ನೀವು ಟ್ರಂಪ್​ಗೆ ಸ್ಟಾರ್ ಪ್ರಚಾರಕರಾದಿರಿ; ಬೇರೆ ದೇಶದ ಚುನಾವಣೆಯಲ್ಲಿ ಮೂಗು ತೂರಿಸಿದಿರಿ: ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಟೀಕೆ

ಅಮೆರಿಕದೊಂದಿಗೆ ಭಾರತ ಸದಾ ಉಭಯಪಕ್ಷೀಯ ಸಂಬಂಧ ಹೊಂದಿದೆ. ಅಲ್ಲಿ ರಿಪಬ್ಲಿಕನ್​ ಪಕ್ಷ ಇರಲಿ, ಡೆಮಾಕ್ರಟಿಕ್​ ಪಕ್ಷ ಇರಲಿ ಎರಡರೊಂದಿಗೂ ಭಾರತ ಸಂಬಂಧ ಹೊಂದಬೇಕು. ಇದನ್ನು ಮರೆತು, ಮೋದಿ ಟ್ರಂಪ್​ ಪರವಾಗಿ ಅಮೆರಿಕದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಎರಡೂ ದೇಶಗಳ ಸಾರ್ವಭೌಮತೆ ಮತ್ತು ಪ್ರಜಾಸತ್ತಾತ್ಮಕತೆಗೆ ಅಪಚಾರ ಮಾಡಿದಂತಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

Seema.R | news18-kannada
Updated:September 23, 2019, 4:09 PM IST
ನೀವು ಟ್ರಂಪ್​ಗೆ ಸ್ಟಾರ್ ಪ್ರಚಾರಕರಾದಿರಿ; ಬೇರೆ ದೇಶದ ಚುನಾವಣೆಯಲ್ಲಿ ಮೂಗು ತೂರಿಸಿದಿರಿ: ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಟೀಕೆ
ನರೇಂದ್ರ ಮೋದಿ ಹಾಗೂ ಡೊನಾಲ್ಡ್​ ಟ್ರಂಪ್
  • Share this:
ನವದೆಹಲಿ(ಸೆ. 23): ಅಮೆರಿಕದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ಸಂಸದ ಆನಂದ್​ ಶರ್ಮಾ ಹರಿಹಾಯ್ದಿದ್ದಾರೆ. ನೀವು ಅಮೆರಿಕದಲ್ಲಿ ನಮ್ಮ ದೇಶದ ಪ್ರಧಾನಿಯಾಗಿ ಹೋಗಿದ್ದಿರಿ ಹೊರತು ಅಮೆರಿಕ ಚುನಾವಣೆಯ ಸ್ಟಾರ್​ ಪ್ರಚಾರಕರಾಗಿ ಅಲ್ಲ ಎಂದು ನೆನಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ಬೇರೆ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಕಾಲಕಾಲದಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ನೀತಿಯನ್ನು ಪ್ರಧಾನಿ ಮೋದಿ ಗಾಳಿಗೆ ತೂರಿದ್ದಾರೆ ಎಂದು ಆನಂದ್ ಶರ್ಮಾ ತಮ್ಮ ಟ್ವೀಟ್​ನಲ್ಲಿ ಟೀಕಿಸಿದ್ದಾರೆ.

ಟೆಕ್ಸಾಸ್ ರಾಜ್ಯದ ಹೋಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಎಂಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ಡೋನಾಲ್ಡ್​ ಟ್ರಂಪ್​ರೊಂದಿಗೆ ಭಾಗಿಯಾದ ಪ್ರಧಾನಿ ಮೋದಿ ಅದ್ಧೂರಿ ಸ್ವಾಗತ ಪಡೆದಿದ್ದರು. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಮರು ಆಯ್ಕೆಗೆ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ವಿಶೇಷ ವ್ಯಕ್ತಿ ಎಂದು ನರೇಂದ್ರ ಮೋದಿ ಅವರು 50 ಸಾವಿರ ಭಾರತೀಯ ಅಮೆರಿಕನ್ ಜನರ ಸಮ್ಮುಖದಲ್ಲಿ ಗುಣಗಾನ ಮಾಡಿದ್ದರು.


ಅಮೆರಿಕದೊಂದಿಗೆ ಭಾರತ ಸದಾ ಉಭಯಪಕ್ಷೀಯ ಸಂಬಂಧ ಹೊಂದಿದೆ. ಅಲ್ಲಿ ರಿಪಬ್ಲಿಕನ್​ ಪಕ್ಷ ಇರಲಿ, ಡೆಮಾಕ್ರಟಿಕ್​ ಪಕ್ಷ ಇರಲಿ ಎರಡರೊಂದಿಗೂ ಭಾರತ ಸಂಬಂಧ ಹೊಂದಬೇಕು. ಇದನ್ನು ಮರೆತು, ಮೋದಿ ಟ್ರಂಪ್​ ಪರವಾಗಿ ಅಮೆರಿಕದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಎರಡೂ ದೇಶಗಳ ಸಾರ್ವಭೌಮತೆ ಮತ್ತು ಪ್ರಜಾಸತ್ತಾತ್ಮಕತೆಗೆ ಅಪಚಾರ ಮಾಡಿದಂತಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

ಆದರೆ, ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಪಕ್ಷ ಮಾಡಿರುವ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ. ಆನಂದ್ ಶರ್ಮ ಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಅಭಿಪ್ರಾಯಪಟ್ಟಿದ್ದಾರೆ.

"ಕಾಂಗ್ರೆಸ್​ನ ಕೆಲವು ನಾಯಕರಿಗೆ ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಅಮೆರಿಕದ ಚುನಾವಣೆಯಲ್ಲಿ ಮೋದಿ ತಲೆ ಹಾಕುತ್ತಿದ್ದಾರೆ ಎಂದು ಆರೋಪಿಸುವುದು ಬಾಲಿಶತನವೆನಿಸುತ್ತದೆ. 2016ರಲ್ಲಿ ಭಾರತೀಯ ಅಮೆರಿಕನ್ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಅವರೇ ಅಬ್​ಕೀ ಬಾರ್ ಟ್ರಂಪ್ ಸರ್ಕಾರ್ ಎಂದು ಹೇಳಿದ್ದರು. ಮೋದಿ ಅವರು ಅದನ್ನಷ್ಟೇ ಉಲ್ಲೇಖಿಸಿದ್ದಾರೆ" ಎಂದು ಬಿಜೆಪಿ ಮುಖಂಡ ಸ್ಪಷ್ಟಪಡಿಸಿದ್ದಾರೆ.ವಾಷಿಂಗ್ಟನ್​ ಪೋಸ್ಟ್ ಪತ್ರಿಕೆಯ​ ಪ್ರಕಾರ, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್​ ಭಾಗಿಯಾಗಲು ಪ್ರಬಲ ಕಾರಣವಿದೆಯಂತೆ. 2020ರ ಚುನಾವಣೆಯಲ್ಲಿ ಟೆಕ್ಸಾಸ್​ನಲ್ಲಿ ಡೆಮಾಕ್ರಟಿಕ್​ ಪಕ್ಷದವರು ದೊಡ್ಡ ತಂತ್ರ ಹೆಣೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್​ಗೆ ಭಾರತೀಯ ಅಮೆರಿಕನ್ ಮತಗಳನ್ನು ಸೆಳೆಯಲು ಈ ಕಾರ್ಯಕ್ರಮವು ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ ಟ್ರಂಪ್ ಅವರಿಗೆ ಹೌಡಿ ಮೋದಿ ಕಾರ್ಯಕ್ರಮ ಅನುಕೂಲವಾಗಿ ಪರಿಣಮಿಸಬಹುದೆಂಬ ಅಂದಾಜಿದೆ.

ಇದನ್ನು ಓದಿ : onion Price: ಸೇಬಿಗಿಂತ ದುಬಾರಿಯಾದ ಈರುಳ್ಳಿ; ಗ್ರಾಹಕರ ಕಣ್ಣಲ್ಲಿ ನೀರು

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯದ ಶೇ. 80ರಷ್ಟು ಜನರು ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗೆ ಮತ ಹಾಕಿರುವ ಸಾಧ್ಯತೆ ಇದೆ ಎಂದು ಏಷ್ಯನ್​ ಅಮೆರಿಕನ್​ ಲೀಗಲ್​ ಡಿಫೆನ್ಸ್​ ಆ್ಯಂಡ್ ಎಜುಕೇಷನ್​ ಫಂಡ್ ಎಂಬ ಸಂಸ್ಥೆ ನಡೆಸಿದ​ ಚುನಾವಣಾ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಹೌಡಿ ಮೋದಿ ಕಾರ್ಯಕ್ರಮವು ಟ್ರಂಪ್​ಗೆ ನಿಜಕ್ಕೂ ಲಾಭ ತರುತ್ತಾ ಎಂಬ ಪ್ರಶ್ನೆಗೆ ಈಗಲೇ ಉತ್ತರಿಸಲು ಸಾಧ್ಯವಿಲ್ಲ.

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading