ಚೆನ್ನೈ (ಜ. 23): ವಿಧಾನಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನಲ್ಲು ಭರ್ಜರಿ ಪ್ರಚಾರ ನಡೆಸಿದ್ದಾರೆ. ತಮಿಳು ಭಾಷೆ ಮತ್ತು ಸಂಸ್ಕೃತಿ ಮೂಲಕ ಮತದಾರರನ್ನು ಸೆಳೆಯುವ ಯತ್ನ ನಡೆಸಿರುವ ರಾಹುಲ್ ಗಾಂಧಿ ಪ್ರಧಾನಿಗೆ ತಮಿಳಿಗರ ಭಾಷೆ ಸಂಸ್ಕೃತಿ ಮೇಲೆ ಗೌರವವಿಲ್ಲ ಎಂದು ಜರಿದಿದ್ದಾರೆ. ಅನೇಕ ಭಾಷೆ ಮತ್ತು ಅವರ ವಿವಿಧ ಸಂಪ್ರದಾಯಗಳ ಬಗ್ಗೆ ನಂಬಿಕೆ ಹೊಂದಿದ್ದೇವೆ. ತಮಿಳು, ಹಿಂದಿ ಮತ್ತು ಬೆಂಗಾಲಿ ಅದರೆ ಆದ ಜಾಗವನ್ನು ಹೊಂದಿದೆ ಎಂದು ಭಾಷಾವಾರು ವಿಷಯದ ಮೂಲಕ ಜನರನ್ನು ಸೆಳೆಯುವ ಯತ್ನ ನಡೆಸಿದರು. ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಅವರು, ಇಂದು ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ವಿರುದ್ಧ ಹರಿಹಾಯ್ದ ಅವರು, ಮೋದಿಗೆ ತಮಿಳುನಾಡಿನ ಜನ, ಭಾಷೆ ಮತ್ತೆ ಸಂಸ್ಕೃತಿ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಹೀಗಳೆದರು.
LIVE: Shri @RahulGandhi participates in a roadshow in Coimbatore, Tamil Nadu.#TamilNaduWelcomesRahul https://t.co/qoYgf1Ypbo
— Congress (@INCIndia) January 23, 2021
Shri @RahulGandhi addresses the public & expresses his solidarity with the Tamil people & their interests during a roadshow in Coimbatore.#TamilNaduWelcomesRahul pic.twitter.com/t5xCI6YGIu
— Congress (@INCIndia) January 23, 2021
ಮೂರು ದಿನಗಳ ಪ್ರವಾಸದ ವೇಳೆ ರಾಹುಲ್ ಗಾಂಧಿ ಎಂಎಸ್ಎಂಇ, ಕೈಗಾರಿಕಾ ಕಾರ್ಮಿಕರು, ರೈತರು, ಕೊಯಮತ್ತೂರಿನ ನೇಕಾರರ ಜೊತೆ ಮಾತುಕತೆ ನಡೆಸಲಿದ್ದಾರೆ. ತ್ರಿಪುರ, ಈರೋಡ್, ಕರೂರ್ ಜಿಲ್ಲೆಗಳಲ್ಲಿ ಅವರು ಪ್ರವಾಸ ನಡೆಸಲಿದ್ದಾರೆ. ಕಾಂಗ್ರೆಸ್ ಡಿಎಂಕೆ ಜೊತೆ ಈ ಬಾರಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ