ಒಂದೆಡೆ ರಾಮನಿಗೆ ಮಂದಿರ, ಇನ್ನೊಂದೆಡೆ ಸೀತಾಗೆ ಬೆಂಕಿ ಎಂದು ಅಧೀರ್ ಟೀಕೆ; ಕಾನೂನು ಕೈಗೆತ್ತಿಕೊಳ್ಳಬಾರದು ಎಂದ ಮನೇಕಾ ಗಾಂಧಿ

ತೆಲಂಗಾಣ, ಉನ್ನಾವೋ ಎಲ್ಲಿ ಹೋದಲ್ಲಿ ಅಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಯುತ್ತಿದೆ. ಜನರು ಎಲ್ಲಿಗೆ ಹೋಗಬೇಕು. ಒಂದು ಕಡೆ ರಾಮ ಮಂದಿರವನ್ನು ಕಟ್ಟುತ್ತಿದ್ದರೆ, ಮತ್ತೊಂದೆಡೆ ಸೀತೆಯನ್ನು ಸುಡಲಾಗುತ್ತಿದೆ ಎಂದು ಕಾಂಗ್ರೆಸ್​​ ನಾಯಕ ಆತಂಕ ವ್ಯಕ್ತಪಡಿಸಿದರು.

Seema.R | news18-kannada
Updated:December 6, 2019, 1:24 PM IST
ಒಂದೆಡೆ ರಾಮನಿಗೆ ಮಂದಿರ, ಇನ್ನೊಂದೆಡೆ ಸೀತಾಗೆ ಬೆಂಕಿ ಎಂದು ಅಧೀರ್ ಟೀಕೆ; ಕಾನೂನು ಕೈಗೆತ್ತಿಕೊಳ್ಳಬಾರದು ಎಂದ ಮನೇಕಾ ಗಾಂಧಿ
ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌದರಿ
  • Share this:
ನವದೆಹಲಿ (ಡಿ.6): ತೆಲಂಗಾಣ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳು ಇಂದು ಸಂಸತ್ತಿನಲ್ಲಿ ಪ್ರತಿಧ್ವನಿಸಿದ್ದು, ಅಪರಾಧಿಗಳು ಇಷ್ಟು ಧೈರ್ಯದಿಂದ ಕೃತ್ಯ ಎಸಗಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌದರಿ ಕೇಳಿದರು.

ತೆಲಂಗಾಣ, ಉನ್ನಾವೋ ಎಲ್ಲಿ ಹೋದಲ್ಲಿ ಅಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಯುತ್ತಿದೆ. ಜನರು ಎಲ್ಲಿಗೆ ಹೋಗಬೇಕು. ಒಂದು ಕಡೆ ರಾಮ ಮಂದಿರವನ್ನು ಕಟ್ಟುತ್ತಿದ್ದರೆ, ಮತ್ತೊಂದೆಡೆ ಸೀತೆಯನ್ನು ಸುಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತೆಲಂಗಾಣ ಕೃತ್ಯ ಮಾಸುವ ಮೊದಲೇ ಉತ್ತರ ಪ್ರದೇಶದ ಉನ್ನಾವೋದಲ್ಲಿ ಸಂತ್ರಸ್ತೆಯನ್ನು ಆರೋಪಪಿಗಳು  ನಿರ್ಭಯವಾಗಿ ಸುಟ್ಟ  ಕೃತ್ಯ ಖಂಡಿಸಿ ಕಾಂಗ್ರೆಸ್​ ಸಭಾ ತ್ಯಾಗ ಮಾಡಿತು.

ಘಟನೆ ಖಂಡಿಸಿ ಮಾತನಾಡಿದ ಶಿವಸೇನಾ ಸಂಸದ ಅರವಿಂದ್​ ಸಾವಂತ್​, ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್​ ಕಠಿಣ ಕಾನೂನು ಜಾರಿಗೆ ತರಬೇಕು. ಪ್ರಕರಣಗಳು ಕೆಳಹಂತದ ನ್ಯಾಯಾಲಯದಿಂದ ಬರುವ ಬದಲು ಸುಪ್ರೀಂಕೋರ್ಟ್​ ನೇರವಾಗಿ ಈ ಪ್ರಕರಣ ಇತ್ಯರ್ಥ ಮಾಡುವಂತೆ ಆಗಬೇಕು. ಈ ಕುರಿತು ಸಮಿತಿ ರಚಿಸಿ ಚರ್ಚೆಯಾಗಬೇಕು ಎಂದು ಸ್ಪೀಕರ್​ಗೆ ಮನವಿ ಮಾಡಿದರು.

ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೆ ಏರಿಸದ ಹೊರತು ಅತ್ಯಾಚಾರಿಗಳಲ್ಲಿ ಭಯಮೂಡಿಸಲು ಸಾಧ್ಯವಿಲ್ಲ ಎಂದು ಅನುಪ್ರಿಯ ಪಟೇಲ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನು ಓದಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ; ವೆಂಟಿಲೇಟರ್​ನಲ್ಲಿ ಚಿಕಿತ್ಸೆ

ತೆಲಂಗಾಣ ಎನ್​ಕೌಂಟರ್​ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಮನೇಕಾ ಗಾಂಧಿ , ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು, ನಿಮಗೆ ಬೇಕು ಎಂದು ಅವರನ್ನು ಕೊಲ್ಲಲು ಸಾಧ್ಯವಿಲ್ಲ. ಅವರನ್ನು ಶಿಕ್ಷಿಸಲು ಕಾನೂನು ಇದೆ. ನ್ಯಾಯಾಲಯದಿಂದ ಅವರನ್ನು ಗಲ್ಲಿಗೆ ಏರಿಸಬೇಕಿತ್ತು ಎಂದರು.
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading