ಅಲಹಾಬಾದ್ (ಫೆ. 11): ಮೌನಿ ಅಮವಾಸ್ಯೆ ಹಿನ್ನಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಲಹಾಬಾದ್ ಬಳಿಯ ಪವಿತ್ರ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಅಲಹಾಬಾದ್ನ ನೆಹರೂ ಗಾಂಧಿ ಕುಟುಂಬದ ಮನೆಯಾದ ಆನಂದ್ ಭವನಗೆ ಭೇಟಿ ನೀಡುವ ಮುನ್ನ ಅವರು ಈ ಸ್ನಾನ ಮಾಡಿದ್ದಾರೆ. ಇಂದು ಮಧ್ಯಾಹ್ನ ಅವರು ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಪ್ರಸ್ತುತ ಆನಂದ್ ಭವನ ವನ್ನು ಸ್ವಾತಂತ್ರ್ಯ ಚಳುವಳಿಯ ಮ್ಯೂಸಿಯಂ ಆಗಿ ರೂಪಿಸಲಾಗಿದೆ. ಆನಂದ ಭವನದ ಬಳಿ ಪ್ರಿಯಾಂಕಾ ಅನಾಥ ಮಕ್ಕಳೊಂದಿಗೆ ಕೆಲ ಕಾಲ ಕಳೆದಿದ್ದಾರೆ.
ದೆಹಲಿಯಿಂದ ತೆರಳುವ ಮೊದಲು ಅವರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ್ ಸರಸ್ವತಿಯವರನ್ನು ಭೇಟಿ ಮಾಡಲು ಮಂಕನೇಶರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಉತ್ತರ ಪ್ರದೇಶ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ. ಮುಂದಿನ ವರ್ಷದ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಇದೇ ಹಿನ್ನಲೆ ಅವರು ಉತ್ತರ ಪ್ರದೇಶಕ್ಕೆ ಆಗ್ಗಿಂದಾಗಲೇ ಭೇಟಿ ನೀಡುತ್ತಿರುತ್ತಾರೆ.
![]()
ಕೇಂದ್ರದ ಕೃಷಿ ಕಾನೂನು ವಿರೋಧಿಸಿ ನಿನ್ನೆ ಅವರು ಸಹರಾನ್ಪುರದಲ್ಲಿರೈತರ ಮಹಾಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಕೈ ಯಲ್ಲಿ ರುದ್ರಾಕ್ಷಿ ಹಿಡಿದು ಅವರು ಮೃಧು ಹಿಂದುತ್ವ ಮೂಲಕ ಜನರನ್ನು ಸೆಳೆಯುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ