ಶೇಖ್ ಅಬ್ದುಲ್ಲಾರನ್ನು ಕಾಂಗ್ರೆಸ್ 11 ವರ್ಷ ಜೈಲಿನಲ್ಲಿಟ್ಟಿತ್ತು; ಜಮ್ಮು-ಕಾಶ್ಮೀರ ನಾಯಕರ ಬಂಧನ ವಿಚಾರವಾಗಿ ಅಮಿತ್ ಶಾ ತಿರುಗೇಟು

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370 ವಿಧಿಯನ್ನು ರದ್ದುಗೊಳಿಸಿದ ಬಳಿಕ ಆಗಸ್ಟ್ 5ರಿಂದ ನಿಷೇಧಗೊಂಡಿದ್ದ ಪ್ರಿ-ಪೇಯ್ಡ್ ಮೊಬೈಲ್ ಫೋನ್ ಮತ್ತು ಇಂಟರ್​ನೆಟ್ ಸೇವೆಯನ್ನು ಮುಂದುವರೆಸಲಾಗಿದೆ.   

HR Ramesh | news18-kannada
Updated:December 10, 2019, 3:14 PM IST
ಶೇಖ್ ಅಬ್ದುಲ್ಲಾರನ್ನು ಕಾಂಗ್ರೆಸ್ 11 ವರ್ಷ ಜೈಲಿನಲ್ಲಿಟ್ಟಿತ್ತು; ಜಮ್ಮು-ಕಾಶ್ಮೀರ ನಾಯಕರ ಬಂಧನ ವಿಚಾರವಾಗಿ ಅಮಿತ್ ಶಾ ತಿರುಗೇಟು
ಅಮಿತ್ ಶಾ
  • Share this:
ನವದೆಹಲಿ: ಮೂವರು ಮುಖ್ಯಮಂತ್ರಿಗಳು ಸೇರಿದಂತೆ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರ ಬಿಡುಗಡೆ ನಿರ್ಧಾರವನ್ನು ಸ್ಥಳೀಯ ಆಡಳಿತ ತೆಗೆದುಕೊಳ್ಳಲಿದೆ ಮತ್ತು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು, ಹಾಲಿ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಸೇರಿ ಇತರೆ ರಾಜಕೀಯ ಮುಖಂಡರನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದ್ದಾರೆ.

ಅವರನ್ನು (ರಾಜಕೀಯ ನಾಯಕರು) ಒಂದು ದಿನ ಹೆಚ್ಚಿಗೆ ಜೈಲಿನಲ್ಲಿ ಇಡುವುದು ನಮಗೆ ಬೇಕಾಗಿಲ್ಲ. ರಾಜಕೀಯ ನಾಯಕರ ಬಿಡುಗಡೆ ವಿಚಾರವಾಗಿ ಸ್ಥಳೀಯ ಆಡಳಿತ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಫಾರೂಖ್ ಅಬ್ದುಲ್ಲಾ ಅವರ ತಂದೆ ಶೇಖ್ ಅಬ್ದುಲ್ಲಾ ಅವರನ್ನು ಕಾಂಗ್ರೆಸ್ 11 ವರ್ಷ ಜೈಲಿನಲ್ಲಿ ಇರಿಸಿತ್ತು. ನಾವು ಅವರನ್ನು ಅನುಸರಿಸುವುದಿಲ್ಲ. ಅವರೆಲ್ಲರ ಬಿಡುಗಡೆ ಬಗ್ಗೆ ಶೀಘ್ರದಲ್ಲೇ ಸ್ಥಳೀಯ ಆಡಳಿತ ನಿರ್ಧರಿಸಲಿದೆ ಎಂದು ಹೇಳಿದ ಅಮಿತ್ ಶಾ, ಈ ವಿಚಾರವಾಗಿ ತಾವು ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಸಹಜ ವಾತಾವರಣ ಇಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಅಮಿತ್ ಶಾ, ಶೇ.99.5 ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ, ಅಧೀರ್ ರಂಜನ್ ಜೀ ಅವರಿಗೆ ಇದು ಸಹಜ ವಾತಾವರಣ ಅನಿಸುವುದಿಲ್ಲ. ಶ್ರೀನಗರದಲ್ಲಿ 7 ಲಕ್ಷ ಜನರು ಹೊರರೋಗಿ ಸೇವೆ ಪಡೆದುಕೊಂಡಿದ್ದಾರೆ. ಕರ್ಫ್ಯೂ ಮತ್ತು 144 ಸೆಕ್ಷನ್​ಅನ್ನು ಎಲ್ಲ ಕಡೆ ತೆಗೆದುಹಾಕಲಾಗಿದೆ. ಆದರೆ, ಅಧೀರ್ ರಂಜನ್ ಜೀ ಅವರಿಗೆ ಮಾತ್ರ ಈ ಸಹಜತೆ ರಾಜಕೀಯ ಚಟುವಟಿಕೆಯಾಗಿದೆ ಎಂದು ಟೀಕಿಸಿದರು.

ಇದನ್ನು ಓದಿ: ಕೇಂದ್ರದ ನೂತನ ಮಸೂದೆಗೆ ಕೆಂಡವಾದ ಈಶಾನ್ಯ ಭಾರತ; ಏನಿದು ಪೌರತ್ವ ತಿದ್ದುಪಡಿ ಮಸೂದೆ? ಜನಾಕ್ರೋಶಕ್ಕೆ ಕಾರಣವೇನು? ಇಲ್ಲಿದೆ ಡೀಟೈಲ್ಸ್

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370 ವಿಧಿಯನ್ನು ರದ್ದುಗೊಳಿಸಿದ ಬಳಿಕ ಆಗಸ್ಟ್ 5ರಿಂದ ನಿಷೇಧಗೊಂಡಿದ್ದ ಪ್ರಿ-ಪೇಯ್ಡ್ ಮೊಬೈಲ್ ಫೋನ್ ಮತ್ತು ಇಂಟರ್​ನೆಟ್ ಸೇವೆಯನ್ನು ಮುಂದುವರೆಸಲಾಗಿದೆ.

ಅಲ್ಲಿನ ಉನ್ನತ ಮಟ್ಟದ ರಾಜಕೀಯ ನಾಯಕರು ಮತ್ತು ಎರಡನೇ ಹಂತದ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ಇವರಲ್ಲಿ ಇಬ್ಬರು ಮುಖ್ಯಮಂತ್ರಿಗಳು ಸೇರಿ ಹಲವು ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. 
First published: December 10, 2019, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading