HOME » NEWS » National-international » CONGRESS LOST DEPOSITS IN BOTH BENGAL SEATS WHERE RAHUL HELD RALLIES 3RD FRONT IN 85 PERCENTAGE SEATS MAK

Election Results 2021: ಪಶ್ಚಿಮ ಬಂಗಾಳದಲ್ಲಿ ಶೇ.85 ರಷ್ಟು ಕ್ಷೇತ್ರಗಳಲ್ಲಿ ಡೆಪಾಸಿಟ್​ ಕಳೆದುಕೊಂಡ ಕಾಂಗ್ರೆಸ್​ ಮೈತ್ರಿ!

ಚುನಾವಣೆಗೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.16.5 ರಷ್ಟು ಮತಗಳನ್ನು ಪಡೆಯಲು ವಿಫಲವಾದರೆ, ಆತ ಠೇವಣಿ ಕಳೆದುಕೊಳ್ಳುತ್ತಾನೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮೈತ್ರಿ​ 292 ಸ್ಥಾನಗಳ ಪೈಕಿ 42 ಸ್ಥಾನಗಳಲ್ಲಿ ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

news18-kannada
Updated:May 3, 2021, 3:18 PM IST
Election Results 2021: ಪಶ್ಚಿಮ ಬಂಗಾಳದಲ್ಲಿ ಶೇ.85 ರಷ್ಟು ಕ್ಷೇತ್ರಗಳಲ್ಲಿ ಡೆಪಾಸಿಟ್​ ಕಳೆದುಕೊಂಡ ಕಾಂಗ್ರೆಸ್​ ಮೈತ್ರಿ!
ರಾಹುಲ್​ ಗಾಂಧಿ ಚುನಾವಣಾ ಪ್ರಚಾರ.
  • Share this:
ಕೋಲ್ಕತ್ತಾ (ಮೇ 03); ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳು ಹೊರಬಿದ್ದಿವೆ. ಈ ಚುನಾವಣೆಯಲ್ಲಿ ಟಿಎಂಸಿ ಪಕ್ಷ ನಿರೀಕ್ಷೆಗೂ ಮೀರಿ ಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿದ್ದು, ಮಮತಾ ಬ್ಯಾನರ್ಜಿ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ಆದರೆ, ಬಿಜೆಪಿ ಸೋಲನುಭವಿಸಿದ್ದರೂ ಸಹ ಉತ್ತಮ ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟ್​ ಎಡಪಕ್ಷದ ಜೊತೆಗೆ ಮೈತ್ರಿ ಸಾಧಿಸಿ ಚುನಾವಣೆಗೆ ಇಳಿದಿದ್ದ ಕಾಂಗ್ರೆಸ್​​, ತಾನು ಸ್ಫರ್ಧಿಸಿದ ಶೇ.85 ರಷ್ಟು ಕ್ಷೇತ್ರಗಳಲ್ಲಿ ಠೇವಣಿಯನ್ನೂ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದೆ. ಇನ್ನೂ ರಾಹುಲ್ ಗಾಂಧಿ ಚುನಾವಣಾ ರ್ಯಾಲಿ ನಡೆಸಿದ್ದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.16.5 ರಷ್ಟು ಮತಗಳನ್ನು ಪಡೆಯಲು ವಿಫಲವಾದರೆ, ಆತ ಠೇವಣಿ ಕಳೆದುಕೊಳ್ಳುತ್ತಾನೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮೈತ್ರಿ​ 292 ಸ್ಥಾನಗಳ ಪೈಕಿ 42 ಸ್ಥಾನಗಳಲ್ಲಿ ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಮತ್ತೊಂದಡೆ ಕಾಂಗ್ರೆಸ್​ ಮತ್ತು ಎಡಪಕ್ಷಗಳ ಮೈತ್ರಿ ಕೂಟ ಪಶ್ಚಿಮ ಬಂಗಾಳದಲ್ಲಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆದ್ದಿದ್ದು, ತೃತೀಯ ರಂಗದ ಆಸೆಗೂ ತಣ್ಣೀರು ಎರಚಿದಂತಾಗಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಚುನಾವಣಾ ರ್ಯಾಲಿ ನಡೆಸಿದ್ದ, ಮಟಿಗರ-ನಕ್ಸಲ್ಬಾರಿ ಮತ್ತು ಗೋಲ್ಪೋಖರ್ ಎಂಬ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆ ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಕಾಂಗ್ರೆಸ್ ಒಂದು ದಶಕದಿಂದ ಮತಿಗರ-ನಕ್ಸಲ್ಬರಿಯಲ್ಲಿ ತನ್ನ ಅಧಿಕಾರವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿತ್ತು. ಆದರೆ ಸಿಟ್ಟಿಂಗ್ ಶಾಸಕ ಶಂಕರ್ ಮಲಾಕರ್ ಈ ಬಾರಿ ಫಲಿತಾಂಶದಲ್ಲಿ ಮೂರನೇ ಸ್ಥಾನ ನೂಕಲ್ಪಟ್ಟಿದ್ದಾರೆ. ಅವರು ಪಡೆದ ಮತ ಕೇವಲ ಶೇ.9. ಗೋಲ್‌ಪೋಖರ್‌ನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕೇವಲ ಶೇ.12ರಷ್ಟು ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕಾಂಗ್ರೆಸ್ ಇಲ್ಲಿ 2006 ರಿಂದ 2009 ಮತ್ತು 2011 ರಿಂದ 2016 ರವರೆಗೆ ಅಧಿಕಾರ ಹೊಂದಿತ್ತು.

ಮೂರು ಮಿತ್ರರಾಷ್ಟ್ರಗಳನ್ನು ಪ್ರತ್ಯೇಕವಾಗಿ ನೋಡಿದರೆ, ಎಡಪಂಥೀಯರು ಸ್ಪರ್ಧಿಸಿದ 170 ಸ್ಥಾನಗಳಲ್ಲಿ ಕೇವಲ 21 ಸ್ಥಾನಗಳಲ್ಲಿ, ಕಾಂಗ್ರೆಸ್ ತಾನು ಹೋರಾಡಿದ 90 ಸ್ಥಾನಗ ಪೈಕಿ 11 ಸ್ಥಾನಗಳಲ್ಲಿ ಮತ್ತು ಐಎಸ್ಎಫ್ 30 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಠೇವಣಿ ಉಳಿಸಿಕೊಂಡಿದೆ.

ಅಧಿಕಾರ ಉಳಿಸಿಕೊಂಡ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂಬುದು ಬಿಜೆಪಿ ಪಕ್ಷದ ಬಹುದಿನದ ಕನಸು. ಇದೇ ಕಾರಣಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಹತ್ತಾರು ರ್ಯಾಲಿ ನಡೆಸಿದ್ದರು. ಬೃಹತ್ ಚುನಾವಣಾ ಪ್ರಚಾರದ ಮೂಲಕ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದರು. ಆದರೆ, ಇಂದು ಬಂಗಾಳದ ಫಲಿತಾಂಶ ಹೊರಬಿದ್ದಿದ್ದು, ಕೊನೆಗೂ ಬಿಜೆಪಿಗೆ ಮುಖಭಂಗ ಮಾಡುವಲ್ಲಿ ಬಂಗಾಳದ ಮತದಾರ ಯಶಸ್ವಿಯಾಗಿದ್ದಾನೆ.

ಆದರೆ, ಕೆಲ ತಿಂಗಳ ಹಿಂದೆಯೇ ರಾಜಕೀಯ ತಜ್ಞ ಪ್ರಶಾಂತ್​ ಕಿಶೋರ್ ಈ ಭವಿಷ್ಯವನ್ನು ನುಡಿದಿದ್ದರು. 2020ರ ಡಿಸೆಂಬರ್ 21 ರಂದು ಮಾತನಾಡಿದ್ದ ಅವರು, " ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡಲಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರ ತ್ಯಜಿಸುತ್ತೇನೆ, ಬರೆದಿಟ್ಟುಕೊಳ್ಳಿ" ಎಂದು ಸವಾಲು ಹಾಕಿದ್ದರು. ಈ ಭವಿಷ್ಯ ಇದೀಗ ನಿಜವಾಗಿದೆ.ಇದನ್ನೂ ಓದಿ: Election Results 2021: ಬಂಗಾಳದಲ್ಲಿ ಮುಗ್ಗರಿಸಲಿದೆ ಬಿಜೆಪಿ, ಎರಡಂಕಿಯೂ ದಾಟುವುದಿಲ್ಲ; ನಿಜವಾಯ್ತು ಪ್ರಶಾಂತ್ ಕಿಶೋರ್ ಭವಿಷ್ಯ!

ಅವರು ಈ ಮಾತು ಹೇಳಿ ನಾಲ್ಕು ತಿಂಗಳ ನಂತರ ಅದು ನಿಜವಾಗುತ್ತಿದೆ. ಇಂದು ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು 294 ವಿಧಾನಸಭಾ ಕ್ಷೇತ್ರಗಳಲ್ಲಿ 204 ಸ್ಥಾನಗಳಲ್ಲಿ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿ ಜಯದತ್ತ ಮುನ್ನುಗ್ಗುತ್ತಿದೆ. ಆದರೆ ಬಿಜೆಪಿ 84 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ತಿಣುಕಾಡುತ್ತಿದೆ. ಇನ್ನು ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲದಿದ್ದರೂ ಈಗಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ 100 ಸ್ಥಾನಗಳಲ್ಲಿ ಗೆಲ್ಲುವುದು ಅಸಾಧ್ಯದ ಮಾತು. ಹಾಗಾಗಿ ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ನಿಜವಾಗಿದೆ.

ಈ ವರ್ಷದ ಫೆಬ್ರವರಿ 27 ರಂದು ಪ್ರಶಾಂತ್ ಕಿಶೋರ್ ತಮ್ಮ ಮಾತನ್ನು ಪುನರುಚ್ಚರಿಸಿದ್ದರು. "ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಕದನಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಜನರು ಸರಿಯಾದುದನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸ್ಪಷ್ಟ ಸಂದೇಶವನ್ನು ತಿಳಿಸಲು ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತಿದೆ. ನನ್ನ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದನ್ನು ಮಾಡಲು ಮೇ 2ರವರೆಗೆ ಕಾಯಿರಿ" ಎಂದು ಟ್ವೀಟ್ ಮಾಡಿದ್ದರು. ಆ ಮಾತು ಇಂದು ಸತ್ಯವಾಗಿದೆ.
Published by: MAshok Kumar
First published: May 3, 2021, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories