ನವದೆಹಲಿ(ಸೆ.01): ಕಾಂಗ್ರೆಸ್ ಪಕ್ಷ ಈಗ ಆರ್ಎಸ್ಎಸ್ ಮಾದರಿಯಲ್ಲಿ ಪಕ್ಷದ ಸಂಘಟನೆ ಮಾಡಲು ಮುಂದಾಗಿದೆ. ಅದಕ್ಕಾಗಿ ಜವಾಹರ್ ಬಾಲ ಮಂಚ್ ಎಂಬ ಹೊಸ ವಿಭಾಗವನ್ನೇ ಆರಂಭಿಸಿದೆ. 10ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ರಾಷ್ಟ್ರಾಭಿಮಾನವನ್ನು ಅರಿವು ಮೂಡಿಸುವುದು, ದೇಶದ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಜವಾಹರ್ ಬಾಲ ಮಂಚ್ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ ಮಹಾತ್ಮ ಗಾಂಧಿ, ಜವಾಹರಲಾಲ್ ಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವದ ಬಗ್ಗೆ ತರಬೇತಿ ನೀಡುವುದು. ಆ ಮೂಲಕ ಅವರನ್ನು ಯುವಕರನ್ನು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವುಗಳೆಡೆಗೆ ಸೆಳೆಯುವುದು ಜವಾಹರ್ ಬಾಲ ಮಂಚ್ ಪ್ರಮುಖ ಗುರಿಯಾಗಿದೆ ಎನ್ನಲಾಗುತ್ತಿದೆ.
ಪಂಜಾಬ್, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ ಜವಾಹರ್ ಬಾಲ ಮಂಚ್ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಆ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದುದರಿಂದ ಇದೇ ಮಾದರಿಯಲ್ಲಿ ಈಗ ಕರ್ನಾಟಕದಲ್ಲೂ ಜವಾಹರ್ ಬಾಲ ಮಂಚ್ ಅನ್ನು ಆರಂಭಿಸಲು ತಯಾರಿ ನಡೆಯುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು, ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಜವಾಹರ್ ಬಾಲ ಮಂಚ್ ಶಾಖೆಗಳನ್ನು ಆರಂಭಿಸುವುದಕ್ಕೂ ತಯಾರಿಗಳು ನಡೆದಿವೆ. ಕರ್ನಾಟಕದಲ್ಲಿ ರಾಜ್ಯಾದ್ಯಂತ ಜವಾಹರ್ ಬಾಲ ಮಂಚ್ ಶಾಖೆಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಸಿರಿಲ್ ಪ್ರಭು ಎಂಬುವವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ