Goa Election: ಇಂದು ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ

Goa Election: ಕಡಲ ತೀರದ ರಾಜ್ಯದಲ್ಲಿ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು ಮತ್ತು ಬಾಂಬೋಲಿಮ್ ಬೀಚ್ ರೆಸಾರ್ಟ್​ನಲ್ಲಿ ಗಣಿ ನಿಷೇಧ ಮಾಡಿರುವುದರಿಂದ ಸಂತ್ರಸ್ತರಾಗಿರುವವರ ಜೊತೆ‌ ರಾಹುಲ್ ಗಾಂಧಿ ಅವರು ಸಂವಾದ ನಡೆಸಲಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ನವದೆಹಲಿ, ‌ಅ. 30: ಮುಂದಿನ‌ ವರ್ಷದ ಮಾರ್ಚ್ (March) - ಏಪ್ರಿಲ್(April) ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarakhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. 2024ರ ಲೋಕಸಭಾ‌ ಚುನಾವಣೆಯ (2024 Lok Sabha Election) ದೃಷ್ಟಿಯಿಂದ ಈ ಐದು ರಾಜ್ಯಗಳು ಬೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕಾವಾಗಿವೆ. ಏಕೆಂದರೆ ಈ ಚುನಾವಣೆಗಳಲ್ಲಿ ಸಾಧ್ಯವಾದಷ್ಟು ಕಡೆ ಗೆಲ್ಲಬೇಕಾಗಿದೆ. ಆ ಮೂಲಕ ಪಕ್ಷದ ನೆಲೆಯನ್ನು‌ ವೃದ್ಧಿ ಮಾಡಿಕೊಳ್ಳಬೇಕಿದೆ. ಈ‌ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಮಾಜಿ ಅಧ್ಯಕ್ಷರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ (AICC Former President Rahul Gandhi) ಗೋವಾ ಪ್ರವಾಸ ಕೈಗೊಂಡಿದ್ದಾರೆ.

  ಚುನಾವಣಾ ಪ್ರಚಾರಕ್ಕೆ ರಾಹುಲ್​ ಚಾಲನೆ

  ಗೋವಾ ವಿಧಾನಸಭಾ ಚುನಾವಣೆ (Goa Assembly Elections) ದೃಷ್ಟಿಯಿಂದಲೇ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರವಾಸದ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ (Election Campaign) ನೀಡಲಿದ್ದಾರೆ. ಅಲ್ಲದೆ ಸಮಾಜದ ವಿವಿಧ ವರ್ಗದ ಜನರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಬೆಳಿಗ್ಗೆ 10.30ಕ್ಕೆ ಕಡಲ ತೀರದ ರಾಜ್ಯದಲ್ಲಿ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು (Fisherman)  ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
  ಮಧ್ಯಾಹ್ನ 12:30ಕ್ಕೆ ಪಂಜಿಮ್‌ನ ಆಜಾದ್ ಮೈದಾನದ (Azad Maidan, Panjim) ಹುತಾತ್ಮರ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ.

  ಇದನ್ನು ಓದಿ :ಇಂದು ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ

  ಮಧ್ಯಾಹ್ನ 2:30ಕ್ಕೆ ಬಾಂಬೋಲಿಮ್ ಬೀಚ್ ರೆಸಾರ್ಟ್ ನಲ್ಲಿ ಗಣಿ ನಿಷೇಧ ಮಾಡಿರುವುದರಿಂದ ಸಂತ್ರಸ್ತರಾಗಿರುವವರ ಜೊತೆ ಸಂವಾದ ನಡೆಸಲಿದ್ದಾರೆ. 3:15ಕ್ಕೆ ಜಾಗೊರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ‌.ರಾಹುಲ್ ಗಾಂಧಿ ಅವರು ಗೋವಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್ ಉಸ್ತುವಾರಿಯಾದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಗೋವಾ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ (P. Chidambaram) ಮತ್ತು ಗೋವಾ ಕಾಂಗ್ರೆಸ್ ನಾಯಕರು ಉಪಸ್ಥಿತರಿರಲಿದ್ದಾರೆ.

  2 ದಿನ ಗೋವಾದಲ್ಲಿದ್ದ ಮಮತಾ ಬ್ಯಾನರ್ಜಿ ಭೇಟಿ

  ಐದು ರಾಜ್ಯಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲವೂ ಮುಖ್ಯವಾಗಿದ್ದರೆ ಸ್ಥಳೀಯ ಪಕ್ಷಗಳಾದ ಆಮ್ ಆದ್ಮಿ‌ಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಗಳಿಗೆ ನೆಲೆ ವಿಸ್ತರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ. ಈ‌ ಹಿನ್ನೆಲೆಯಲ್ಲಿ ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅಕ್ಟೋಬರ್ 28 ಮತ್ತು ಅಕ್ಟೋಬರ್ 29ರಂದು ಗೋವಾದಲ್ಲಿದ್ದು ಟಿಎಂಸಿ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

  ಈಗಾಗಲೇ ಮಾಜಿ  ಮುಖ್ಯಮಂತ್ರಿ ಲುಝಿನ್ಹೋ ಫಲೇರೋ (Former Chief Minister Luizinho Falerio) ಮತ್ತು ಕಾಂಗ್ರೆಸ್ (Congress) ಪಕ್ಷದ ಇತರ ದೊಡ್ಡ ನಾಯಕರು ಟಿಎಂಸಿ ಸೇರಿಕೊಂಡಿದ್ದ ಮಮತಾ ಬ್ಯಾನರ್ಜಿ ಅವರು ತಮ್ಮ ಮೊದಲ ಗೋವಾ ಭೇಟಿ ವೇಳೆ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ (Tennis Player Leander Peas) ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಇದಕ್ಕೂ ಮೊದಲು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೇರಿಕ್ ಓ'ಬ್ರೆಯನ್ (Trinamool Congress Rajasabha Member Derek O’Brien) ಅವರು ಗಾಯಕ ಲಕ್ಕಿ ಅಲಿ (Singer Lucky Ali) ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ (Actress and Activist Nafisa Ali) ಅವರನ್ನು ಭೇಟಿ ಮಾಡಿ ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದರು.

  ಇದನ್ನು ಓದಿ : ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ

  ಬಿಜೆಪಿ- ಆಮ್ ಆದ್ಮಿ ಪಕ್ಷದಿಂದಲೂ ತಯಾರಿ

  ಕಾಂಗ್ರೆಸ್ (Congress) ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಲ್ಲದೆ ಬಿಜೆಪಿ (BJP) ಹಾಗೂ ಆಮ್ ಆದ್ಮಿ ಪಕ್ಷಗಳು ಕೂಡ ಗೋವಾ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಬಿಜೆಪಿ ಮತ್ತು ಆಮ್ ಆದ್ಮಿ‌ ಪಕ್ಷಗಳು ಸದ್ದಿಲ್ಲದೆ ಚುನಾವಣಾ ತಯಾರಿ ನಡೆಸುತ್ತಿವೆ. ಯಾವಾಗ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತವೆ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕಾಗಿದೆ.
  Published by:Vasudeva M
  First published: