HOME » NEWS » National-international » CONGRESS LEADER PRIYANKA GANDHI VADRA SPEND DAY WITH ASSAM TEA WORKERS SESR

Priyanka Gandhi: ಅಸ್ಸಾಂನಲ್ಲಿ ಟೀ ತೋಟದ ಕಾರ್ಮಿಕರೊಂದಿಗೆ ದಿನ ಕಳೆದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ

ಚಹಾ ತೋಟದ ಕಾರ್ಮಿಕ ಜೀವನ ಸರಳ ಮತ್ತು ನಿಜಾಯಿತಿಯಿಂದ ಕೂಡಿದೆ. ಅವರ ಶ್ರಮ ದೇಶಕ್ಕೆ ಅಮೂಲ್ಯ ಕೊಡಗೆ. ಅವರೊಟ್ಟಿಗೆ ನಾನು ಕೆಲಸ ಮಾಡುತ್ತ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಯತ್ನ ನಡೆಸಿದೆ.

news18-kannada
Updated:March 2, 2021, 4:33 PM IST
Priyanka Gandhi: ಅಸ್ಸಾಂನಲ್ಲಿ ಟೀ ತೋಟದ ಕಾರ್ಮಿಕರೊಂದಿಗೆ ದಿನ ಕಳೆದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
  • Share this:
ದಕ್ಷಿಣ ಭಾರತದ ಪುದುಚೇರಿ, ತಮಿಳುನಾಡು ಮತ್ತು ಕೇರಳ ಚುನಾವಣೆ ಹಿನ್ನಲೆ ರಾಹುಲ್ ಇಲ್ಲಿನ ಸ್ಥಳೀಯರೊಂದಿಗೆ ಬೆರೆಯುತ್ತ ಚುನಾವಣಾ ಪ್ರಚಾರ ನಡೆಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್​ ಸಬಲಗೊಳಿಸಲು ರಾಹುಲ್​ ಮುಂದಾದರೆ, ಅತ್ತ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಪ್ರಿಯಾಂಕಾ ಗಾಂಧಿ ಜನರೊಂದಿಗೆ ಬೆರೆಯುತ್ತ ಮತದಾರರ ಸೆಳೆಯಲು ಮುಂದಾಗಿದ್ದಾರೆ. ಅಸ್ಸಾಂನಲ್ಲಿ ಸ್ಥಳೀಯ ಟೀ ತೋಟದ ಕಾರ್ಮಿಕರೊಂದಿಗೆ ಸೇರಿ ಅವರು ಚಹಾದ ಎಲೆಗಳನ್ನು ಕಿತ್ತು ಆತ್ಮೀಯವಾಗಿ ಒಡನಾಟ ನಡೆಸಿದ್ದಾರೆ. ಅಸ್ಸಾಂನ ಬಿಸ್ವಾನಾಥದಲ್ಲಿನ ಚಹಾ ತೋಟದಲ್ಲಿ ಅಲ್ಲಿನ ಸ್ಥಳೀಯ ಕಾರ್ಮಿಕರಂತೆ ಪ್ರಿಯಾಂಕಾ ಸೀರೆ ಧರಿಸಿ, ಪುಟ್ಟಿಯನ್ನು ಹೆಗಲಿಗೇರಿಸಿಕೊಂಡು ಚಹಾ ಕಿತ್ತಿದ್ದಾರೆ. ಈ ಅನುಭವವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಚಹಾ ತೋಟದ ಕಾರ್ಮಿಕ ಜೀವನ ಸರಳ ಮತ್ತು ನಿಜಾಯಿತಿಯಿಂದ ಕೂಡಿದೆ. ಅವರ ಶ್ರಮ ದೇಶಕ್ಕೆ ಅಮೂಲ್ಯ ಕೊಡಗೆ. ಅವರೊಟ್ಟಿಗೆ ನಾನು ಕೆಲಸ ಮಾಡುತ್ತ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಯತ್ನ ನಡೆಸಿದೆ. ಈ ವೇಳೆ ಅವರ ಕೆಲಸದ ಕಷ್ಟದ ಬಗ್ಗೆ ಅರಿವು ಆಯಿತು. ಅವರಿಂದ ಪಡೆದ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಹಿಂದಿಯಲ್ಲಿ ಬರೆದುಕೊಂಡು ಟ್ವೀಟ್​ ಮಾಡಿದ್ದಾರೆ.


ಇದರ ಜೊತೆಗೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರೊಟ್ಟಿಗಿನ ವಿಡಿಯೋವನ್ನು ಹಂಚಿಕೊಂಡು ಘಟನೆ ಮೆಲುಕು ಹಾಕಿದ್ದಾರೆ.ಇದಕ್ಕೂ ಮುನ್ನ ಪ್ರಿಯಾಂಕಾ ಉತ್ತರ ಅಸ್ಸಾಂನ ಲಖಿಂಪುರದಲ್ಲಿ ಚಹಾ ಬುಡಕಟ್ಟು ಜನರೊಂದಿಗೆ ಬೆರೆತು, ಅವರೊಟ್ಟಿಗೆ ಹೆಜ್ಜೆ ಹಾಕಿದ್ದರು. ಇಲ್ಲಿನ ಬುಡಕಟ್ಟು ಜನರ ಗಮೋಸಾ ಎಂಬ ಉಡುಗೆ ತೊಟ್ಟು, ಜಮೂರು ಎಂಬ ಸ್ಥಳೀಯ ನೃತ್ಯ ಮಾಡಿ ಅವರ ಮೆಚ್ಚುಗೆ ಪಡೆದಿದ್ದರು.
Published by: Seema R
First published: March 2, 2021, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories