ಸೋತು ಸೊರಗಿರುವ ಕಾಂಗ್ರೆಸ್​ಗೆ ಚೈತನ್ಯ ತುಂಬಲು ಪಕ್ಷದ ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಸಿ; ಸಂಸದ ಶಶಿ ತರೂರ್ ಮನವಿ

2019ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಖಾಲಿಯಾಗಿದ್ದ ಈ ಸ್ಥಾನಕ್ಕೆ ಕಳೆದ ಆಗಸ್ಟ್​ನಲ್ಲಿ ಮಧ್ಯಂತರ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ನೇಮಕಗೊಂಡಿದ್ದಾರೆ.

ಶಶಿ ತರೂರ್

ಶಶಿ ತರೂರ್

  • Share this:
ನವದೆಹಲಿ: ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡುವತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಯೋಚಿಸುತ್ತಿರುವ ನಡುವೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕಾರ್ಯಕಾರಿ ಸಮಿತಿ ಪಕ್ಷದ ನಾಯಕತ್ವ ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಸಲಿ. ಈ ಮೂಲಕ ಪಕ್ಷದ ಶಕ್ತಿಯನ್ನು ವೃದ್ಧಿಸಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ನಾಯಕತ್ವ ವಿಷಯದ ಬಗ್ಗೆ ಪಕ್ಷದಲ್ಲಿ ಮೌನ ಎದ್ದು ಕಾಣುತ್ತಿದೆ ಎಂದು ಶೀಲಾ ದೀಕ್ಷಿತ್ ಅವರ ಮಗ ಸಂದೀಪ್ ದೀಕ್ಷಿತ್ ಹೇಳಿಕೆಯನ್ನು ಉಲ್ಲೇಖಿಸಿ ಸಂಸದ ಶಶಿ ತರೂರ್ ಹೀಗೆ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಇರುವವರು, ಮಾಜಿ ಮುಖ್ಯಮಂತ್ರಿಗಳಾಗಿರುವವರು ಹಾಗೂ ಹಾಲಿ ಮುಖ್ಯಮಂತ್ರಿಗಳಾಗಿ ಇರುವವರಲ್ಲಿ ಹಲವು ಹಿರಿಯರಿದ್ದಾರೆ. ಪಕ್ಷಕ್ಕೆ ಹೊಸ ಚೈತನ್ಯ ನೀಡಲು ಇದು ಸಕಾಲ ಎಂಬುದು ನನ್ನ ಭಾವನೆ ಎಂದು ಸಂದೀಪ್ ದೀಕ್ಷಿತ್ ಇಂಡಿಯನ್ ಎಕ್ಸ್​ಪ್ರೆಸ್ ವರದಿಗಾರರಿಗೆ ಹೇಳಿದ್ದಾಗಿ ಸುದ್ದಿಯಾಗಿತ್ತು.ಸಂದೀಪ್ ದೀಕ್ಷಿತ್ ಅವರು ಬಹಿರಂಗವಾಗಿ ಏನನ್ನು ಹೇಳಿದ್ದಾರೋ ಅದನ್ನೇ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸೇರಿದಂತೆ ದೇಶಾದ್ಯಂತ 12ಕ್ಕೂ ಹೆಚ್ಚು ನಾಯಕರು ಖಾಸಗಿಯಾಗಿ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಹಾಗೂ ಮತದಾರರನ್ನು ಸೆಳೆಯಲು ಪಕ್ಷದ ನಾಯಕತ್ವ ಸ್ಥಾನಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಜಿಎಸ್​ಟಿ 21ನೇ ಶತಮಾನದ ಅತಿದೊಡ್ಡ ಹುಚ್ಚುತನ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

2019ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಖಾಲಿಯಾಗಿದ್ದ ಈ ಸ್ಥಾನಕ್ಕೆ ಕಳೆದ ಆಗಸ್ಟ್​ನಲ್ಲಿ ಮಧ್ಯಂತರ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ನೇಮಕಗೊಂಡಿದ್ದಾರೆ.
First published: