• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pawan Khera: ರಾಹುಲ್ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಮತ್ತೋರ್ವ ‘ಕೈ’ ಮುಖಂಡ! ಯಾಕೆ ಗೊತ್ತಾ?

Pawan Khera: ರಾಹುಲ್ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಮತ್ತೋರ್ವ ‘ಕೈ’ ಮುಖಂಡ! ಯಾಕೆ ಗೊತ್ತಾ?

Pawan khera

Pawan khera

ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ನೀವು ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸಿದರೆ, ರಾಹುಲ್ ಗಾಂಧಿ ಸಂಸತ್ತಿನ ಒಳಗಲ್ಲ ಹೊರಗಾದರೂ ಮಾತನಾಡುತ್ತಾರೆ. ರಾಹುಲ್ ಗಾಂಧಿ ಅವರು ಅದಾನಿಯ ಹೆಸರನ್ನು ಹೇಳಿದಾಗ ನೀವು (ಬಿಜೆಪಿ) ಭಯಪಡುತ್ತೀರಿ, ಅವರು ಬೀದಿಗಿಳಿದರೆ ನೀವು ನಡುಗುತ್ತೀರಿ ಎಂದು ಪವನ್ ಖೇರಾ ಎಚ್ಚರಿಕೆ ನೀಡಿದರು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ನವದೆಹಲಿ: ಲೋಕಸಭಾ ಸದಸ್ಯ ಸ್ಥಾನದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಅನರ್ಹಗೊಳಿಸಿದ (Disqualified) ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರು ಕಳೆದ ವರ್ಷ ತಾನು ಮಾಡಿದ ವಿವಾದಿತ ಟ್ವೀಟ್‌ಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ.


2022ರಲ್ಲಿ ರಾಜ್ಯಸಭಾ ಸ್ಥಾನದ ಸೀಟ್‌ಗಾಗಿ ಪಕ್ಷದ ವಿರುದ್ಧವೇ ಕಿಡಿಕಾರಿದ್ದ ಪವನ್ ಖೇರಾ ಅವರು ಇದೀಗ ತಮ್ಮ ಪಕ್ಷದ ನಾಯಕರ ಬಳಿ ಕ್ಷಮೆಯಾಚಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ರಾಜ್‌ಘಾಟ್‌ನಲ್ಲಿ ನಡೆದ ‘ಸಂಕಲ್ಪ ಸತ್ಯಾಗ್ರಹ’ ಹೆಸರಿನ ಅಹೋರಾತ್ರಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ನಾನು ಅಧಿಕಾರದಿಂದ ದೂರವಿದ್ದು, ಪಕ್ಷ ಸಂಘಟನೆಯ ತಪಸ್ಸನ್ನು ಮುಂದುವರಿಸುವ ರಾಹುಲ್ ಗಾಂಧಿ ಅವರ ಛಲದಿಂದ ಸ್ಪೂರ್ತಿ ಪಡೆದು ನನ್ನ ತಪ್ಪನ್ನು ಅರಿತುಕೊಂಡಿದ್ದೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Disqualification: ಅನರ್ಹಗೊಂಡವರು ರಾಹುಲ್ ಗಾಂಧಿ ಒಬ್ಬರೇ ಅಲ್ಲ, ಲಿಸ್ಟ್‌ನಲ್ಲಿದ್ದಾರೆ ಘಟಾನುಘಟಿಗಳು!


ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ನೀವು ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸಿದರೆ, ರಾಹುಲ್ ಗಾಂಧಿ ಸಂಸತ್ತಿನ ಒಳಗಲ್ಲ ಹೊರಗಾದರೂ ಮಾತನಾಡುತ್ತಾರೆ. ರಾಹುಲ್ ಗಾಂಧಿ ಅವರು ಅದಾನಿಯ ಹೆಸರನ್ನು ಹೇಳಿದಾಗ ನೀವು (ಬಿಜೆಪಿ) ಭಯಪಡುತ್ತೀರಿ, ಅವರು ಬೀದಿಗಿಳಿದರೆ ನೀವು ನಡುಗುತ್ತೀರಿ ಎಂದು ಪವನ್ ಖೇರಾ ಎಚ್ಚರಿಕೆ ನೀಡಿದರು.


ಕಳೆದ ವರ್ಷ ಮೇ 29 ರಂದು ಪಕ್ಷದ ರಾಜ್ಯಸಭಾ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಪವನ್ ಖೇರಾ ಅವರು ತಮ್ಮ ಟ್ವೀಟ್ ಅನ್ನು ಉಲ್ಲೇಖಿಸಿ, “ನಾನು ನಿಮ್ಮೆಲ್ಲರ ಬಳಿ, ನನ್ನ ನಾಯಕತ್ವದ ಸ್ವಾರ್ಥಕ್ಕಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ರಾಜ್ಯಸಭಾ ಸ್ಥಾನ, ನಾನು 'ಶಾಯದ್ ಮೇರಿ ತಪಸ್ಯ ಮೇ ಕುಚ್ ಕಾಮಿ ರೆಹ್ ಗಯಿ' ಎಂದು ಬರೆದಿದ್ದೇನೆ. ಈಗ ರಾಹುಲ್ ಗಾಂಧಿ ಅವರು ಅಧಿಕಾರದಿಂದ ದೂರ ಸರಿದಿದ್ದಾರೆ. ಅಲ್ಲದೇ ಈಗಲೂ ತಮ್ಮ ತಪಸ್ಸನ್ನು ಅವರು ಮುಂದುವರೆಸುತ್ತಿದ್ದಾರೆ, ಅದಕ್ಕಿಂತ ದೊಡ್ಡದು ಏನಿದೆ ಎಂದು ಪವನ್ ಖೇರಾ ಹೇಳಿದ್ದಾರೆ.


ನಾವು ಹೋರಾಡಿ ಗೆಲ್ಲುತ್ತೇವೆ


ಅಲ್ಲದೇ, ‘ನಾನು ಸ್ವಾರ್ಥದಿಂದ ನಡೆದುಕೊಂಡಿದ್ದಕ್ಕೆ ಇಂದು ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ. ನಾನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಇದು ಹೋರಾಟದ ಸಮಯ, ಧ್ವನಿ ಎತ್ತುವ ಸಮಯ, ಅಧಿಕಾರ ಬರುತ್ತದೆ ಅಥವಾ ಹೋಗುತ್ತದೆ. ನಾವು ಹೋರಾಡಿ ಗೆಲ್ಲುತ್ತೇವೆ" ಎಂದು ಖೇರಾ ಸಭೆಯನ್ನುದ್ದೇಶಿಸಿ ಹೇಳಿದರು. ಈ ವೇಳೆ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.


ಇದನ್ನೂ ಓದಿ: Rahul Gandhi: ಅತ್ತ ವಯನಾಡಲ್ಲಿ ಉಪಚುನಾವಣೆಗೆ ಸಿದ್ಧತೆ, ಇತ್ತ  ಅನರ್ಹ ಸಂಸದ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡ ರಾಹುಲ್ ಗಾಂಧಿ!


ದುರಾಹಂಕಾರದ ಸರ್ಕಾರ


‘ಸಂಕಲ್ಪ ಸತ್ಯಾಗ್ರಹ’ ಹೆಸರಿನ ಅಹೋರಾತ್ರಿ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ದುರಹಂಕಾರದ ಸರ್ಕಾರದ’ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ, ಏಕೆಂದರೆ ರಾಹುಲ್ ಗಾಂಧಿ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ದೇಶಕ್ಕೆ ಮತ್ತು ದೇಶಕ್ಕೆ ಒಳ್ಳೆಯದಲ್ಲ. ನನ್ನ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸಿದೆ ಎಂದರು.


top videos



    ಈ ದೇಶದ ಪ್ರಜಾಪ್ರಭುತ್ವಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ. ಕಾಂಗ್ರೆಸ್‌ನ ಮಹಾನ್ ನಾಯಕರು ಈ ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿದರು. ಅವರು ನಮ್ಮನ್ನು ಹೆದರಿಸಬಹುದು ಎಂದು ಅವರು ಭಾವಿಸಿದರೆ, ಅದು ತಪ್ಪು. ನಾವು ಹೆದರುವುದಿಲ್ಲ. ಇನ್ನು ಮುಂದೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.

    First published: