Rahul Gandhi: ಮಾಡೋಕೆ ತುಂಬಾ ಕೆಲಸ ಇದೆ, ಆದ್ರೆ ನನಗೆ ಮಕ್ಕಳು ಬೇಕು; ಮದುವೆ ಬಗ್ಗೆ ರಾಹುಲ್ ಮಾತು

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಇಟಾಲಿಯನ್ ದಿನಪತ್ರಿಕೆ ‘ಕೊರಿಯರ್ ಡೆಲ್ಲಾ ಸೆರಾ’ ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ, ರಾಜಕೀಯ ಕನಸು, ತಮ್ಮ ಬಾಲ್ಯ, ಕುಟುಂಬ ಮತ್ತು ಮದುವೆಯ ಬಗ್ಗೆಯೂ ಪ್ರಶ್ನೆಗಳನ್ನು ಎದುರಿಸಿದ್ದಾರೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ಯಾತ್ರೆಯ (Bharat Jodo Yatra) ಭರ್ಜರಿ ಯಶಸ್ಸಿನ ನಂತರ ಈ ಹಿಂದಿಗಿಂತಲೂ ಪುಟಿದೆದ್ದವರಂತೆ ಕಾಣುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ (Congress) ಲಾಭ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಭಾರತದಾದ್ಯಂತ ರಾಹುಲ್ ಗಾಂಧಿ ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ದೇಶದ ಅಭಿವೃದ್ಧಿಯ ಬಗ್ಗೆ ಹತ್ತಾರು ಕನಸುಗಳನ್ನು ಇಟ್ಟುಕೊಂಡಿದ್ದಾರೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲೂ ಮಾತಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಜೊತೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಉದ್ದಗಲಕ್ಕೂ ಅನೇಕ ಬಾರಿ ತಮ್ಮ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಇದಕ್ಕೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದ ರಾಹುಲ್ ಈ ಬಾರಿ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ಎದುರಿಸಿದ್ದು, ಆದರೆ ಈ ಬಾರಿ ಮಾತ್ರ ವಿಭಿನ್ನವಾಗಿ ಉತ್ತರ ನೀಡಿದ್ದಾರೆ.


ಇಟಾಲಿಯನ್ ದಿನಪತ್ರಿಕೆ ‘ಕೊರಿಯರ್ ಡೆಲ್ಲಾ ಸೆರಾ’ ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ, ರಾಜಕೀಯ ಕನಸು, ತಮ್ಮ ಬಾಲ್ಯ, ಕುಟುಂಬ ಮತ್ತು ಮದುವೆಯ ಬಗ್ಗೆಯೂ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಸಂದರ್ಶನಕಾರರು ‘ನಿಮಗೆ ಇಷ್ಟು ವರ್ಷವಾದರೂ ಯಾಕೆ ಮದುವೆ ಆಗಿಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನನಗೂ ‘ಇದು ವಿಚಿತ್ರ ಅಂತಾ ಅನ್ನಿಸ್ತಿದೆ. ಗೊತ್ತಿಲ್ಲ ನನಗೆ.. ಆದರೆ ಮಾಡಲು ತುಂಬಾ ಕೆಲಸಗಳಿವೆ. ಆದರೆ ನಾನು ಮಕ್ಕಳನ್ನು ಹೊಂದಲು ಬಯಸುತ್ತೇನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: 2024 Election Survey: ಮುಂದಿನ ಪ್ರಧಾನಿ ಯಾರು? 6 ತಿಂಗಳಲ್ಲಿ ಕುಗ್ಗಿದ ಮೋದಿ ಜನಪ್ರಿಯತೆ, ರಾಹುಲ್ ಗಾಂಧಿಗೆ ಲಾಭ!


ರಾಹುಲ್ ಗಡ್ಡ ಬಿಡಲು ಕಾರಣವೇನು?


ಪಾದಯಾತ್ರೆಯ ವೇಳೆ ಯಾಕೆ ಗಡ್ಡವನ್ನು ಬೆಳೆಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ನಾನು ಇಡೀ ಭಾರತ್ ಜೋಡೋ ಯಾತ್ರೆಯ ಮೆರವಣಿಗೆಯುದ್ದಕ್ಕೂ ಗಡ್ಡವನ್ನು ಕತ್ತರಿಸಬಾರದು ಎಂದು ನಿರ್ಧಾರ ಮಾಡಿದ್ದೆ. ಗಡ್ಡಕ್ಕೆ ಒಮ್ಮೆಯೂ ಕತ್ತರಿ ಹಾಕದ ಕಾರಣ ಅದು ಇಷ್ಟು ಉದ್ದಕ್ಕೆ ಬೆಳೆದಿದೆ. ಈಗ ಅದನ್ನು ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆಯೂ ನಾನು ನಿರ್ಧಾರ ಮಾಡಬೇಕಿದೆ’ ಎಂದು ಹೇಳಿದರು.


'ನನಗೆ ಇಂದಿರಾ ಅಜ್ಜಿ ಅಚ್ಚುಮೆಚ್ಚು'


ಇನ್ನು ತಮ್ಮ ಅಜ್ಜಿಯ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ನಾನು ನನ್ನ ಭಾರತೀಯ ಅಜ್ಜಿ ಇಂದಿರಾ ಗಾಂಧಿಯವರಿಗೆ ನೆಚ್ಚಿನವನಾಗಿದ್ದೆ. ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಟಾಲಿಯನ್ ಅಜ್ಜಿ ಪಾವೊಲಾ ಮೈನೊಗೆ ಅಚ್ಚುಮೆಚ್ಚಿನವಳಾಗಿದ್ದಳು. ಅಜ್ಜಿ ಪಾವೊಲಾ ಮೈನೊ ಸುಮಾರು 98 ವರ್ಷ ಬದುಕಿದ್ದರು. ನಾನು ನನ್ನ ಚಿಕ್ಕಪ್ಪ ವಾಲ್ಟರ್, ಸೋದರಸಂಬಂಧಿಗಳು ಮತ್ತು ಇಡೀ ಕುಟುಂಬವನ್ನು ತುಂಬಾ ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೆ ಎಂದು ರಾಹುಲ್ ಗಾಂಧಿ ಹೇಳಿದರು. ಪಾವೊಲಾ ಮೈನೊ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಇಟಲಿಯಲ್ಲಿ ನಿಧನ ಹೊಂದಿದ್ದರು.


ಇದನ್ನೂ ಓದಿ: Rahul Gandhi: ಅದಾನಿ-ಮೋದಿ ಬಗ್ಗೆ ಅಸಂಸದೀಯ ಪದ ಬಳಸಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ಪ್ರಹ್ಲಾದ್ ಜೋಶಿ


'ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದೆ'


ಇನ್ನು ಭಾರತದ ರಾಜಕೀಯದ ಬಗ್ಗೆ ಕೇಳಿರುವ ಪ್ರಶ್ನೆಗೂ ಉತ್ತರಿಸಿರುವ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವ ಕಾರಣ ಮತ್ತು ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಫ್ಯಾಸಿಸಂ ದೇಶವನ್ನು ಪ್ರವೇಶಿಸಿದೆ. ಪ್ರತಿಪಕ್ಷಗಳು ಫ್ಯಾಸಿಸಂಗೆ ಪರ್ಯಾಯ ದೃಷ್ಟಿಕೋನವನ್ನು ಮಂಡಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಯಲ್ಲಿ ಸೋಲಿಸಬಹುದು ಎಂದು ಹೇಳಿದರು.


ಇನ್ನು ಭಾರತಕ್ಕೆ ಫ್ಯಾಸಿಸಂ ಈಗಾಗಲೇ ಪ್ರವೇಶಿಸಿ ಆಗಿದೆ ಎಂದ ರಾಹುಲ್ ಗಾಂಧಿ, ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಂಸತ್ತು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನನ್ನನ್ನು ಎರಡು ವರ್ಷಗಳಿಂದ ಸಂಸತ್‌ನಲ್ಲಿ ಮಾತನಾಡೋಕೆ ಬಿಟ್ಟಿಲ್ಲ. ನಾನು ಮಾತನಾಡಿದ ತಕ್ಷಣ ಅವರು ನನ್ನ ಮೈಕ್ರೊಫೋನ್ ಅನ್ನು ತೆಗೆದುಹಾಕುತ್ತಾರೆ. ಅಧಿಕಾರವನ್ನು ಸಮತೋಲನದಿಂದ ನಡೆಸುತ್ತಿಲ್ಲ. ಪತ್ರಿಕಾ ಮಾಧ್ಯಮ ಕೂಡ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದರು.

Published by:Avinash K
First published: