• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಬಾಯಲ್ಲಿ ನೋಟಿಟ್ಟುಕೊಂಡು ಡ್ಯಾನ್ಸರ್​ಗೆ ತುಟಿಯಿಂದ ತೆಗೆಯಲು ಹೇಳಿದ ಕಾಂಗ್ರೆಸ್​ ಶಾಸಕ! ವಿಡಿಯೋ ವೈರಲ್

Viral Video: ಬಾಯಲ್ಲಿ ನೋಟಿಟ್ಟುಕೊಂಡು ಡ್ಯಾನ್ಸರ್​ಗೆ ತುಟಿಯಿಂದ ತೆಗೆಯಲು ಹೇಳಿದ ಕಾಂಗ್ರೆಸ್​ ಶಾಸಕ! ವಿಡಿಯೋ ವೈರಲ್

ಕಾಂಗ್ರೆಸ್ ಶಾಸಕನ ನೃತ್ಯ

ಕಾಂಗ್ರೆಸ್ ಶಾಸಕನ ನೃತ್ಯ

ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ಶಾಸಕ ಶಿವದಯಾಳ್ ಬಗ್ರಿ ಅವರು ಮಹಿಳಾ ನರ್ತಕಿಯೊಂದಿಗೆ ಕೈ ಕೈ ಜೋಡಿಸಿ ನೃತ್ಯ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Madhya Pradesh, India
  • Share this:

ಮಧ್ಯಪ್ರದೇಶ: ಜನ ಪ್ರತಿನಿಧಿಗಳು (Public Representatives) ಸಭೆ ಸಮಾರಂಭದಲ್ಲಿ ಸಭ್ಯತೆಯಿಂದ ವರ್ತಿಸಬೇಕು. ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಆದರೆ ಇಲ್ಲೊಬ್ಬ ಜನಪ್ರತಿನಿಧಿ ತನ್ನ ಸುತ್ತಲೂ ಜನರಿದ್ದಾರೆ ಎಂಬುದನ್ನೇ ಮರೆತು ಅಸಭ್ಯವಾಗಿ ವರ್ತಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನೃತ್ಯ (Dance) ಮಾಡುತ್ತಿದ್ದ ಮಹಿಳೆಯೊಂದಿಗೆ ನೃತ್ಯ ಮಾಡಿದ್ದಲ್ಲದೆ, ಆಕೆಗೆ ಚುಂಬಿಸಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರೊಂದಿಗೆ ಸ್ಥಳೀಯ ಶಾಸಕ (MLA) ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ವಿಡಿಯೋ ಕೂಡ ತೆಗೆದಿದ್ದಾರೆ. ಆದರೆ ನೃತ್ಯ ಮಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕನೊಬ್ಬ (Congress MLA) ನೃತ್ಯಗಾರ್ತಿಗೆ ಹಣವನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದು ಆಕೆಗೆ ಬಾಯಲ್ಲಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.


ವೈರಲ್ ಆಗಿರುವ ವಿಡಿಯೋದಲ್ಲಿ ಮಧ್ಯಪ್ರದೇಶದ ಗುನ್ನೂರ್‌ನ ಕಾಂಗ್ರೆಸ್ ಶಾಸಕ ಶಿವದಯಾಳ್ ಬಗ್ರಿ ಅವರು ಮಹಿಳಾ ನರ್ತಕಿಯೊಂದಿಗೆ ಕೈ ಕೈ ಜೋಡಿಸಿ ನೃತ್ಯ ಮಾಡಿದ್ದಾರೆ. ಈ ವೇಳೆ ಡ್ಯಾನ್ಸರ್​ ಟಿಪ್ಸ್​ಅನ್ನು ತನ್ನ ಲಿಪ್ಸ್​ನಿಂದ ಕೊಟ್ಟಿದ್ದಾರೆ. ಶಾಸಕನ ಹುಚ್ಚು ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಪಕ್ಷದ ಕಾರ್ಯಕರ್ತನಿಂದಲೇ ವೈರಲ್


ಈ ಪರಿಪೂರ್ಣ ದೃಶ್ಯವನ್ನು ಕಣ್ಣಾರೆ ಕಂಡ ಅವರದೇ ಪಕ್ಷದ ಕಾರ್ಯಕರ್ತರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅವರು ಹೆಚ್ಚು ಚಪ್ಪಾಳೆ ತಟ್ಟಿ ಪ್ರೇರೇಪಿಸುತ್ತಿದ್ದರು. ಆದರೆ ಈ ವಿಡಿಯೋ ತೆಗೆಯುತ್ತಿದ್ದ ಮತ್ತೊಬ್ಬ ಕಾರ್ಯಕರ್ತ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಶಾಸಕನ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Naxal Attack: ಛತ್ತೀಸ್​ಗಢದಲ್ಲಿ ಮುಂದುವರಿದ ನಕ್ಸಲರ ಅಟ್ಟಹಾಸ! 10 ಯೋಧರು​ ಸೇರಿದಂತೆ 11 ಮಂದಿ ಹುತಾತ್ಮ


ಬಾಯಲ್ಲಿ ನೋಟು ಇಟ್ಟು ತೆಗೆಯಲು ಹೇಳಿದ ಶಾಸಕ


ಈ ವಿಡಿಯೋದಲ್ಲಿ ಶಾಸಕ ಬಗ್ರಿ ರಾಯ್​ ಡ್ಯಾನ್ಸರ್ ಜೊತೆ ಡಿಫರೆಂಟ್ ಆಗಿ ನೃತ್ಯ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಶಾಸಕ ತನ್ನ ಬಾಯಿಯಲ್ಲಿ ನೋಟನ್ನು ಕಚ್ಚಿ ಹಿಡಿದು ಅದನ್ನು ಡ್ಯಾನ್ಸರ್​ಗೆ ತನ್ನ ತನ್ನ ತುಟಿಗಳಿಂದ  ತೆಗೆಯುವಂತೆ ಹೇಳಿದ್ದಾನೆ. ನಂತರ ಡ್ಯಾನ್ಸರ್​ ಅವರು ಹೇಳಿದಂತೆ ಬಾಯಲ್ಲಿ ತೆಗೆದಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಶಾಸಕರ ಮೇಲೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದು  ಎಲ್ಲೆ ಮೀರಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.




ಬಿಜೆಪಿ ಟೀಕೆ


ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದ ಮೂಲವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ, ಆದರೆ ಗುನ್ನೌರ್ ಶಾಸಕ ಶಿವದಯಾಳ್ ಕುರ್ತಾ-ಪೈಜಾಮಾದಲ್ಲಿ ರಾಯ್ ನರ್ತಕಿಯೊಂದಿಗೆ ನೃತ್ಯ ಮಾಡುತ್ತಿದ್ದಾರೆ..ನೃತ್ಯದ ವೇಳೆ ಶಾಸಕರ ಆಕ್ಷೇಪಾರ್ಹ ಮತ್ತು ಅಸಭ್ಯ ವರ್ತನೆಯ ಬಗ್ಗೆ ಬಿಜೆಪಿ ರಾಜ್ಯ ಸಂಘಟನೆಯು ಪಿಸಿಸಿ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ಟ್ಯಾಗ್ ಮಾಡಿದ್ದು, ನಿಮ್ಮ ಶಾಸಕನ ಈ ವರ್ತನೆ ಸೂಕ್ತವೇ? ಎಂದು ಪ್ರಶ್ನಿಸಿದೆ.



4 ವರ್ಷಗಳ ಹಳೆಯ ವಿಡಿಯೋ ಎಂದ ಶಾಸಕ

top videos


    ಶಾಸಕ ಶಿವದಯಾಳ್ ಬಗ್ರಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಮಾಧ್ಯಮಗಳು ಶಾಸಕರನ್ನು ಇದರ ಬಗ್ಗೆ ಪ್ರಶ್ನಿಸಿವೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಈ ವಿಡಿಯೋ ನಾಲ್ಕು ವರ್ಷಗಳ ಹಳೆಯದು ಎಂದು ಹೇಳಿದ್ದಾರೆ. ವಿಧಾನಸಭಾ ಕ್ಷೇತ್ರದ ಸಮಣ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ನೃತ್ಯ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ನಾಲ್ಕು ವರ್ಷಗಳ ಹಳೆಯ ವೀಡಿಯೊವನ್ನು ತಮ್ಮ ಪ್ರತಿಸ್ಪರ್ಧಿ ನನಗೆ ಟಿಕೆಟ್​ ಸಿಗದಿರುವಂತೆ ಮಾಡಲು ದುರ್ಬಳಕೆ ಮಾಡಿಕೊಳ್ಳುದ್ದಾರೆ. ಬಿಜೆಪಿ ಕೂಡ ಹಳೆಯ ವಿಡಿಯೋ ಬಳಸಿಕೊಂಡು ನನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    First published: