ಮಹಾರಾಷ್ಟ್ರ ಸ್ಪೀಕರ್ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವಿರೋಧ ಆಯ್ಕೆ

ಕಾಂಗ್ರೆಸ್​ನ ನಾನಾ ಪಟೋಲೆ ಜೊತೆಗೆ ಬಿಜೆಪಿಯ ಶಾಸಕ ಕಿಷನ್ ಎಸ್ ಕಥೋರೆ ಕೂಡ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿದೆ.

Sushma Chakre | news18-kannada
Updated:December 1, 2019, 11:37 AM IST
ಮಹಾರಾಷ್ಟ್ರ ಸ್ಪೀಕರ್ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವಿರೋಧ ಆಯ್ಕೆ
ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ನಾನಾ ಪಟೋಲೆ
  • Share this:
ಮುಂಬೈ (ಡಿ. 1): ಮಹಾರಾಷ್ಟ್ರದಲ್ಲಿ ರಚನೆಯಾಗಿದ್ದ ಎನ್​ಸಿಪಿ-ಶಿವಸೇನೆ-ಕಾಂಗ್ರೆಸ್ ಮೈತ್ರಿ ಸರ್ಕಾರ ಈಗಾಗಲೇ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನವನ್ನು ಎನ್​ಸಿಪಿ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ವಿರುದ್ಧ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದ ಬಿಜೆಪಿ ಶಾಸಕ ಕಿಷನ್ ಎಸ್. ಕಥೋರೆ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ನಾನಾ ಪಟೋಲೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್​ನ ನಾನಾ ಪಟೋಲೆ ಜೊತೆಗೆ ಬಿಜೆಪಿಯ ಶಾಸಕ ಕಿಷನ್ ಎಸ್ ಕಥೋರೆ ಕೂಡ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಹೀಗಾಗಿ, ಇಂದಿನ ಸದನದಲ್ಲಿ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 56 ವರ್ಷದ ನಾನಾ ಪಟೋಲೆ ಓಬಿಸಿ ಕುಣಬಿ ಸಮುದಾಯಕ್ಕೆ ಸೇರಿದ ರಾಜಕಾರಣಿ. ಮಹಾರಾಷ್ಟ್ರ ಪೂರ್ವಭಾಗದ ವಿದರ್ಭಾ ಪ್ರದೇಶದ ಹಿಂದುಳಿದ ಕುಣಬಿ ಸಮುದಾಯದ ಕೃಷಿಕರ ಕುಟುಂಬದಿಂದ ಬಂದವರು.

ಗಿಡ್ಡ ಪ್ಯಾಂಟ್ ಧರಿಸಿದ್ದಕ್ಕೆ ಹೊಡೆದು, ಕ್ಲಾಸ್​ನಿಂದ ಹೊರಹಾಕಿದ ಶಿಕ್ಷಕಿ; ನೊಂದ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು

ಪಕ್ಷೇತರರಾಗಿದ್ದ ಅವರು 2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಆ ಚುನಾವಣೆಯಲ್ಲಿ ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ಅವರು ಎನ್​ಸಿಪಿಯ ಪ್ರಬಲ ಅಭ್ಯರ್ಥಿ ಪ್ರಫುಲ್ ಪಟೇಲ್ ಅವರನ್ನ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಲೋಕಸಭೆ ಚುನಾವಣೆಯ ನಂತರ ನಾನಾ ಪಟೋಲೆ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಸೇರಿದರು. ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯಲ್ಲಿ ಬಂಡಾಯ ಎದ್ದ ಮೊದಲ ಸಂಸದ ನಾನಾ ಪಟೋಲೆ.
First published:December 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ