ಭಾರತ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದೆ ಎಂಬುದು ರಹಸ್ಯವೇನಲ್ಲ, ಬಹಿರಂಗ ಸತ್ಯ- ರಾಹುಲ್​​ ಗಾಂಧಿ

ಭಾರತದಲ್ಲಿ ಸಾಮೂಹಿಕ ಹಲ್ಲೆಯಂತಹ ಅಮಾನವೀಯ ಘಟನೆಗಳನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆಯುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದ್ದ ಸಾಹಿತಿಗಳು, ಪತ್ರಕರ್ತರು ಮತ್ತು ಚಿತ್ರರಂಗದ ನಟ ನಟಿಯರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗಣ್ಯರ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ.

news18-kannada
Updated:October 4, 2019, 6:15 PM IST
ಭಾರತ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದೆ ಎಂಬುದು ರಹಸ್ಯವೇನಲ್ಲ, ಬಹಿರಂಗ ಸತ್ಯ- ರಾಹುಲ್​​ ಗಾಂಧಿ
ರಾಹುಲ್​​ ಗಾಂಧಿ
  • Share this:
ನವದೆಹಲಿ(ಅ.04): ಭಾರತ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದೆ ಎಂಬುದು ರಹ್ಯಸ್ಯವೇನಲ್ಲ ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಇದು ರಹಸ್ಯವೇನಲ್ಲ, ಇಡೀ ಜಗತ್ತಿಗೆ ಗೊತ್ತಿರುವ ಬಹಿರಂಗ ಸತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇಂದು ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತನ್ನದೇ ಕ್ಷೇತ್ರ ವಯನಾಡಿನಲ್ಲಿ ನಡೆದ ಈ ಪ್ರತಿಭಟನೆಗೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ರಾಹುಲ್​​ ಗಾಂಧಿಯವರು, ದೇಶದಲ್ಲಿನ ಗುಂಪು ಹಲ್ಲೆ ಕೃತ್ಯಗಳನ್ನು ಖಂಡಿಸಿ ಪ್ರಧಾನಿಗೆ ಪತ್ರ ಬರೆದ 50 ಮಂದಿ ವಿರುದ್ಧ ಎಫ್​​ಐಆರ್​​​ ದಾಖಲಾಗಿದೆ. ಬಿಹಾರದ ಮುಜಾಫರ್‌ಪುರ್‌ನಲ್ಲಿ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದು ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂಬುದು ತೋರಿಸುತ್ತದೆ ಎಂದರು.


ಭಾರತವೂ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದೆ. ಇಲ್ಲೇನೂ ನಡೆಯುತ್ತಿದೆ ರಹಸ್ಯವೇನಲ್ಲ, ಇಡೀ ದೇಶಕ್ಕೆ ಗೊತ್ತಿದೆ. ಯಾರೇ ಆಗಲಿ ಪ್ರಧಾನಿಗೆ ಪ್ರಶ್ನೆ ಮಾಡಿದ ಕೂಡಲೇ ಜೈಲಿಗೆ ಕಳಿಸಲಾಗುತ್ತಿದೆ. ಇಂಥವರ ಮೇಲೆ ಹಲ್ಲೆಯೂ ನಡೆಸಲಾಗುತ್ತಿದೆ ಎಂದು ರಾಹುಲ್​​ ಗಾಂಧಿ ಆರೋಪಿಸಿದರು.

ಭಾರತದಲ್ಲಿ ಸಾಮೂಹಿಕ ಹಲ್ಲೆಯಂತಹ ಅಮಾನವೀಯ ಘಟನೆಗಳನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆಯುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದ್ದ ಸಾಹಿತಿಗಳು, ಪತ್ರಕರ್ತರು ಮತ್ತು ಚಿತ್ರರಂಗದ ನಟ ನಟಿಯರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗಣ್ಯರ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ.

ಗೋ ರಕ್ಷಣೆಯ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ರಾಷ್ಟ್ರಾದಾದ್ಯಂತ ಸಾಮೂಹಿಕ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಕಳೆದ ಜುಲೈನಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ, ಅನುರಾಗ್​ ಕಶ್ಯಪ್, ಇತಿಹಾಸ ತಜ್ಞ ರಾಮಚಂದ್ರ ಗುಹಾ​ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು.

ಇದನ್ನೂ ಓದಿ: ಸಾಮೂಹಿಕ ಹಲ್ಲೆಗಳನ್ನು ಖಂಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇ ತಪ್ಪಾ?; ಈ 50 ಸೆಲೆಬ್ರಿಟಿಗಳ ವಿರುದ್ಧ ದಾಖಲಾಯ್ತು ಎಫ್ಐಆರ್!

ಆದರೆ, ಹೀಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಎಲ್ಲಾ ಗಣ್ಯರ ವಿರುದ್ಧವೂ ಇದೀಗ ದೇಶದ್ರೋಹ, ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಪ್ರಕರಣವನ್ನು ಹೊರಿಸಲಾಗಿದೆ. ಪ್ರಸ್ತುತ ಈ ಪ್ರಸಂಗ ಇಡೀ ದೇಶದ ಪ್ರಜ್ಞಾವಂತ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.

ಹಿರಿಯ ಅಂಕಣಕಾರ, ಇರಿಹಾಸ ತಜ್ಞ ರಾಮಚಂದ್ರ ಗುಹಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇವರು ಪ್ರಜಾವಾಣಿ ದಿನ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಅಲ್ಲದೆ, ಭಾರತದ ಇತಿಹಾಸದ ಕುರಿತು ಸಾಕಷ್ಟು ಸಂಶೋಧನಾ ಕೃತಿಗಳನ್ನು ಇವರು ಬಿಡುಗಡೆ ಮಾಡಿದ್ದಾರೆ. ಇನ್ನು, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಮಣಿರತ್ನಂ, ಅನುರಾಗ್​ ಕಶ್ಯಪ್, ಹಿರಿಯ ಕಲಾವಿದ ಸೌಮಿತ್ರ ಚಟರ್ಜಿ ಸೇರಿ 50ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
------------
First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ