ಶ್ರೀರಾಮ ಕೂಡ ಸೀತೆಗೆ ತಲಾಖ್ ನೀಡಿದ್ದ ಎಂದು ಹೇಳಿಕೆ ನೀಡಿ, ಕ್ಷಮಾಪಣೆ ಕೇಳಿದ ಕಾಂಗ್ರೆಸ್ ಸಂಸದ

news18
Updated:August 11, 2018, 10:28 AM IST
ಶ್ರೀರಾಮ ಕೂಡ ಸೀತೆಗೆ ತಲಾಖ್ ನೀಡಿದ್ದ ಎಂದು ಹೇಳಿಕೆ ನೀಡಿ, ಕ್ಷಮಾಪಣೆ ಕೇಳಿದ ಕಾಂಗ್ರೆಸ್ ಸಂಸದ
news18
Updated: August 11, 2018, 10:28 AM IST
-ನ್ಯೂಸ್ 18 ಕನ್ನಡ

ನವದೆಹಲಿ (ಆ.11): ಕಾಂಗ್ರೆಸ್ ಸಂಸದ ಹುಸೇನ್ ದಲ್ವಾಯಿ ಶುಕ್ರವಾರ ಶ್ರೀರಾಮನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ, ನಂತರ ಕ್ಷಮಾಪಣೆ ಕೇಳಿದ ಘಟನೆ ನಡೆದಿದೆ.

“ಶ್ರೀರಾಮ ಕೂಡ ಸೀತೆಯ ಮೇಲೆ ಅನುಮಾನಗೊಂಡು ಆಕೆಯನ್ನು ಕೈಬಿಟ್ಟಿದ್ದ. ಮುಸ್ಲಿಂ ಮಹಿಳೆಯರಂತೆ ಸೀತೆಯೂ ನೋವನ್ನು ಅನುಭವಿಸಿದ್ದಳು,” ಎಂದು ಸಂಸದ ಹುಸೇನ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ವ್ಯಾಪಕ ಖಂಡನೆ ವ್ಯಕ್ತಪಡಿಸಿತ್ತು.

“ಹುಸೇನ್ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ಹೇಳಿಕೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿವರಣೆ ನೀಡುವ ಅಗತ್ಯವಿಲ್ಲ,” ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, “ಈ ಹಿಂದೆಯೂ ಹಲವು ಮಂದಿ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಸೀತೆ ಕುರಿತಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ‘ಸೀತೆ ಪ್ರನಾಳ ಶಿಶು’ (ಟೆಸ್ಟ್ ಟ್ಯೂಬ್ ಬೇಬಿ) ಎಂದು ಹೇಳಿದ್ದರು. ಅಲ್ಲದೇ, ‘ಸೀತೆ ಕಾಲ್ಪನಿಕ ಪಾತ್ರ’ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಆ ಹೇಳಿಕೆಗಳ ಕುರಿತು ಯಾರೊಬ್ಬರು ಚಕಾರ ಎತ್ತಲಿಲ್ಲ,” ಎಂದು ತಿರುಗೇಟು ನೀಡಿದ್ದಾರೆ.

“ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ನಾನು ಈ ಹೇಳಿಕೆ ನೀಡಲಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ ಆ ಬಗ್ಗೆ ಕ್ಷಮಾಪಣೆ ಕೇಳುತ್ತೇನೆ,” ಎಂದು ಸಂಸದ ಹುಸೇನ್ ದಲ್ವಾಯಿ ಹೇಳಿದ್ದಾರೆ.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...