ನಾಳೆಯ ರಾಜ್ಯಸಭೆ ಉಪಸಭಾಪತಿ ಚುನಾವಣೆಗೆ ವಿಪಕ್ಷದಿಂದ ಕಾಂಗ್ರೆಸ್​ ಸಂಸದ ಹರಿಪ್ರಸಾದ್​ ನಾಮಪತ್ರ ಸಲ್ಲಿಕೆ

news18
Updated:August 8, 2018, 2:27 PM IST
ನಾಳೆಯ ರಾಜ್ಯಸಭೆ ಉಪಸಭಾಪತಿ ಚುನಾವಣೆಗೆ ವಿಪಕ್ಷದಿಂದ ಕಾಂಗ್ರೆಸ್​ ಸಂಸದ ಹರಿಪ್ರಸಾದ್​ ನಾಮಪತ್ರ ಸಲ್ಲಿಕೆ
news18
Updated: August 8, 2018, 2:27 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ.8): ನಾಳೆ ನಡೆಯುವ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿಎನ್​ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್​ ಅವರನ್ನು ಘೋಷಿಸಲಾಗಿದೆ. ಅವರ  ವಿರುದ್ಧ ಅಭ್ಯರ್ಥಿಯಾಗಿ ಕಾಂಗ್ರೆಸ್​ ಸಂಸದ ಬಿ.ಕೆ. ಹರಿಪ್ರಸಾದ್​ ಅವರನ್ನು ಸ್ಪರ್ಧೆಗಿಳಿಸಲು ಯುಪಿಎ ತೀರ್ಮಾನಿಸಿದ್ದು,ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಎನ್​ಡಿಎ ಮೈತ್ರಿಕೂಟದಿಂದ ರಾಜ್ಯಸಭೆ ಉಪಸಭಾಪತಿ ಚುನಾವಣೆಯ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ ​ಸಿಂಗ್​ ಅವರನ್ನು ಘೋಷಿಸಲಾಗಿತ್ತು. ವಿರೋಧಪಕ್ಷದ ಅಭ್ಯರ್ಥಿಯಾಗಿಎನ್​ಸಿಪಿ ಸಂಸದೆ  ವಂದನಾ ಚವಾನ್​ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಂದನಾ ಅವರ ಆಯ್ಕೆಯ ಬಗ್ಗೆ ಪಕ್ಷದೊಳಗೆ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಹರಿಪ್ರಸಾದ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈ ಮೂಲಕ ಎನ್​ಡಿಎ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆಯೊಡ್ಡಲು ವಿಪಕ್ಷಗಳು ಮುಂದಾಗಿವೆ.

ಉಪಸಭಾಪತಿ ಹುದ್ದೆಯ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ನಿನ್ನೆ ಸಭೆ ಕರೆಯಲಾಗಿತ್ತು. ಈ ವೇಳೆ ಎನ್​ಸಿಪಿ ಸಂಸದೆ ವಂದನಾ ಚವಾನ್​ ಅವರನ್ನು ಜಂಟಿ ಅಭ್ಯರ್ಥಿಯನ್ನಾಗಿ ಘೋಷಿಸಲು ಎನ್​ಡಿಎ ಹೊರತಾದ ಪಕ್ಷಗಳು ನಿರ್ಧರಿಸಿದ್ದವು. ಬಳಿಕ, ಈ ನಿರ್ಣಯದ ಬಗ್ಗೆ ಪ್ರಾದೇಶಿಕ ಪಕ್ಷಗಳಾದ ಟಿಆರ್​ಎಸ್​, ಬಿಜೆಡಿಯಂತಹ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದಾಗ ಒಮ್ಮತ ವ್ಯಕ್ತವಾಗಲಿಲ್ಲ. ಇದರಿಂದಾಗಿ ಹರಿಪ್ರಸಾದ್​ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಯಿತು.

ವಂದನಾ ಚವಾನ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಎನ್​ಡಿಎ ಅಭ್ಯರ್ಥಿಯ ಆಯ್ಕೆಯಿಂದ ಅಸಮಾಧಾನಗೊಂಡಿರುವ ಎನ್​ಡಿಎ ಮಿತ್ರಪಕ್ಷಗಳಾದ ಶಿವಸೇನೆಯ ಬೆಂಬಲವನ್ನು ಪಡೆಯಲು ವಿಪಕ್ಷಗಳು ಯೋಜನೆ ರೂಪಿಸಿದ್ದವು. ಅಂತಿಮಕ್ಷಣದಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಬದಲಾವಣೆಯಾಗಿದ್ದು, ಹರಿಪ್ರಸಾದ್​ ಅವರು ಹರಿವಂಶ್​ ಸಿಂಗ್​ ಅವರ ಎದುರು ಪ್ರಬಲ ಸ್ಪರ್ಧಿಯಾಗಲಿದ್ದಾರಾ ಎಂದು ನೋಡಬೇಕಿದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...