Digvijay Singh Praised RSS: ಅಮಿತ್ ಶಾ, RSS ಹೊಗಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್; ಏನಿದು ಹೊಸ ವರಸೆ?

ಕಾಂಗ್ರೆಸ್​​ ಮುಖಂಡರ ಸಮ್ಮುಖದಲ್ಲಿಯೇ ದಿಗ್ವಿಜಯ್ ಸಿಂಗ್ ಈ ಮಾತುಗಳನ್ನಾಡಿದ್ದಾರೆ. ಯಾವಾಗಲೂ ಸಂಘ ಹಾಗೂ ಬಿಜೆಪಿ ವಿರುದ್ಧ ಕಿಡಿ ನುಡಿಗಳನ್ನಾಡುವ ದಿಗ್ವಿಜಯ್ ಸಿಂಗ್ ಅವರನ್ನ ನೋಡಿದ ಜನರು ಬುಧವಾರ ಒಂದು ಕ್ಷಣ ಇವರೇನಾ ಅವರು ಅಂತ ಯೋಚನೆ ಮಾಡುವಂತಾಗಿತ್ತು.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

 • Share this:
  ಭೋಪಾಲ್: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರನ್ನು ಕಾಂಗ್ರೆಸ್ ರಾಜ್ಯಸಭಾ ಸಂಸದ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ( Digvijaya Singh) ಗುಣಗಾನ ಮಾಡಿರೋದನ್ನ ಕಂಡು ಜನರು ಆಶ್ಚರ್ಯಚಕಿತಗೊಂಡಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಹಲವು ಕಾಂಗ್ರೆಸ್ (Congress) ಮುಖಂಡರ ಸಮ್ಮುಖದಲ್ಲಿಯೇ ದಿಗ್ವಿಜಯ್ ಸಿಂಗ್ ಈ ಮಾತುಗಳನ್ನಾಡಿದ್ದಾರೆ. ಯಾವಾಗಲೂ ಸಂಘ ಹಾಗೂ ಬಿಜೆಪಿ ವಿರುದ್ಧ ಕಿಡಿ ನುಡಿಗಳನ್ನಾಡುವ ದಿಗ್ವಿಜಯ್ ಸಿಂಗ್ ಅವರನ್ನ ನೋಡಿದ ಜನರು ಬುಧವಾರ ಒಂದು ಕ್ಷಣ ಇವರೇನಾ ಅವರು ಅಂತ ಯೋಚನೆ ಮಾಡುವಂತಾಗಿತ್ತು.

  ಸಾರ್ವಜನಿಕವಾಗಿ ಗುಣಗಾನ

  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದ ನರ್ಮದಾ ಪರಿಕ್ರಮಾ (Narmada Ytara) ಕುರಿತು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿಗ್ವಿಜಯ್ ಸಿಂಗ್ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಅಮಿತ್ ಶಾ ಅವರನ್ನ ಹೊಗಳಿದರು. ಆದ್ರೆ ಇದುವರೆಗೂ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿದರು. ನರ್ಮದಾ ಪರಿಕ್ರಮದ ವೇಳೆ ತಮಗೆ ಬಿಜೆಪಿ ಮತ್ತು ಸಂಘ ಹೇಗೆ ಬೆಂಬಲ ನೀಡಿತ್ತು ಎಂಬ ವಿಚಾರವನ್ನು ತಿಳಿಸಿದರು. ಇಂದು ಆಡುತ್ತಿರುವ ಮಾತುಗಳು ಅಂದಿನ ಘಟನೆಯೇ ಕುರಿತು ಮಾತ್ರ ಎಂದು ಹೇಳಿದರು.

  ಇದನ್ನೂ ಓದಿ: Amrinder Singh Next Move: ಬಿಜೆಪಿ ಸೇರಲ್ಲ, ಕಾಂಗ್ರೆಸ್​​ನಲ್ಲಿ ಇರಲ್ಲ: ಅಮರೀಂದರ್ ಸಿಂಗ್ ಮುಂದಿನ ನಡೆ?

  ನರ್ಮದಾ ಯಾತ್ರೆ ಮಾಡುವಾಗ ಗುಜರಾತ್ ಮಾರ್ಗವಾಗಿ ಬರಲಾಗಿತ್ತು. ಅಂದು ಅಮಿತ್ ಶಾ ಅರಣ್ಯಾಧಿಕಾರಿಗಳಿಗೆ ನಮಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಜೊತೆಗೆ ನಮ್ಮ ಯಾತ್ರೆಗೆ ಯಾವುದೇ ಅಡ್ಡಿ ಉಂಟಾಗದಂತೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಹೇಳಿದ್ದರು. ಇದುವರೆಗೂ ಅಮಿತ್ ಶಾ ಮತ್ತು ನಾನು ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಇಂದು ನಮಗೆ ತೋರಿದ ಕಾಳಜಿಗೆ ಧನ್ಯವಾದ ಹೇಳುತ್ತೇನೆ. ನನ್ನ ರಾಜಕೀಯ ವಿಚಾರ ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿರುತ್ತೇನೆ ಎಂಬುದನ್ನ ಸ್ಪಷ್ಟಪಡಿಸಿದ್ದರು.

  ಸಂಘ ಕಾರ್ಯಕರ್ತರು ಶ್ರಮಜೀವಿಗಳು

  ಯಾತ್ರೆ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ನಮ್ಮ ಭೇಟಿಯಾಗುತ್ತಿದ್ದರು. ಸಂಘ ಕಾರ್ಯಕರ್ತರಿಗೆ ನನ್ನನ್ನು ಭೇಟಿಯಾಗಲು ನಿರ್ದೇಶನ ನೀಡಲಾಗುತ್ತಿತ್ತು. ಅವರೂ ಸಹ ನನ್ನ ವಾಸ್ತವ್ಯಕ್ಕೆ ಸಹಾಯ ಮಾಡಿದ್ದಾರೆ. ಸಂಘ ಕಾರ್ಯಕರ್ತರು ಶ್ರಮಜೀವಿಗಳು. ಆದ್ರೆ ದೇಶವನ್ನು ಇಬ್ಭಾಗಿಸುವ ಅವರ ವಿಚಾರಗಳನ್ನು ಒಪ್ಪಿಕೊಳ್ಳಲ್ಲ. ಅವರ ವಿಚಾರಧಾರೆ ಮತ್ತು ತತ್ವ ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳಲ್ಲ ಎಂದರು.

  ನರ್ಮದಾ ಪಥಿಕ್ ಅನಾವರಣ

  2017ರಲ್ಲಿ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ನರ್ಮದಾ ಪರಿಕ್ರಮ ಯಾತ್ರೆ ನಡೆಸಿದ್ದರು. ಯಾತ್ರೆ ವೇಳೆ ದಿಗ್ವಿಜಯ್ ಸಿಂಗ್ ಜೊತೆಯಲ್ಲಿ ಸಹಯೋಗಿ, ವೈಯಕ್ತಿಕ ಕಾರ್ಯದರ್ಶಿ ಓಂಪ್ರಕಾಶ್ ಶರ್ಮಾ 'ನರ್ಮದಾ ಪಥಿಕ್' ಶೀರ್ಷಿಕೆಯಲ್ಲಿ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭ ಮಾನಸರೋವರದ ಸಭಾಗರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದಿಗ್ವಿಜಯ್ ಸಿಂಗ್, ರಾಜ್ಯಸಭಾ ಸಂಸದ ವಿವೇಕ್ ತನ್ಖಾ, ಸುರೇಶ್ ಪಚೌರಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

  ವರದಿ: ಮೊಹ್ಮದ್​ ರಫೀಕ್​ ಕೆ
  Published by:Kavya V
  First published: