Jitin Prasada : ಕಾಂಗ್ರೆಸ್​ ತೊರೆದ ರಾಹುಲ್ ಗಾಂಧಿ​ ಆಪ್ತ; ಬಿಜೆಪಿ ಸೇರಿದ ಜಿತಿನ್​ ಪ್ರಸಾದ್​​

ಕಾಂಗ್ರೆಸ್​ನ ಜಿ-23 ಭಿನ್ನಮತೀಯರ ಗುಂಪಿನಲ್ಲಿ ಜಿತಿನ್ ಪ್ರಸಾದ್​ ಕೂಡ​ ಗುರುತಿಸಿ ಕೊಂಡಿದ್ದರು

ಜಿತಿನ್​ ಪ್ರಸಾದ್​​

ಜಿತಿನ್​ ಪ್ರಸಾದ್​​

  • Share this:
    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ವರ್ಷ ಬಾಕಿ ಇರುವ ಮುನ್ನವೇ ಕಾಂಗ್ರೆಸ್​ಗೆ ಹಿನ್ನಡೆಯುಂಟಾಗಿದೆ. ರಾಹುಲ್​ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಜಿತಿನ್​ ಪ್ರಸಾದ್​ ಇಂದು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಕೈ ನಾಯಕರಿಗೆ ಶಾಕ್​ ನೀಡಿದ್ದಾರೆ. ಕಾಂಗ್ರೆಸ್​ ಪಕ್ಷದ ವರ್ತನೆಯಿಂದ ಈಗಾಗಲೇ ಬೇಸತ್ತಿದ್ದ ಜಿತಿನ್​ ಇಂದು ಅಧಿಕೃತವಾಗಿ ಕಮಲ ಪಾಳೆಯ ಸೇರಿದ್ದಾರೆ. ಕಾಂಗ್ರೆಸ್​ನ ಜಿ-23 ಭಿನ್ನಮತೀಯರ ಗುಂಪಿನಲ್ಲಿ ಜಿತಿನ್ ಪ್ರಸಾದ್​ ಕೂಡ​ ಗುರುತಿಸಿ ಕೊಂಡಿದ್ದರು, ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಜಿತಿನ್​ ಬಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡನೆಗೊಂಡರು.

    ಪಕ್ಷಕ್ಕೆ ಸೇರ್ಪಡನೆಗೊಂಡ ಬಳಿಕ ಮಾತನಾಡಿದ ಅವರು, ಈ ಅವಕಾಶ ನೀಡಿದ್ದಕ್ಕೆ ಪ್ರಧಾನಿಗಳಿಗೆ, ಗೃಹ ಸಚಿವರಿಗೆ ಮತ್ತು ಪಕ್ಷದ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ, ತಮ್ಮ ರಾಜಕೀಯ ಜೀವನದಲ್ಲಿ ಇದು ಹೊಸ ಅಧ್ಯಯನವಾಗಲಿದೆ ಎಂದ ಅವರು, ದೇಶಕ್ಕಾಗಿ ದುಡಿಯುತ್ತಿರುವ ಏಕೈಕ ಪಕ್ಷ ಎಂದರೇ ಅದು ಭಾರತೀಯ ಜನತಾ ಪಕ್ಷ ಎಂದು ಹಾಡಿ ಹೊಗಳಿದರು.

    ನ್ಯೂಸ್​ 18 ಮೂಲಗಳ ಪ್ರಕಾರ ಜಿತಿನ್​ ಪ್ರಸಾದ್​ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಇದರ ಹೊರತಾಗಿ ಅವರು 2024ರ ಲೋಕಸಭಾ ಚುನಾವಣೆಯಲ್ಲೂ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗಿದೆ.
    2019ರಲ್ಲಿಯೇ ಜಿತಿನ್​ ಪ್ರಸಾದ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವಂದತಿಗಳು ಹಬ್ಬಿದ್ದವು. ಜೋತಿರಾಧಿತ್ಯ ಸಿಂಧ್ಯಾ ಬಳಿಕ ರಾಹುಲ್​ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎರಡನೇ ನಾಯಕ ಈಗ ಬಿಜೆಪಿ ಸೇರಿದ್ದಾರೆ

    ಇದನ್ನು ಓದಿ: ಲಸಿಕೆ ಮೇಲೂ ಜಿಎಸ್​ಟಿ ವಿಧಿಸಿದ ಕೇಂದ್ರ; ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನ್​ ದರ ನಿಗದಿ

    ಕಾಂಗ್ರೆಸ್​ ನಲ್ಲಿನ ನಾಯಕತ್ವ ಪ್ರಶ್ನಿಸಿ 23 ನಾಯಕರು ಹೈ ಕಮಾಂಡ್​ಗೆ ಪತ್ರ ಬರೆದಿದ್ದು, ಇದರಲ್ಲಿ ಜಿತಿನ್​ ಪ್ರಸಾದ್​ ಕೂಡ ಒಬ್ಬರಾಗಿದ್ದರು. ಈ ಘಟನೆ ಬಳಿಕ ಕಾಂಗ್ರೆಸ್ ಪಕ್ಷ ಜಿತಿನ್​ ಪ್ರಸಾದ್​ ಅವನ್ನು ಉತ್ತರ ಪ್ರದೇಶ ಲಖೀಂಪುರ್​ ಖೇರಿ ಪಕ್ಷದ ಘಟಕದಿಂದ ಇವರನ್ನು ಗಡಿಪಾರು ಮಾಡುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

    ಲಖಿಂಪುರ ಖೇರಿಯ ಧೌರಾಹ್ರಾ ಲೋಕಸಭಾ ಕ್ಷೇತ್ರವನ್ನು ಜಿತಿನ್​ ಪ್ರತಿನಿಧಿಸುತ್ತಿದ್ದಾರೆ. ಪಕ್ಷದ ಚಟುವಟಿಕೆಯಿಂದ ಜಿತಿನ್​ ಅಂತರ ಕಾಯ್ದಕೊಂಡಿದ್ದಾರೆ. ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯ ಪ್ರತಿನಿಧಿಸುತ್ತಿರುವ ಪ್ರಮುಖ ನಾಕರು ಇವರಾಗಿದ್ದಾರೆ. ಪ್ರಸ್ತುತ ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಬ್ರಾಹ್ಮಣ್​ ಚೇತ್ನಾ ಪರಿಷದ್​ನಲ್ಲಿ ಕೆಲಸ ಮಾಡುತ್ತಿರುವ ಇವರಿಂದ ಬ್ರಾಹ್ಮಣರ ಮತಗಳಿಸುವ ಆಲೋಚನೆಯಲ್ಲಿ ಬಿಜೆಪಿ ಇದೆ.

    ಕೋವಿಡ್​ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್​ ಕಾರ್ಯದ ಬಗ್ಗೆ ಈಗಾಗಲೇ ಕೇಂದ್ರದ ಬಿಜೆಪಿ ನಾಯಕರ ಅಸಮಾಧಾನ ಹೊಂದಿದ್ದಾರೆ. ಅಷ್ಟೇ ಅಲ್ಲದೇ, ಶೇ. 13ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯವನ್ನು ರಾಜ್ಯದಲ್ಲಿ ಅಲಕ್ಷಿಸಿದ್ದಾರೆ ಎಂಬ ಆರೋಪ ಕೂಡ ಅವರ ಮೇಲಿದೆ.  ಈ ಹೊತ್ತಿನಲ್ಲಿ ಜಿತಿನ್​ ಪ್ರಸಾದ್​ ಸೇರ್ಪಡೆ ಪಕ್ಷದಲ್ಲಿ ಇನ್ನಷ್ಟು ಗಮನಸೆಳೆದಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
    Published by:Seema R
    First published: