ಕಳಪೆ ರಸ್ತೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಮಣ್ಣು ಸುರಿದ ಮಹಾರಾಷ್ಟ್ರದ ಕಾಂಗ್ರೆಸ್​ ಶಾಸಕ

ಪ್ರಧಾನಿ ಮೋದಿ ಅವರೇ ಮೌನ್ನೆ ಸಂಸತ್ತಿನಲ್ಲಿ ಮಾತನಾಡಿ, ಹಲ್ಲೆ ಮಾಡಿದವರು ಯಾರ ಮಗನಾದರೇನು. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದರು.

HR Ramesh | news18
Updated:July 4, 2019, 4:23 PM IST
ಕಳಪೆ ರಸ್ತೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಮಣ್ಣು ಸುರಿದ ಮಹಾರಾಷ್ಟ್ರದ ಕಾಂಗ್ರೆಸ್​ ಶಾಸಕ
ಎಂಜಿನಿಯರ್ ಮೇಲೆ ಮಣ್ಣು ಸುರಿಯುತ್ತಿರುವ ಶಾಸಕ
HR Ramesh | news18
Updated: July 4, 2019, 4:23 PM IST
ಮುಂಬೈ: ಮಧ್ಯಪ್ರದೇಶದ ಇಂಧೋರ್​ನಲ್ಲಿ ಬಿಜೆಪಿ ಶಾಸಕ ಆಕಾಶ್​ ವಿಜಯ್​ವಾಗಿಯಾ ಅವರು ಸರ್ಕಾರಿ ಅಧಿಕಾರಿಗಳ ಮೇಲೆ ಬ್ಯಾಟ್​ನಿಂದ ಹಲ್ಲೆ ನಡೆಸಿದ ಬೆನ್ನಲ್ಲೇ ಅಂತಹದ್ದೆ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕಾಂಗ್ರೆಸ್​ ಶಾಸಕ ನಿತೇಶ್​ ನಾರಾಯಣ ರಾನೆ ಅವರು ತಮ್ಮ ಬೆಂಬಲಿಗರೊಂದಿಗೆ ಮುಂಬೈ-ಗೋವಾ ಮುಖ್ಯರಸ್ತೆಯಲ್ಲಿ ಎಂಜಿನಿಯರ್​ ಮೇಲೆ ಮಣ್ಣನ್ನು ಸುರಿದು ಗೂಂಡಾ ವರ್ತನೆ ತೋರಿದ್ದಾರೆ.

ನಿತೇಶ್​ ರಾನೆ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ನಾರಾಯಣ ರಾನೆ ಅವರ ಮನನಾಗಿದ್ದಾರೆ.


Loading...


ರಸ್ತೆ ನಿರ್ಮಾಣದ ಕಳಪೆ ಕಾಮಗಾರಿ ಕಂಡು ಕುಪಿತರಾದ ನಿತೇಶ್ ರಾನೆ ಅವರು ಎಂಜಿನಿಯರ್ ಅವರನ್ನು ಹಿಯ್ಯಾಳಿಸಿದ್ದಾರೆ. ನಿನಗೆ ಜನರ ಪರಿಸ್ಥಿತಿ ಬಗ್ಗೆ ಗೊತ್ತಾ? ನಿನಗೆ ಬೇಗ ಪಿಲ್ಲರ್​ ಕಟ್ಟಿಬಿಡಬೇಕು. ಯಾರು ಈ ಮೋರಿಗಳನ್ನು ನಿರ್ಮಿಸಿದವರು. ಇಲ್ಲಿ ನೀರು ಹೇಗೆ ಹರಿಯುತ್ತದೆ. ಯಾಕಿಷ್ಟು ನಿರ್ಲಕ್ಷ್ಯ ವಹಿಸಿದ್ದೀರಾ. ನಿನಗೆ ಗೊತ್ತಾ, ಈ ರಸ್ತೆಯಲ್ಲಿ ಎಷ್ಟು ಜನರು ಓಡಾಡುತ್ತಾರೆ ಎಂದು ಕೋಪದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ.ಇದನ್ನು ಓದಿ: ಯಾರ ಮಗನಾದರೇನಂತೆ, ಗೂಂಡಾ ಪ್ರವೃತ್ತಿ ತೋರಿದ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗೀಯ ವಿರುದ್ಧ ಮೋದಿ ಮಾತು

ನೀನು ಮಾತ್ರ ಶುಚಿಯಾದ ಬಟ್ಟೆಯನ್ನು ಹಾಕಿಕೊಂಡು, ಎಸಿ ಕಾರಿನಲ್ಲಿ ಓಡಾಡುತ್ತಿಯಾ. ಜನಗಳು ಈ ಕೊಳಕು ಮಣ್ಣಿನಲ್ಲಿ ಜೀವನ ನಡೆಸಬೇಕಾ ಎಂದು ಶಾಸಕರು ಎಂಜಿನಿಯರ್​ಗೆ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಬೆಂಬಲಿಗರು ಬಕೆಟ್​ನಲ್ಲಿ ಮಣ್ಣು ತುಂಬಿಕೊಂಡು ಬಂದು, ಎಂಜಿನಿಯರ್ ಮೇಲೆ ಸುರಿದಿದ್ದಾರೆ. ಶಾಸಕರು ಕೂಡ ಬಕೆಟ್​ ಮಣ್ಣನ್ನು ಅವರ ಮೇಲೆ ಸುರಿದಿದ್ದಾರೆ.

ವಾರದ ಹಿಂದೆ ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕ ಕೈಲಾಶ್​ ವಿಜಯ್​ವಾಗಿಯಾ ಅವರ ಮಗ ಹಾಗೂ ಶಾಸಕ ಆಕಾಶ್ ವಿಜಯ್​ವಾಗಿಯಾ ಅವರು, ಇಂಧೋರ್​ನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸ್ಥಳ ಪರಿಶೀಲನೆಗೆ ಬಂದ ಪಾಲಿಕೆ ಅಧಿಕಾರಿಗಳನ್ನು ಬ್ಯಾಟ್​ನಿಂದ ಥಳಿಸಿದ್ದರು. ಈ ಘಟನೆಗೆ ದೇಶವ್ಯಾಪಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಮೌನ್ನೆ ಸಂಸತ್ತಿನಲ್ಲಿ ಮಾತನಾಡಿ, ಹಲ್ಲೆ ಮಾಡಿದವರು ಯಾರ ಮಗನಾದರೇನು. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದರು.

First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...