ನವದೆಹಲಿ (ಏ.9): ದೇಶದ ಇತರೆ ರಾಜಕಾರಣಿಗಳಂತೆ ನನಗೆ ಅಧಿಕಾರದಲ್ಲಿ (Power) ಆಸಕ್ತಿ ಇಲ್ಲ. ನನಗೆ ಆಸಕ್ತಿ (Intrest) ಏನಿದ್ದರೂ ದೇಶವನ್ನು (India) ಅರ್ಥ ಮಾಡಿಕೊಳ್ಳ ಬೇಕು ಎಂಬುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದ್ದಾರೆ. ಪುಸ್ತಕ ಬಿಡುಗಡೆ ಸಂದರ್ಭವೊಂದರಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಅಧಿಕಾರ ಸ್ಥಾಪಿಸುವ ವಿಚಾರದಲ್ಲಿ ನಿರಾಸಕ್ತಿ ಇರುವ ಬಗ್ಗೆ ತಿಳಿಸಿದರು.
ದೇಶ ಪ್ರೀತಿಸುವುದನ್ನು ಕಲಿಯುತ್ತಿದ್ದೇನೆ
ಇದೇ ವೇಳೆ ಇತರೆ ರಾಜಕಾರಣಿಗಳ ಅಧಿಕಾರದ ಆಸೆ ಕುರಿತು ಮಾತನಾಡಿದ ಅವರು, ಅನೇಕರು ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅಧಿಕಾರ ಪಡೆಯುವತ್ತ ಮಾತ್ರ ಅವರು ಯೋಚಿಸುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಅಧಿಕಾರ ಹೇಗೆ ಪಡೆಯುವುದು ಎಂಬ ಆಯೋಜಚನೆ ಯಲ್ಲೇ ದಿನ ಕಳೆದು ರಾತ್ರಿ ನಿದ್ದೆಗೆ ಜಾರುತ್ತಾರೆ. ಅವರನ್ನು ನೋಡಿದರೆ ಅಚ್ಚರಿ ಆಗುತ್ತದೆ. ದೇಶದ ತುಂಬಾ ಅಂತಹ ಜನರೇ ಇದ್ದಾರೆ. ನಾನು ಅಧಿಕಾರ ಕೇಂದ್ರಿದ ಕುಟುಂಬದಲ್ಲೇ ಹುಟ್ಟಿದ್ದೇನೆ. ಆದರೆ ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ. ನನಗೆ ಹಂಬಲ ಏನಿದ್ದರೂ ದೇಶವನ್ನು ಅರ್ಧ ಮಾಡಿಕೊಂಡು ಜನರನ್ನು ಪ್ರೀತಿಸುವುದನ್ನು ಕಲಿಯಲು ಪ್ರಯತ್ನಿಸುತ್ತೇನೆ ಎಂದರು
ಪ್ರೇಮಿಯನ್ನು ಅರ್ಥ ಮಾಡಿಕೊಳ್ಳುವಂತೆ ದೇಶ ಅರ್ಥ ಮಾಡಿಕೊಳ್ಳುವ ಪ್ರಯತ್ನ
ಇದೇ ವೇಳೆ ದೇಶವನ್ನು ಅರ್ಧ ಮಾಡಿಕೊಳ್ಳುವ ತಮ್ಮ ತುಡಿತ ಕುರಿತು ಮಾತನಾಡಿದ ಅವರು, ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಹೇಗೆ ತಾನು ಪ್ರೀತಿಸುವ ವ್ಯಕ್ತಿಯ ಕುರಿತು ತಿಳಿಯುವ ಕುತೂಹಲ, ಆಸಕ್ತಿ ಹೊಂದಿರುತ್ತಾನೋ. ಅದೇ ರೀತಿ ನಾನೂ ಕೂಡ ದೇಶವನ್ನು ತಿಳಿಯ ಬಯಸುತ್ತೇನೆ ಎಂದಿದ್ದಾರೆ. ಈ ದೇಶದಿಂದ ನಾನು ಸಾಕಷ್ಟ್ರು ಪ್ರೀತಿ ಪಡೆದಿದ್ದೇನೆ.
ಇದನ್ನು ಓದಿ: ಗುಜರಾತ್ನಲ್ಲಿ ಕೊರೋನಾ XE ಪಾಸಿಟಿವ್ ಕೇಸ್ ಪತ್ತೆ, ಟ್ರಾವೆಲ್ ಹಿಸ್ಟರಿ ಹೇಗಿದೆ?
ದ್ವೇಷವೂ ಸಿಕ್ಕಿದೆ. ಪ್ರತಿ ನೋವಿನಲ್ಲೂ ನಾನು ಪಾಠ ಕಲಿಯುತ್ತೇನೆ ಎಂದು ತಿಳಿಸಿದರು
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ 2019ರಲ್ಲಿ ಲೋಕಸಭಾ ಚುನಾವಣಾ ಸೋಲಿನ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೋನಾಮೆ ಸಲ್ಲಿಸಿದ್ದರು. ಅಲ್ಲದೇ ಈ ಸಂಬಂಧ ತಮ್ಮ ಪಕ್ಷದ ಕಾರ್ಯಕಾರಿ ಸಮಿತಿಗೆ ಭಾವಾನಾತ್ಮಕ ಪತ್ರ ಬರೆದ ಅವರು ತಮ್ಮ ಸ್ಥಾನಕ್ಕೆ ಬೇರೆಯವರ ಆಯ್ಕೆ ಮಾಡುವಂತೆ ತಿಳಿಸಿದ್ದರು.
ಪಕ್ಷದಲ್ಲಿ ಸಕ್ರಿಯರಾಗಿರುವ ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದರೂ ಪಕ್ಷ ಗೆಲ್ಲಿಸುವಲ್ಲಿ ವಿಫಲರಾದರು. ಅವರ ಈ ನಡೆಯನ್ನು ಬಿಜೆಪಿ ನಾಯಕರು ಟೀಕಿಸಿದ್ದರು.
ಇದನ್ನು ಓದಿ: ಉತ್ತರ ಪ್ರದೇಶ ಸಿಎಂಒ ಟ್ವಿಟರ್ ಖಾತೆ ಹ್ಯಾಕ್, ಸಿಎಂ ಕಚೇರಿ ಖಾತೆಗೆ ಈತರ ಪ್ರೊಫೈಲ್ ಫೊಟೋ ಹಾಕೋದಾ?
ಮಾಯಾವತಿಗೆ ಸಿಎಂ ಸ್ಥಾನದ ಆಫರ್
ಇನ್ನು ಇದೇ ವೇಳೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರಿಗೆ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗುವಂತೆ ತಮ್ಮ ಪಕ್ಷ ಆಫರ್ ನೀಡಿತ್ತು, ಆದರೆ ಅವರು ಈ ಬಗ್ಗೆ ಏನು ಹೇಳಲಿಲ್ಲ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಪೆಗಾಸಸ್ನ ಒತ್ತಡದಿಂದಾಗಿ ಮಾಯಾವತಿ ಅವರು ದಲಿತರ ಧ್ವನಿಗಾಗಿ ಹೋರಾಡುತ್ತಿಲ್ಲ ಎಂದು ಇದೇ ವೇಳೆ ತಿಳಿಸಿದರು
ಬಿಜೆಪಿ ವಿರುದ್ಧ ಕಿಡಿ
ಸಿಬಿಐ ಇಡಿಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ದೇಶದ ಸಂಸ್ಥೆಗಳನ್ನು ನಿಯಂತ್ರಿಸುತ್ತಿವೆ ಎಂದು ಆರೋಪಿಸಿದ ಅವರು ಸಂವಿಧಾನವೇ ಭಾರತದ ಅಸ್ತ್ರ. ಆದರೆ ಸಂಸ್ಥೆಗಳಿಲ್ಲದೆ ಸಂವಿಧಾನಕ್ಕೆ ಅರ್ಥವಿಲ್ಲ. ನಾವು ಸಂವಿಧಾನವನ್ನು ರಕ್ಷಿಸಬೇಕು ಎಂದು ಹೇಳುತ್ತಿದ್ದೇವೆ. ಆದರೆ ಸಂಸ್ಥೆಗಳ ಮೂಲಕ ಸಂವಿಧಾನವನ್ನು ರಕ್ಷಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ