• Home
  • »
  • News
  • »
  • national-international
  • »
  • MCD Elections Result 2022: ಸೋತರೂ 'ಕಿಂಗ್ ಮೇಕರ್' ಆಗಲಿದೆ ಕಾಂಗ್ರೆಸ್​, ಹೇಗೆ? ಇಲ್ಲಿದೆ ನೋಡಿ ವಿವರ

MCD Elections Result 2022: ಸೋತರೂ 'ಕಿಂಗ್ ಮೇಕರ್' ಆಗಲಿದೆ ಕಾಂಗ್ರೆಸ್​, ಹೇಗೆ? ಇಲ್ಲಿದೆ ನೋಡಿ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 8 ಸ್ಥಾನಗಳನ್ನು ಪಡೆದಿತ್ತು. ಆದರೆ ಬಿಜೆಪಿ 34 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಬಹುಮತಕ್ಕಿಂತ 2 ಸ್ಥಾನ ಹಿಂದೆ ಬಿದ್ದಿದ್ದ ಬಿಜೆಪಿಗೆ ಅಂದು ಸರ್ಕಾರ ರಚಿಸಲು ಸಾಧ್ಯವಾಗದೆ ಕಾಂಗ್ರೆಸ್ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ರಚಿಸಿತ್ತು. ಅಂದು ಸೋತರೂ ಕಾಂಗ್ರೆಸ್ 'ಕಿಂಗ್ ಮೇಕರ್' ಆಗಿತ್ತು.

ಮುಂದೆ ಓದಿ ...
  • Share this:

ನವದೆಹಲಿ(ಡಿ.07): ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ 250 ಸ್ಥಾನಗಳ ಚುನಾವಣಾ ಟ್ರೆಂಡ್‌ಗಳು (MCD Elections Result 2022) ವೇಗವಾಗಿ ಹೊರಬರುತ್ತಿವೆ. ಈ ಟ್ರೆಂಡ್‌ಗಳಲ್ಲಿ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುತ್ತಿಲ್ಲ. ಬಿಜೆಪಿ ಮತ್ತು ಆಮ್ ಆದ್ಮಿ (Aam Aadmi) ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಚುನಾವಣಾ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ (Congress) ಕೇವಲ 5 ರಿಂದ 7 ವಾರ್ಡ್‌ಗಳಿಗೆ ಸೀಮಿತವಾದಂತಿದೆ. ಹೀಗಿದ್ದರೂಈ ಚುನಾವಣೆಯಲ್ಲಿ ಕಾಂಗ್ರೆಸ್ 'ಕಿಂಗ್ ಮೇಕರ್' ಆಗಲಿದೆ ಎಂಬ ಮಾತು ಜೋರಾಗಿಯೇ ಸದ್ದು ಮಾಡುತ್ತಿದೆ. ಒಂದು ವೇಳೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಕಡಿಮೆ ಅಂತರವಿದ್ದರೆ, ಸರ್ಕಾರ ರಚಿಸುವ ಕೀಲಿಕೈ ಕಾಂಗ್ರೆಸ್‌ಗೆ ಸಿಗಲಿದೆ.


ಏತನ್ಮಧ್ಯೆ, ಅಬುಲ್ ಫಜಲ್ ಎನ್‌ಕ್ಲೇವ್, ಜಾಕಿರ್ ನಗರ, ಮುಸ್ತಫಾಬಾದ್ ಮತ್ತು ಬ್ರಜ್‌ಪುರಿ ವಾರ್ಡ್‌ಗಳು ಸೇರಿದಂತೆ ಸುಮಾರು 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ಸೀಟುಗಳನ್ನು ಗೆದ್ದು ಚುನಾವಣಾ ಫಲಿತಾಂಶದ ಅಂತಿಮ ಸಂದರ್ಭದಲ್ಲಿ 10 ಸ್ಥಾನಕ್ಕೆ ತಲುಪಿದರೂ, ಎಂಸಿಡಿಯಲ್ಲಿ ಸರ್ಕಾರ ರಚಿಸುವ ವಿಚಾರದಲ್ಲಿ ಕಾಂಗ್ರೆಸ್​ 'ಕಿಂಗ್ ಮೇಕರ್' ಆಗಲಿದೆ. ಅಬುಲ್ ಫಜಲ್ ಎನ್‌ಕ್ಲೇವ್ ಮತ್ತು ಜಾಕೀರ್ ನಗರದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಶಗುಫ್ತಾ ಚೌಹಾನ್ ಬಂಗಾರ್ ಮತ್ತು ಅಬುಲ್ ಫಜಲ್ ಎನ್‌ಕ್ಲೇವ್ ಅರೆಬಾದಿಂದ ಗೆದ್ದಿದ್ದಾರೆ.


ಬಹುಮತ ಗಳಿಸೋದು ಡೌಟ್


ಏತನ್ಮಧ್ಯೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಬಹುಮತದಿಂದ ಹಿಂದುಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತನ್ನ ಟ್ರೆಂಡ್‌ಗಳನ್ನು ಗೆಲುವಾಗಿ ಪರಿವರ್ತಿಸಿದರೆ 2013ರ ವಿಧಾನಸಭಾ ಚುನಾವಣೆಯಂತೆ ಮತ್ತೊಮ್ಮೆ ‘ಕಿಂಗ್‌ಮೇಕರ್’ ಆಗಬಹುದು. ದೆಹಲಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ 2013 ರಲ್ಲಿ 70 ವಿಧಾನಸಭಾ ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದಿತ್ತು.


2013ರ ಪರಿಸ್ಥಿತಿ ಮತ್ತೆ ಮರುಕಳಿಸುತ್ತಾ?


ಏತನ್ಮಧ್ಯೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಬಹುಮತದಿಂದ ಹಿಂದೆ ಸರಿಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತನ್ನ ಟ್ರೆಂಡ್‌ಗಳನ್ನು ಗೆಲುವಾಗಿ ಪರಿವರ್ತಿಸಿದರೆ 2013ರ ವಿಧಾನಸಭಾ ಚುನಾವಣೆಯಂತೆ ಮತ್ತೊಮ್ಮೆ ‘ಕಿಂಗ್‌ಮೇಕರ್’ ಆಗಬಹುದು. ದೆಹಲಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ 2013 ರಲ್ಲಿ 70 ವಿಧಾನಸಭಾ ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದಿತ್ತು.


ಅದೇ ಸಮಯದಲ್ಲಿ ಕಾಂಗ್ರೆಸ್‌ಗೆ ಆಗ ಕೇವಲ 8 ಸ್ಥಾನಗಳು ಬಂದಿದ್ದವು. ಆದರೆ ಬಿಜೆಪಿ 34 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಬಹುಮತಕ್ಕಿಂತ 2 ಸ್ಥಾನ ಹಿಂದೆ ಉಳಿದಿದ್ದ ಬಿಜೆಪಿಗೆ ಅಂದು ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ರಚಿಸಿತ್ತು. ಅಂದು ಸೋತರೂ ಕಾಂಗ್ರೆಸ್ ‘ಕಿಂಗ್ ಮೇಕರ್’ ಆಗಿತ್ತು.


ಯಾರನ್ನು ಬೆಂಬಲಿಸುತ್ತೆ ಕಾಂಗ್ರೆಸ್​?


ಈ ಬಾರಿಯೂ ಟ್ರೆಂಡ್ ಗಮನಿಸಿದರೆ ಯಾರಿಗೂ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೋತರೂ ‘ಕಿಂಗ್ ಮೇಕರ್’ ಪಾತ್ರ ವಹಿಸಬಹುದು. ಅವರು 2013ರಲ್ಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂಥ ನಿರ್ಧಾರ ತೆಗೆದುಕೊಳ್ಳುತ್ತಾರೋ ಅಥವಾ ಬೇರೆ ಮಾರ್ಗವನ್ನು ಅನುಸರಿಸುತ್ತಾರೋ ಕಾದು ನೋಡಬೇಕಿದೆ. ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು