• Home
  • »
  • News
  • »
  • national-international
  • »
  • ಬೆದರಿಕೆಯೊಡ್ಡಿದ ಕಾಂಗ್ರೆಸ್ ಶಾಸಕಿಗೆ ಡೋಂಟ್ ಕೇರ್ ಎಂದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್

ಬೆದರಿಕೆಯೊಡ್ಡಿದ ಕಾಂಗ್ರೆಸ್ ಶಾಸಕಿಗೆ ಡೋಂಟ್ ಕೇರ್ ಎಂದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್

ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು ಮತ್ತು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ

ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು ಮತ್ತು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ

ಛತ್ತೀಸ್​ಗಢದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ ಅವರನ್ನು ಸುತ್ತುವರೆದ ಶಾಸಕಿ ಶಕುಂತಲಾ ಸಾಹು ಅವರ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕಿಯೂ ಐಪಿಎಸ್​ ಅಧಿಕಾರಿಯ ವಿರುದ್ಧ ಕೂಗಾಡಿದ್ದಾರೆ.

  • Share this:

ಛತ್ತೀಸ್​ಗಢ (ಫೆ. 15): ಕಾರ್ಮಿಕನೊಬ್ಬನ ಸಾವಿನ ಕಾರಣಕ್ಕೆ ಛತ್ತೀಸ್​ಗಢದ ಕಾಂಗ್ರೆಸ್ ಶಾಸಕಿ ಮತ್ತು ಮಹಿಳಾ ಐಪಿಎಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ಸಾವನ್ನಪ್ಪಿದ ಕಾರ್ಮಿಕನ ವಿಚಾರಕ್ಕೆ ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ ವಿರುದ್ಧ ಎಲ್ಲರ ಮುಂದೆ ಕೂಗಾಡಿದ್ದಾರೆ. ಇದಕ್ಕೆ ಐಪಿಎಸ್​ ಅಧಿಕಾರಿ ನೀಡಿದ ಉತ್ತರ ವೈರಲ್ ಆಗಿದೆ.


ಸಿಮೆಂಟ್ ಫ್ಯಾಕ್ಟರಿಯ ಸಾವಿನ ಬಗ್ಗೆ ವಾಗ್ವಾದಗಳು ಏರ್ಪಟ್ಟಿತ್ತು. ಈ ವೇಳೆ ಮಹಿಳಾ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ ಅವರನ್ನು ಸುತ್ತುವರೆದ ಶಾಸಕಿ ಶಕುಂತಲಾ ಸಾಹು ಅವರ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕಿಯೂ ಐಪಿಎಸ್​ ಅಧಿಕಾರಿಯ ವಿರುದ್ಧ ಕೂಗಾಡಿದ್ದಾರೆ. ಅಲ್ಲದೆ, 'ನಿನ್ನನ್ನು ಸುಮ್ಮನೆ ಬಿಡೋದಿಲ್ಲ, ಒಂದು ಕೈ ನೋಡ್ಕೊಳ್ತೀನಿ. ನಿನ್ನ ಸ್ಥಾನವೇನೆಂದು ನಿನಗೆ ತೋರಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದಾರೆ. ಆ ಬೆದರಿಕೆಗೆ ಹೆದರದ ಅಂಕಿತಾ ಶರ್ಮ 'ಯಾರಿಗೆ ಬೇಕಾದರೂ ಹೇಳಿಕೊಳ್ಳಿ, ಐ ಡೋಂಟ್ ಕೇರ್' ಎಂದಿದ್ದಾರೆ.


ಇದನ್ನೂ ಓದಿ: ಸಾಲದ ಸುಳಿಯಲ್ಲಿ ಸಿಲುಕಿದ್ದವನಿಗೆ ಬಂಪರ್ ಲಾಟರಿ; ಕೇರಳದ ದಿನಗೂಲಿ ಕಾರ್ಮಿಕ ಈಗ 12 ಕೋಟಿ ಒಡೆಯ!ಸಿಮೆಂಟ್​ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಆತನ ಸಾವಿಗೆ ನ್ಯಾಯ ಕೊಡಿಸುವಂತೆ ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಪೊಲೀಸ್ ಸ್ಟೇಷನ್​ನ ಮೇಲೂ ದಾಳಿ ನಡೆಸಲು ಮುಂದಾಗಿದ್ದರು. ಈ ವೇಳೆ ಕಸಬೋಲ್​ನ ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು ಕೂಡ ಪ್ರತಿಭಟನಾಕಾರರ ಪರವಾಗಿ ನಿಂತು ಅಧಿಕಾರಿಗಳ ವಿರುದ್ಧ ಧ್ವನಿಯೆತ್ತಿದರು. ಈ ವೇಳೆ ಮಾತಿನ ಭರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಅಂಕಿತಾ ಸಿಂಗ್​ಗೆ ಬೆದರಿಕೆಯನ್ನೂ ಹಾಕಿದರು.


ಇದನ್ನೂ ಓದಿ: 105ನೇ ವಯಸ್ಸಿನಲ್ಲಿ 4ನೇ ಕ್ಲಾಸ್​ ಪಾಸಾದ ಕೇರಳದ ಅಜ್ಜಿ; ಶತಾಯುಷಿಯ ಅಂಕ ನೋಡಿದರೆ ಅಚ್ಚರಿ ಪಡ್ತೀರ!


ಶಾಸಕಿ ಶಕುಂತಲಾ ಅವರ ಬೆದರಿಕೆಗೆ ಅದೇ ಧಾಟಿಯಲ್ಲಿ ಉತ್ತರಿಸಿದ ಅಂಕಿತಾ ಸಿಂಗ್, ನಾವೇನೂ ತಪ್ಪು ಮಾಡಿಲ್ಲ. ಕಾನೂನಿನ ಪ್ರಕಾರವೇ ನಡೆದುಕೊಂಡಿದ್ದೇವೆ. ನೀವು ನನ್ನ ವಿರುದ್ಧ ಯಾರಿಗೆ ಬೇಕಾದರೂ ದೂರು ನೀಡಿ. ನಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ.

Published by:Sushma Chakre
First published: