ಲಕ್ನೋ: ಉತ್ತರ ಪ್ರದೇಶ (Uttarpradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೇಸರಿ ಉಡುಪಿನ (saffron outfit) ಬಗ್ಗೆ ಮಹಾರಾಷ್ಟ್ರದ (Maharashtra) ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಹುಸೇನ್ ದಳವಾಯಿ ( Congress leader and former MP, Hussain Dalwai) ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಕೇಸರಿ ಬಟ್ಟೆ ಕಳಚಿಟ್ಟು, ಮಾಡ್ರೆನ್ ಬಟ್ಟೆಗಳನ್ನು ಧರಿಸಿ ಎಂದು ಹೇಳಿದ್ದಾರೆ. ಪ್ರತಿದಿನ ಧರ್ಮದ ಬಗ್ಗೆ ಮಾತನಾಡಬೇಡಿ, ಕೇಸರಿ ಬಟ್ಟೆಗಳನ್ನು ಧರಿಸಬೇಡಿ ಮತ್ತು ಸ್ವಲ್ಪ ಮಾಡರ್ನ್ (Modren) ಆಗಿರಿ. ಆಧುನಿಕ ವಿಚಾರಗಳನ್ನು ಅಳವಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.ಮುಂದಿನ ತಿಂಗಳು ಲಕ್ನೋದಲ್ಲಿ (Lucknow) ಜಾಗತಿಕ ಹೂಡಿಕೆದಾರರ ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆ ದೇಶೀಯ ಹೂಡಿಕೆದಾರರನ್ನು ಸೆಳೆಯಲು ಮುಂಬೈಗೆ ಎರಡು ದಿನಗಳ ಕಾಲ ಭೇಟಿ ನೀಡಿರುವ ಯೋಗಿ ಆದಿತ್ಯನಾಥ್ ವಿರುದ್ಧ ಹುಸೇನ್ ದಳವಾಯಿ ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲೇ ಹೊಸ ಉದ್ಯಮ ಆರಂಭಿಸಲಿ
ಮಹಾರಾಷ್ಟ್ರದಿಂದ ಉದ್ಯಮಗಳನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಬದಲು ತನ್ನದೇ ರಾಜ್ಯದಲ್ಲಿ ಹೊಸದಾಗಿ ಉದ್ಯಮಗಳನ್ನು ಯೋಗಿ ಆದಿತ್ಯನಾಥ್ ಆರಂಭಿಸಲಿ ಎಂದು ಹೇಳಿದ್ದಾರೆ.
ಮಹಾರಾಷ್ಟ್ರವು ಕೈಗಾರಿಕಾ ಉದ್ಯಮಕ್ಕೆ ಉತ್ತಮ ಸೌಲಭ್ಯಗಳನ್ನು ಒದಗಿಸಿದೆ. ಹಾಗಾಗಿ ಮಹಾರಾಷ್ಟ್ರದಿಂದ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗುವ ಬದಲು ಉತ್ತರ ಪ್ರದೇಶದಲ್ಲಿಯೇ ಹೊಸ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು. ಉದ್ಯಮ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವ ವಾತಾವರಣ ನಿರ್ಮಿಸಿ ಎಂದು ತಿಳಿಸಿದ್ದಾರೆ.
ಆದಿತ್ಯನಾಥ್ ಕೊಂಚ ಆಧುನಿಕತೆ ಅಳವಡಿಸಿಕೊಳ್ಳಬೇಕು
ಉದ್ಯಮವು ಆಧುನಿಕತೆಯ ಸಂಕೇತವಾಗಿರುವುದರಿಂದ ಯೋಗಿ ಆದಿತ್ಯನಾಥ್ ಅವರು ಕೂಡ ಕೊಂಚ ಆಧುನಿಕತೆಯನ್ನು (ಮಾಡ್ರನ್) ಅಳವಡಿಸಿಕೊಳ್ಳಬೇಕು
ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸಾಮಾಥ್ರ್ಯ ಹೊಂದಿದೆ. ಮಂತ್ರಿಗಳು ಮತ್ತು ಅಧಿಕಾರಿಗಳ ತಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ (ಜಿಐಎಸ್ 2023) ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಅವರಿಗೆ ಪರಿಚಯಿಸಲು ವಿದೇಶಗಳಲ್ಲಿ ರೋಡ್ಶೋಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಮುಖ್ಯಮಂತ್ರಿಗಳು ಇಂದು ಮುಂಬೈನಿಂದ ದೇಶೀಯ ರೋಡ್ಶೋಗಳನ್ನು ಪ್ರಾರಂಭಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನೋಯ್ಡಾದಲ್ಲಿರುವ ಫಿಲ್ಮ್ ಸಿಟಿಯಲ್ಲಿ ದೇಶದ ಪ್ರಮುಖ ಉದ್ಯಮಿಗಳು, ಬ್ಯಾಂಕರ್ಗಳು ಮತ್ತು ಪ್ರಮುಖ ಚಲನಚಿತ್ರ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ
21 ನಗರಗಳಿಗೆ ಭೇಟಿ ನೀಡಿ ₹ 7.12 ಲಕ್ಷ ಕೋಟಿ ಮೊತ್ತದ ಹೂಡಿಕೆ
ಡಿಸೆಂಬರ್ನಲ್ಲಿ ಸಿಎಂ ಯೋಗಿ ನೇತೃತ್ವದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಎಂಟು ನಿಯೋಗಗಳು 16 ದೇಶಗಳ 21 ನಗರಗಳಿಗೆ ಭೇಟಿ ನೀಡಿ ₹ 7.12 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿರುವುದು ಗಮನಾರ್ಹ ವಿಚಾರವಾಗಿದೆ.
ಫೆಬ್ರವರಿ 10 ರಿಂದ 12 ರ ವರೆಗೆ ಲಕ್ನೋದಲ್ಲಿ ನಡೆಯಲಿರುವ ಯುಪಿ ಸರ್ಕಾರದ ಜಾಗತಿಕ ಹೂಡಿಕೆದಾರರ ಶೃಂಗಸಭೆಗೂ ಮುಂಚಿತವಾಗಿ ದೇಶೀಯ ಹೂಡಿಕೆದಾರರನ್ನು ಆಕರ್ಷಿಸಲು ಯೋಗಿ ಆದಿತ್ಯನಾಥ್ ಮುಂಬೈಗೆ ಭೇಟಿ ನೀಡಿದ್ದಾರೆ.
ಬುಲ್ಡೋಜರ್ಗಳು ಎರಡು ರೀತಿಯ ಆಟ ಎಂದ ಯೋಗಿ
ಇದೇ ವೇಳೆ 'ಬುಲ್ಡೋಜರ್ ಬಾಬಾ' ಟ್ಯಾಗ್ ಕುರಿತು ಕೇಳಿದಾಗ, ಬುಲ್ಡೋಜರ್ಗಳು ಎರಡು ರೀತಿಯ ಆಟ ಆಡುತ್ತವೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಅವುಗಳು ಶಾಂತಿ ಮತ್ತು ಬೆಳವಣಿಗೆಯ ಸಂಕೇತಗಳಾಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Muzaffarnagar: ರಸ್ತೆಅಗಲೀಕರಣ, 300 ವರ್ಷ ಹಳೇ ಮಸೀದಿ ಮೇಲೆ ಹತ್ತಿದ ಬುಲ್ಡೋಜರ್, ಕ್ಷಣಾರ್ಧದಲ್ಲಿ ಧ್ವಂಸ!
ಜನರು ಕಾನೂನುಗಳನ್ನು ಉಲ್ಲಂಘಿಸಿದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲು ಬುಲ್ಡೋಜರ್ಗಳನ್ನು ಬಳಸಬಹುದು. ನಮ್ಮ ರಾಜ್ಯದಲ್ಲಿ ಅಪರಾಧಿಗಳ ಸಂಬಂಧಿಸಿದ ಕಟ್ಟಡಗಳನ್ನು ಕೆಡವಿದ ನಂತರ 'ಬುಲ್ಡೋಜರ್ ಬಾಬಾ' ಎಂಬ ಹಣೆಪಟ್ಟಿ ನನಗೆ ಸಿಕ್ಕಿತು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ