• Home
 • »
 • News
 • »
 • national-international
 • »
 • Congress Controversy: ಸಾಮೂಹಿಕ ಮತಾಂತರದಲ್ಲಿ ಹಿಂದೂ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದ ಕೈ ನಾಯಕಿ

Congress Controversy: ಸಾಮೂಹಿಕ ಮತಾಂತರದಲ್ಲಿ ಹಿಂದೂ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದ ಕೈ ನಾಯಕಿ

ಹೇಮಾ ದೇಶಮುಖ್

ಹೇಮಾ ದೇಶಮುಖ್

ನಾನು ಗೌರಿ, ಗಣಪತಿ ಅಥವಾ ಇತರ ಯಾವುದೇ ಹಿಂದೂ ದೇವರು ಮತ್ತು ದೇವತೆಗಳನ್ನು ಎಂದಿಗೂ ಅನುಸರಿಸುವುದಿಲ್ಲ ಮತ್ತು ಅವರನ್ನು ಎಂದಿಗೂ ಪೂಜಿಸುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಲಾಗಿದೆ.

 • Trending Desk
 • Last Updated :
 • Bangalore [Bangalore], India
 • Share this:

  ́ಹಿಂದೂ ́ ಪದ ಕಾಂಗ್ರೆಸ್‌ಗೆ ಒಂದು ರೀತಿಯ ಶಾಪವೇನೋ. ಒಂದಲ್ಲ ಒಂದು ಹಿಂದೂ ವಿವಾದದಲ್ಲಿ ಕಾಂಗ್ರೆಸ್‌ ನಾಯಕರು ಸಿಲುಕಿಕೊಂಡಿರುತ್ತಾರೆ. ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹಿಂದೂ ಪದದ ಮೂಲದ ಬಗ್ಗೆ (Hindu Word) ವಿವಾದಾತ್ಮಕವಾಗಿ ನೀಡಿರುವ ಹೇಳಿಕೆ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ಪರ-ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಒತ್ತಡಗಳ, ವಿರೋಧಗಳ ನಡುವೆ ತಮ್ಮ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಮಾಸುವ ಮುನ್ನ ಮತ್ತೋರ್ವ ಕಾಂಗ್ರೆಸ್ ನಾಯಕಿಯ (Congress Leader) ಹೆಸರು ಹಿಂದೂ ವಿರೋಧಿ ನಡೆಯಲ್ಲಿ ತಳುಕು ಹಾಕಿಕೊಂಡಿದೆ.


  ಹಿಂದೂ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದ ಕಾಂಗ್ರೆಸ್ ನಾಯಕಿ
  ಕಾಂಗ್ರೆಸ್ ನಾಯಕಿ, ಛತ್ತೀಸ್‌ಗಢದ ರಾಜಾನಂದಗಾಂವ್‌ನ ಮೇಯರ್, ಹೇಮಾ ದೇಶಮುಖ್ ಅವರು ಸಾಮೂಹಿಕ ಮತಾಂತರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಪಕ್ಷಕ್ಕೆ ಇನ್ನಷ್ಟು ಮುಜುಗರವನ್ನು ತಂದಿದೆ.


  ಛತ್ತೀಸ್‌ಗಢದ ಮತಾಂತರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ವಿರುದ್ಧ ಪ್ರಮಾಣ ವಚನ ಸ್ವೀಕರಿಸಲಾಯಿತು. "ನಾನು ಗೌರಿ, ಗಣಪತಿ ಅಥವಾ ಇತರ ಯಾವುದೇ ಹಿಂದೂ ದೇವರು ಮತ್ತು ದೇವತೆಗಳನ್ನು ಎಂದಿಗೂ ಅನುಸರಿಸುವುದಿಲ್ಲ ಮತ್ತು ಅವರನ್ನು ಎಂದಿಗೂ ಪೂಜಿಸುವುದಿಲ್ಲ. ಅವರು ದೇವರ ಅವತಾರ ಎಂದು ನಾನು ಎಂದಿಗೂ ನಂಬುವುದಿಲ್ಲ" ಎಂಬ ಪ್ರಮಾಣ ವಚನವನ್ನು ತೆಗೆದುಕೊಳ್ಳಲಾಗಿದೆ. ಸೋಮವಾರ ನಡೆದ ಮತಾಂತರ ಕಾರ್ಯಕ್ರಮದಲ್ಲಿ ಹೇಮಾ ದೇಶಮುಖ್ ಕೂಡ ಭಾಗವಹಿಸಿ ಪ್ರತಿಜ್ಞೆ ಸ್ವೀಕರಿಸಿದರು.


  ಹೇಮಾ ದೇಶಮುಖ್ ಸ್ಪಷ್ಟನೆ
  ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಹೇಮಾ ದೇಶಮುಖ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ನಾನು ಬೌದ್ಧ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದರೆ ಪ್ರಮಾಣ ವಚನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. "ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಕೂಡ ಅಲ್ಲಿದ್ದರು. ಹಿಂದೂ ವಿರೋಧಿ ಪ್ರಮಾಣ ಸ್ವೀಕರಿಸುವ ಬಗ್ಗೆ ನನಗೆ ತಿಳಿದಿರಲಿಲ್ಲ. ಅವರು ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ಅವರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ ತಕ್ಷಣ, ನಾನು ಹಿಂದೂ ಮತ್ತು ನನ್ನ ದೇವರು ಮತ್ತು ದೇವತೆಗಳ ವಿರುದ್ಧ ಹೇಳಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಕ್ಷಣ ನನ್ನ ಕೈಯನ್ನು ಕೆಳಗಿಳಿಸಿದೆ. ನಂತರ ನಾನು ಕಾರ್ಯಕ್ರಮದಿಂದ ಹೊರಬಂದೆ, ”ಎಂದು ಹೇಮಾ ದೇಶಮುಖ್ ಸ್ಪಷ್ಟನೆ ನೀಡಿದ್ದಾರೆ.


  "ಹಿಂದುತ್ವದ ವಿರುದ್ಧ ದ್ವೇಷ ಹರಡುವುದು ಕಾಂಗ್ರೆಸ್‌ನ ಏಕೈಕ ಉದ್ದೇಶ"
  ಕಾಂಗ್ರೆಸ್‌ ನಾಯಕರ ನಡವಳಿಕೆಗೆ ಬಿಜೆಪಿಯ ಕೆಲ ಮುಖಂಡರು ಕಿಡಿಕಾರಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಹಿಂದೂ ಧರ್ಮದ ವಿರುದ್ಧ ದ್ವೇಷವನ್ನು ಹರಡುವುದು ಕಾಂಗ್ರೆಸ್‌ನ ಏಕೈಕ ಉದ್ದೇಶವಾಗಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಗುಡುಗಿದ್ದಾರೆ.


  "ಕಾಂಗ್ರೆಸ್ ಪಕ್ಷ ಕ್ರಮ ತೆಗೆದುಕೊಳ್ಳುವುದಿಲ್ಲ"
  ಇತ್ತೀಚೆಗೆ ದೆಹಲಿಯಲ್ಲೂ ಕೂಡ ಬೌದ್ಧ ಧರ್ಮಕ್ಕೆ ಮತಾಂತರವಾಗುವ ಸಾಮೂಹಿಕ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಎಎಪಿ ನಾಯಕರಾದ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಭಾಗವಹಿಸಿದ್ದರು. ಮತ್ತು ಅಲ್ಲಿ ಹಿಂದೂ ವಿರೋಧಿ ಪ್ರಮಾಣವನ್ನು ಸ್ವೀಕರಿಸಿದ್ದರು. ಇದೇ ವಿಷಯವನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: Gujarat Election 2022: ಬಿಜೆಪಿಯಿಂದ ಮೊದಲ ಲಿಸ್ಟ್​ ಔಟ್​; 38 ಹಾಲಿ ಶಾಸಕರಿಗೆ ಗೇಟ್ ಪಾಸ್​!


  "ಶ್ರೀಕೃಷ್ಣ ಜಿಹಾದ್ ಕಲಿಸಿದ ಎಂದು ಹೇಳಿದ ಶಿವರಾಜ್ ಪಾಟೀಲ್ ಅಥವಾ ಹಿಂದೂ ಕೆಟ್ಟ ಪದ ಎಂದು ಹೇಳಿದ ಸತೀಶ್ ಜಕ್ರಿಹೊಳಿ ಆಗಿರಲಿ ಇವರ ಮೇಲೆ ಕಾಂಗ್ರೆಸ್ ಪಕ್ಷವು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ" ಎಂದು ಶೆಹಜಾದ್ ಹೇಳಿದರು.


  ಇದನ್ನೂ ಓದಿ: RTI ಅರ್ಜಿ ನಿರಾಕರಿಸಿದರೆ 25,000 ರೂಪಾಯಿ ದಂಡ; ಸರ್ಕಾರದ ಖಡಕ್ ಎಚ್ಚರಿಕೆ


  ಈ ಹಿಂದೆ 'ಹಿಂದೂ' ಪದದ ಅರ್ಥ ಅಶ್ಲೀಲವಾಗಿದೆ ಎಂದು ಹೇಳಿದ್ದ ಕರ್ನಾಟಕ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಬುಧವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿ ಅದನ್ನು ಹಿಂಪಡೆದಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: