HOME » NEWS » National-international » CONGRESS LEADER SONIA GANDHI SLAMMING THE CENTRE FOR ITS VACCINE MANAGEMENT SESR

Sonia Gandhi: ಕೋವಿಡ್​ ಲಸಿಕೆ ರಫ್ತು ಪರಿಣಾಮ ದೇಶದಲ್ಲಿ ಕೊರತೆಯಾಗಿದೆ; ಸೋನಿಯಾ ಗಾಂಧಿ

ಕೋವಿಡ್ ಎರಡನೇ ಅಲೆ ಹರಡಲು ಕಾರಣ ಕೇಂದ್ರ ಸರ್ಕಾರ.  ಕೇಂದ್ರ ಸರ್ಕಾರದ ವಿಫಲ ನೀತಿಗಳಿಂದ ಎರಡನೇ ಅಲೆ ತೀವ್ರವಾಗಿದೆ.

news18-kannada
Updated:April 10, 2021, 4:22 PM IST
Sonia Gandhi: ಕೋವಿಡ್​ ಲಸಿಕೆ ರಫ್ತು ಪರಿಣಾಮ ದೇಶದಲ್ಲಿ ಕೊರತೆಯಾಗಿದೆ; ಸೋನಿಯಾ ಗಾಂಧಿ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ
  • Share this:
ದೆಹಲಿ (ಏ. 10): ಕಾಂಗ್ರೆಸ್​ ಆಡಳಿತದ ರಾಜ್ಯಗಳಲ್ಲಿ ಕೋವಿಡ್​ ಪರಿಸ್ಥಿತಿ ಪರಿಶೀಲನೆ ಮತ್ತು ಸಿದ್ಧತೆ ಕುರಿತು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಸಭೆ ನಡೆಸಿದರು. ವಿಡಿಯೋ ಸಂವಾದದ ಈ ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಹಾಜರಿದ್ದರು. ಸಭೆಯಲ್ಲಿ ಕೊರೋನಾ ಸೋಂಕಿನ ಪರೀಕ್ಷೆ, ಪತ್ತೆ ಮತ್ತು ಲಸಿಕೆಗೆ ಒತ್ತು ನೀಡುವಂತೆ ಸೋನಿಯಾ ಗಾಂಧಿ ತಿಳಿಸಿದರು. ಈ ವೇಳೆ ದೇಶದಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುತ್ತಿರುವವ ಎಷ್ಟು ಜನ ಎಂಬ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ನಡೆಯುತ್ತಿರುವ ಲಸಿಕೆ ವಿತರಣಾ ಕಾರ್ಯದ ಬಗ್ಗೆ ನಾವು ಹೆಚ್ಚಿನ ಗಮನಹರಿಸಬೇಕು. ತಜ್ಞರು ಈ ಲಸಿಕೆ ನೀಡಿದ್ದು, ಇದು ನಮ್ಮ ದೇಶಕ್ಕೆ ಅವರು ನೀಡಿದ ಕೊಡುಗೆಯಾಗಿದೆ ಎಂದರು. ಇದೇ ವೇಳೆ ಕೋವಿಡ್​ ನಿಯಾವಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.

ಕೇಂದ್ರದ ಲಸಿಕೆ ವಿತರಣಾ ನಿರ್ವಹಣೆ ಬಗಗೆ ಟೀಕಿಸಿದ ಸೋನಿಯಾ ಗಾಂಧಿ, ಪರಿಸ್ಥಿತಿ ಮೋದಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಲಸಿಕೆ ರಫ್ತು ಮಾಡಲಾಗಿದ್ದು, ದೇಶದಲ್ಲಿ ಲಸಿಕೆ ಶಾರ್ಟೆಜ್​ ಆಗಿದೆ. ಮಹಾರಾಷ್ಟ್ರ ಒಡಿಶಾ, ಆಂಧ್ರ ಪ್ರದೇಶ, ಪಂಜಾಬ್​, ರಾಜಸ್ಥಾನ್​, ಉತ್ತರ ಪ್ರದೇಶ್​, ಉತ್ತರಾಖಂಡ್​, ಛತ್ತೀಸ್​ಗಢ್​, ಬಿಹಾರದಲ್ಲಿ ಲಸಿಕೆ ಕೊರತೆ​ ಆಗಿದೆ ಎಂದರು

ಕಾಂಗ್ರೆಸ್​ ನಾಯಕ ರಂದೀಪ್​ ಸಿಂಗ್​ ಸರ್ಜೇವಾಲ ಮಾತನಾಡಿ, ದೇಶದಲ್ಲಿನ ಕೋವಿಡ್​ ಎರಡನೇ ಅಲೆ ಬಗ್ಗೆ ರಾಹುಲ್​ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಕೋವಿಡ್ ಎರಡನೇ ಅಲೆ ಹರಡಲು ಕಾರಣ ಕೇಂದ್ರ ಸರ್ಕಾರ.  ಕೇಂದ್ರ ಸರ್ಕಾರದ ವಿಫಲ ನೀತಿಗಳಿಂದ ಎರಡನೇ ಅಲೆ ತೀವ್ರವಾಗಿದೆ. ಸೋಂಕು ಹೆಚ್ಚಾದ ಹಿನ್ನಲೆ ವಲಸೆ ಕಾರ್ಮಿಕರು ಮತ್ತೆ ಪಲಾಯನ ಮಾಡಬೇಕಾಗುತ್ತಿದೆ. ವ್ಯಾಕ್ಸಿನೇಷನ್ ಹೆಚ್ಚಿಸುವುದರ ಜೊತೆಗೆ ಕಾರ್ಮಿಕರ ಕೈಯಲ್ಲಿ ಹಣವನ್ನು ನೀಡುವುದು ಅವಶ್ಯಕ. ಸಾಮಾನ್ಯ ಜನರ ಜೀವನ ಮತ್ತು ದೇಶದ ಆರ್ಥಿಕತೆಗಾಗಿ ಕಾರ್ಮಿಕರ ಕೈಗೆ ಹಣ ನೀಡಬೇಕು. ಆದರೆ ಅಹಂಕಾರಿ ಸರ್ಕಾರ ಉತ್ತಮ ಸಲಹೆಗಳಿಂದ ಗಾಬರಿಗೊಳ್ಳುತ್ತಿದೆ ಎಂದು ಟೀಕಿಸಿದರು
Published by: Seema R
First published: April 10, 2021, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories