• Home
  • »
  • News
  • »
  • national-international
  • »
  • ದೆಹಲಿ ಗಲಭೆ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಸಲ್ಮಾನ್​ ಖುರ್ಷಿದ್​ ಹೆಸರು

ದೆಹಲಿ ಗಲಭೆ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಸಲ್ಮಾನ್​ ಖುರ್ಷಿದ್​ ಹೆಸರು

ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​

ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಉಮಾ ಖಾಲಿದ್​, ಸಲ್ಮಾನ್​ ಖುರ್ಷಿದ್​​, ನದೀಮ್​ ಖಾನ್​ ಜನರ ಗುಂಪನ್ನು ಉದ್ದೇಶಿಸಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು  ಸಾಕ್ಷ್ಯಗಳು ತಿಳಿಸಿವೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

  • Share this:

    ನವದೆಹಲಿ (ಸೆ.24): ದೆಹಲಿ ಗಲಭೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್​ ಖುರ್ಷಿದ್​ ಹೆಸರು ಕೂಡ ಸೇರಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಈ ಪೌರತ್ವ ತಿದ್ದುಪಡಿ ವಿರೋಧ ಗಲಭೆಯಲ್ಲಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಆರೋಪದ ಮೇಲೆ ಅವರ ಹೆಸರು ಚಾರ್ಜ್​ ಶೀಟ್​ನಲ್ಲಿ ಸೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಸಾವಿರ ಪುಟಗಳ ಚಾರ್ಜ್​ ಶೀಟ್​ ಅನ್ನು ಸೆ.17ರಂದು ಪೊಲೀಸರು ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಉಮಾ ಖಾಲಿದ್​, ಸಲ್ಮಾನ್​ ಖುರ್ಷಿದ್​​, ನದೀಮ್​ ಖಾನ್​ ಜನರ ಗುಂಪನ್ನು ಉದ್ದೇಶಿಸಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು  ಸಾಕ್ಷ್ಯಗಳು ತಿಳಿಸಿವೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಇದೇ ವೇಳೆ ಸಾಕ್ಷಿಗಳ  ಹೆಸರನ್ನು  ಮರೆ ಮಾಚಲಾಗಿದೆ. ಕಾಂಗ್ರೆಸ್​ ನಾಯಕರು  ಯಾವ ವಿಷಯದ ಕುರಿತು ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂಬ ಬಗ್ಗೆ ಉಲ್ಲೇಖಿಸಿಲ್ಲ.


    ಇನ್ನು ಈ ಸಾಕ್ಷಿದಾರ ಕೂಡ ಗಲಭೆಯ ಪಿತೂರಿಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾಕ್ಷಿ ಹೇಳಿಕೆಗಳನ್ನು ಮ್ಯಾಜಿಸ್ಟೇಟ್​ ಮುಂದೆ ಕ್ರಿಮಿನಲ್​ ಪ್ರಸಿಡ್ಯೂರ್​ ಸೆಕ್ಷನ್​ 164ರ ಅಡಿ ದಾಖಲಿಸಲಾಗಿದ್ದು.  ಖುರ್ಷಿದ್​ ಘಟನಾ ಸ್ಥಳದಲ್ಲಿ ಗುಂಪನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ಮತ್ತೊಬ್ಬ ಸಾಕ್ಷಿ ಕೂಡ ತಿಳಿಸಿದ್ದಾರೆ ಎಂದು ಚಾರ್ಚ್​ ಶೀಟ್​ನಲ್ಲಿ ದಾಖಲಿಸಲಾಗಿದೆ.


    ಚಾರ್ಜ್​ ಶೀಟ್​ನಲ್ಲಿ ತಮ್ಮ ಹೆಸರು ಕೇಳಿ ಬಂದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ, ಕಸವನ್ನು ಸಂಗ್ರಹಿಸುವಾಗ ಕೆಲವೊಮ್ಮೆ ಹೊಲಸನ್ನು ಪಡೆಯುತ್ತೀರಾ ಯಾವುದೇ ಕಸವನ್ನು ವ್ಯಕ್ತಿಗಳು ನೀಡಿದ ಹೇಳಿಕೆಗಳಿಂದ ಬೆಂಬಲಿಸಬಹುದು ಎಂದಿರುವ ಅವರು, ಇದೇ ವೇಳೆ ಪ್ರಚೋದನಾಕಾರಿ ಹೇಳಿಕೆ ಎಂದರೇನು ಎಂದು ತಿಳಿಯಲು ನನಗೆ ಕುತೂಹಲವಿದೆ ಎಂದಿದ್ದಾರೆ.


    ಇದನ್ನು ಓದಿ: ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಬದ್ಧ; ಆದರೆ ಕಾನೂನಾಗಿ ಸೇರಿಸುವುದಿಲ್ಲ: ಕೇಂದ್ರ ಕೃಷಿ ಸಚಿವ


    ನಾನು ಸಾಂವಿಧಾನಿಕ ನ್ಯಾಯಸಮ್ಮತವಾಗಿ ಬೆಂಬಲಿಸಲು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಈಗ ಸದ ಸಂಗ್ರಹಣೆ ನಡೆಸುತ್ತಿರುವ ಪ್ರಯತ್ನ ನಡೆಯುತ್ತಿದೆ. ಕಸ ಸಂಗ್ರಹಿಸುತ್ತಿರುವವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ನೋವಿದೆ. ಕಸವನ್ನು ಎತ್ತಿಕೊಂಡು ಅದರ ಗುಣಮಟ್ಟದ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಇದೇ ವೇಳೆ ಚಾಟಿ ಬೀಸಿದ್ದಾರೆ.


    ಕಳೆದ ಫೆಬ್ರವರಿಯಲ್ಲಿ ನಡೆದ ಈ ಗಲಭೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸಿಪಿಎಂ ನಾಯಕಿ ಬೃಂದಾ ಕಾರಂಟ್​, ವಕೀಲ ಪ್ರಶಾಂತ್​ ಭೂಷಣ್​  ಹಾಗೂ ಹೋರಾಟಗಾರ ಯೋಗೇಂದ್ರ ಯಾದವ್​ ಹೆಸರು ಕೇಳಿಬಂದಿದೆ.

    Published by:Seema R
    First published: