• Home
 • »
 • News
 • »
 • national-international
 • »
 • ರಾಜಸ್ಥಾನ ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್​ಗೆ ಕೊರೋನಾ ದೃಢ

ರಾಜಸ್ಥಾನ ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್​ಗೆ ಕೊರೋನಾ ದೃಢ

ರಾಹುಲ್ ಗಾಂಧಿ - ಸಚಿನ್‌ ಪೈಲಟ್‌.

ರಾಹುಲ್ ಗಾಂಧಿ - ಸಚಿನ್‌ ಪೈಲಟ್‌.

ಸಚಿನ್​ ಪೈಲಟ್​ ಬಿಹಾರ ವಿಧಾನಸಭಾ ಚುನಾವಣಾ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

 • Share this:

  ಜೈಪುರ  (ನ.12): ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸಚಿನ್​ ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಪತ್ತೆಯಾಗಿದೆ ಎಂದಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಒಳಗಾದವರು ಕೂಡ ಪರೀಕ್ಷೆಗೆ ಒಳಪಟ್ಟು ಮುನ್ನೆಚ್ಚರಿಕೆವಹಿಸುವಂತೆ ಮನವಿ ಮಾಡಿದ್ದಾರೆ. ಸೋಂಕು ದೃಢವಾಗುತ್ತಿದ್ದಂತೆ ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ಒಳಗಾಗಿದ್ದೇನೆ. ಶೀಘ್ರದಲ್ಲಿಯೇ ಚೇತರಿಕೆ ಕಾಣುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ. ಸಚಿನ್​ ಪೈಲಟ್​ ಬಿಹಾರ ವಿಧಾನಸಭಾ ಚುನಾವಣಾ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.  ಈ ಸುದ್ದಿ ತಿಳಿಯುತ್ತಿದ್ದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಶೀಘ್ರ ಗುಣಮುಖರಾಗುವಂತೆ ಹಾರೈಸಿ ಟ್ವೀಟ್​ ಮಾಡಿದ್ದಾರೆ.


  ಅಷ್ಟೇ ಅಲ್ಲದೇ ರಾಜಸ್ಥಾನ ವಿಧಾನಸಭಾ ಸ್ಫೀಕರ್​ ಸಿಪಿ ಜೋಷಿ ಕೂಡ ಅವರಿಗೆ ಚೇತರಿಕೆಗೆ ಹಾರೈಸಿದ್ದಾರೆ. ಸಚಿನ್​ ಪೈಲಟ್​ ಸ್ಥಾನ ಅಲಂಕರಿಸಿರುವ ರಾಜಸ್ಥಾನ ಕಾಂಗ್ರೆಸ್​ ಸಮಿತಿ (ಆರ್​ಪಿಸಿಸಿ)ಯ ಮುಖ್ಯಸ್ಥರಾಗಿರುವ ಗೋವಿಂದ್​ ಸಿಂಗ್​ ದೋಟಸ್ರಾ ಕೂಡ ಅವರಿಗೆ ಗುಣಮುಖರಾಗಲಿ ಎಂದಿದ್ದಾರೆ.


  ಬಿಜೆಪಿ ನಾಯಕ ಜೋತಿರಾಧಿತ್ಯ ಸಿಂಧ್ಯಾ ಕೂಡ ಅವರು ಸೋಂಕಿನಿಂಂದ ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ


  ರಾಜಸ್ಥಾನದ ಅನೇಕ ಸಚಿವರು ಹಾಗೂ ಶಾಸಕರು ಕೂಡ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

  Published by:Seema R
  First published: