಗೆ ಪ್ರಣಾಳಿಕೆ ಸಮಿತಿಯ ಪ್ರಮುಖ ಸಭೆಯನ್ನು ತೆಗೆದುಕೊಂಡಿದ್ದರು. ಇದರಲ್ಲಿ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಸಲ್ಮಾನ್ ಖುರ್ಷೀದ್, ರಾಜ್ಯಸಭಾ ಸಂಸದ ಪಿಎಲ್ ಪುನಿಯಾ, ಸುಪ್ರಿಯಾ ಶ್ರೀನೇಟ್, ವಿವೇಕ್ ಬನ್ಸಾಲ್, ಅಮಿತಾಬ್ ದುಬೆ, ಅಜಯ್ ಕುಮಾರ್ ಲಲ್ಲು ಮತ್ತು ಶಾಸಕರ ನಾಯಕ ಆರಾಧನಾ ಮಿಶ್ರಾ ಮೋನಾ ಉಪಸ್ಥಿತರಿದ್ದರು.

ಶೀಘ್ರವೇ 50 ಅಭ್ಯರ್ಥಿಗಳ ಟಿಕೆಟ್ ಘೋಷಿಸುವ ಕುರಿತು ವದಂತಿಗಳು ಮತ್ತು ಸುದ್ದಿ ವರದಿಗಳ ವಿಚಾರದಲ್ಲಿ, ಯುಪಿಸಿಸಿ ಮುಖ್ಯಸ್ಥರು, “ಇವೆಲ್ಲ ವದಂತಿಗಳು, ಈ ರೀತಿಯ ಏನನ್ನೂ ಈಗ ಮಾಡಿಲ್ಲ. ಅಭ್ಯರ್ಥಿಗಳ ಘೋಷಣೆಯನ್ನೂ ಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Published by:Seema R
First published: