ಚಂಡೀಗಢ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ( Navjot Singh Sidhu) ಮತ್ತು ಸಿಎಂ ಚರಣ್ಜಿತ್ ಸಿಂಗ್ ಚನ್ನಿ (Charanjit Singh Channi) ಸಭೆ ಯಶಸ್ವಿಯಾಗಿದೆ. ನ್ಯೂಸ್ 18 ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ಹಾಕಿದ್ದ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ. ಬೇಡಿಕೆ ಈಡೇರಿಸುವ ಕುರಿತು ಮೌಖಿಕ ಒಪ್ಪಿಗೆ ನೀಡಿರುವ ಸಿಎಂ, ಅಕ್ಟೋಬರ್ 4 ರಂದು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಗಳಿವೆ. ಸಭೆಗೂ ಮುನ್ನ ಸಿಎಂ ಅಕ್ಟೋಬರ್ 4ರಂದು ಸಂಪುಟ ಸಭೆ ಕರೆದಿದ್ದಾರೆ. ಮಂತ್ರಿಮಂಡಲದ ಜೊತೆ ಚರ್ಚಿಸಿ ಸಿಎಂ ಯಾವ ನಿರ್ಧಾರ ಪ್ರಕಟಿಸುತ್ತಾರೆ ಅನ್ನೋ ಕುತೂಹಲ ಕಾಂಗ್ರೆಸ್ ಅಂಗಳದಲ್ಲಿ ಮನೆ ಮಾಡಿದೆ.
ರಾಜೀನಾಮೆ ಹಿಂಪಡೆದ ಸಿಧು
ಇಂದು ನಡೆ¸ದ ಸಭೆಯಲ್ಲಿ ಶಾಸಕ ಗುರ್ದಿಪ್ ಇದ್ದರು ಎನ್ನಲಾಗಿದೆ. ಸಭೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಡೆಯಲು ಸಮ್ಮತಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗುರ್ದಿಪ್, ಸಿಧು ಅವರು ತಮ್ಮ ರಾಜೀನಾಮೆ ಹಿಂಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ರಾಜೀನಾಮೆ ಬಳಿಕ ಸಿಎಂ ಚನ್ನಿ ಅವರೇ ಸಿಧು ಅವರನ್ನ ಆಹ್ವಾನಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಂದೇಶ ರವಾನಿಸಿದ್ದರು. ಸಿಎಂ ಸಂದೇಶ ತಲುಪಿದ ಕೂಡಲೇ ತೆರಳದ ಸಿಧು, ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾದರು.
ಸಿಧು ಪಂಜಾಬ್ಗೆ ಸೂಕ್ತ ವ್ಯಕ್ತಿ ಅಲ್ಲ
ಈ ಎಲ್ಲ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಂಜಾಬ್ ರಾಜ್ಯಕ್ಕೆ ಸಿಧು ಸೂಕ್ತ ವ್ಯಕ್ತಿ ಅಲ್ಲ. ಅವರನ್ನ ಮುಖ್ಯಮಂತ್ರಿಯಾಗಲು ನಾನು ಅವಕಾಶ ನೀಡಲ್ಲ. ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೂ ಗೆಲ್ಲಲು ಬಿಡಲ್ಲ. ಕಾಂಗ್ರೆಸ್ ವಿರೋಧವಾಗಿ ಪ್ರಚಾರ ಮಾಡುತ್ತೇನೆ. ನಾನು ಸಹ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆದ್ರೆ ಯಾವ ದಿನವೂ ಸಿಧು ರೀತಿ ನಡೆದುಕೊಂಡಿಲ್ಲ. ಸೆಪ್ಟಂಬರ್ 28ರಂದು ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು, ಸಿಎಂ ಚನ್ನಿ ಸಂಪುಟ ವಿಸ್ತರಣೆ ಕುರಿತು ಅಸಮಾಧಾನ ಹೊರ ಹಾಕಿದ್ದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಸಿಧು, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡೋದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Amrinder Singh Next Move: ಬಿಜೆಪಿ ಸೇರಲ್ಲ, ಕಾಂಗ್ರೆಸ್ನಲ್ಲಿ ಇರಲ್ಲ: ಅಮರೀಂದರ್ ಸಿಂಗ್ ಮುಂದಿನ ನಡೆ?
ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ
ಪಂಜಾಬ್ ಕಾಂಗ್ರೆಸ್ ಬೆಳವಣಿಗೆ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಹಿರಿಯ ನಾಯಕ ಕಪಿಲ್ ಸಿಬಲ್, ಪಕ್ಷದಲ್ಲಿ ಯಾರೂ ಅಧ್ಯಕ್ಷರಿಲ್ಲ. ಆದ್ರೂ ಕೆಲವೊಂದು ನಿರ್ಧಾರಗಳನ್ನು ತೆಗೆ ದುಕೊಳ್ಳಲಾಗುತ್ತಿದೆ. ಆದ್ರೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿರೋದು ಯಾರು ಅನ್ನೋದು ನಮಗೂ ತಿಳಿಯುತ್ತಿಲ್ಲ. ಕಾಂಗ್ರೆಸ್ ವರ್ಕಿಂಗ್ ಕಮೀಟಿ ಸಭೆ ಕರೆದ್ರೆ ಈ ಎಲ್ಲ ವಿಷಯಗಳ ಕುರಿತು ಚಿಂತನ- ಮಂಥನ ನಡೆಸಬಹುದು. ಕಳೆದ ವರ್ಷವೇ ಪಕ್ಷದ ಅಧ್ಯಕ್ಷರ ಚುನಾವಣೆ ನಡೆಸಬೇಕೆಂದು ಪತ್ರ ಬರೆಯಲಾಗಿತ್ತು. ಆದ್ರೆ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಈ ಶಕ್ತಹೀನವಾಗುತ್ತಿರೋದನ್ನು ನಮ್ಮಿಂದ ನೋಡಲು ಆಗುತ್ತಿಲ್ಲ. ಏನ್ ಮಾಡೋದು ನಮ್ಮ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರು ಇರೋದಿರೋದು ದೌರ್ಭಾಗ್ಯ ಎಂದು ಬೇಸರ ಹೊರ ಹಾಕಿದ್ದರು.
ವರದಿ: ಮೊಹ್ಮದ್ ರಫೀಕ್ ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ