HOME » NEWS » National-international » CONGRESS HOUSE HUNTING IN LUCKNOW PRAYAGRAJ FOR PRIYANKA GANDHI MAK

ಉತ್ತರಪ್ರದೇಶದಲ್ಲಿ ಮನೆ ಹುಡುಕುತ್ತಿರುವ ಪ್ರಿಯಾಂಕ ಗಾಂಧಿ; ಪಕ್ಷ ಸಂಘಟನೆಯ ಹುರುಪಿನಲ್ಲಿ ಕಾರ್ಯಕರ್ತರು

ಉತ್ತರಪ್ರದೇಶದಲ್ಲಿ ದಿವಂಗತ ಕಾಂಗ್ರೆಸ್ ಮುಖಂಡ ಶೀಲಾ ಕೌಲ್ ಅವರಿ‌ಗೆ ಸೇರಿದ ಮನೆಯೊಂದನ್ನು ಪ್ರಿಯಾಂಕಾ ಗಾಂಧಿಗಾಗಿ ನೋಡಲಾಗಿತ್ತು. ಆದರೆ, ಭದ್ರತಾ ಕಾರಣಗಳಿಂದಾಗಿ ಯೋಜನೆಗಳನ್ನು ಬದಲಾಯಿಸಲಾಗಿದೆ. ಅಲ್ಲದೆ, ಪ್ರಿಯಾಂಕ ಗಾಂಧಿಗಾಗಿ ಲಕ್ನೋ ಹಾಗೂ ಪ್ರಯಾಗ್​ರಾಜ್‌ನಲ್ಲಿ ಬಾಡಿಗೆ ಮನೆಯನ್ನು ಹುಡುಕಲಾಗುತ್ತಿದೆ.

news18-kannada
Updated:December 4, 2020, 4:17 PM IST
ಉತ್ತರಪ್ರದೇಶದಲ್ಲಿ ಮನೆ ಹುಡುಕುತ್ತಿರುವ ಪ್ರಿಯಾಂಕ ಗಾಂಧಿ; ಪಕ್ಷ ಸಂಘಟನೆಯ ಹುರುಪಿನಲ್ಲಿ ಕಾರ್ಯಕರ್ತರು
ಪ್ರಿಯಾಂಕಾ ಗಾಂಧಿ ವಾದ್ರಾ.
  • Share this:
ನವ ದೆಹಲಿ (ಡಿಸೆಂಬರ್​ 04); ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ಈ ಹಿಂದೆ ನವ ದೆಹಲಿಯ ಲೋಧಿ ಎಸ್ಟೇಟ್​ನಲ್ಲಿ ಸರ್ಕಾರಿ ಬಂಗಲೆ ನೀಡಲಾಗಿತ್ತು. ಆದರೆ, ಅದನ್ನು ಕಳೆದ ಜೂನ್​ನಲ್ಲಿ ಖಾಲಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಲೋಧಿ ಎಸ್ಟೇಟ್​ ಬಂಗಲೆಯನ್ನು ಖಾಲಿ ಮಾಡಲು ಮುಂದಾಗಿರುವ ಪ್ರಿಯಾಂಕ ಗಾಂಧಿ ಇದೀಗ ಉತ್ತರಪ್ರದೇಶದ ಲಕ್ನೋ ಅಥವಾ ಪ್ರಯಾಗ್​ರಾಜ್​ನಲ್ಲಿ ಮನೆ ಮಾಡಲು ಮುಂದಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಸಹ ಇದೀಗ ಪ್ರಿಯಾಂಕ ಗಾಂಧಿಗಾಗಿ ಉತ್ತರಪ್ರದೇಶದಲ್ಲಿ ಮನೆ ಹುಡುಕುತ್ತಿದ್ದು, ಪಕ್ಷ ಸಂಘಟನೆಯ ಹುರುಪಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್​ ಪಕ್ಷವನ್ನು ಅಲ್ಲಿ ಮತ್ತಷ್ಟು ತಳಮಟ್ಟದಿಂದ ಸಂಘಟನೆ ಮಾಡಬೇಕು ಎಂಬ ಕಾರಣದಿಂದಾಗಿ ಪ್ರಿಯಾಂಕ ಗಾಂಧಿಯನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಪಕ್ಷ ಮತ್ತೆ ಪುಟಿದೇಳುವ ದಿನಗಳು ಬರಬಹುದು ಎಂಬ ನಿರೀಕ್ಷೆಯನ್ನು ಕಾರ್ಯಕರ್ತರು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಉತ್ತರಪ್ರದೇಶದಲ್ಲಿ ದಿವಂಗತ ಕಾಂಗ್ರೆಸ್ ಮುಖಂಡ ಶೀಲಾ ಕೌಲ್ ಅವರಿ‌ಗೆ ಸೇರಿದ ಮನೆಯೊಂದನ್ನು ಪ್ರಿಯಾಂಕಾ ಗಾಂಧಿಗಾಗಿ ನೋಡಲಾಗಿತ್ತು. ಆದರೆ, ಭದ್ರತಾ ಕಾರಣಗಳಿಂದಾಗಿ ಯೋಜನೆಗಳನ್ನು ಬದಲಾಯಿಸಲಾಗಿದೆ. ಅಲ್ಲದೆ, ಪ್ರಿಯಾಂಕ ಗಾಂಧಿಗಾಗಿ ಲಕ್ನೋ ಹಾಗೂ ಪ್ರಯಾಗ್​ರಾಜ್‌ನಲ್ಲಿ ಬಾಡಿಗೆ ಮನೆಯನ್ನು ಹುಡುಕಲಾಗುತ್ತಿದೆ.

ಪ್ರಿಯಾಂಕಾ ಗಾಂಧಿಯವರ ವೈಯಕ್ತಿಕ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರು ಎರಡು ಮನೆಗಳ ಹುಡುಕಾಟವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಸ್ಥಳೀಯ ನಾಯಕರನ್ನು ಭೇಟಿ ಮಾಡಲು ಮತ್ತು ಮನೆಯನ್ನು ನೋಡಲು ಪ್ರಯಾಗರಾಜ್‌ಗೆ ಭೇಟಿ ನೀಡಿದ್ದರು. 2021 ರ ಜನವರಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿ ತಿಂಗಳು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಲಖನೌದಲ್ಲಿನ ಕಾಂಗ್ರೆಸ್ ಮುಖಂಡರಿಗೆ ಹೇಳಲಾಗಿತ್ತು. ಆದರೆ, 2019ರ ಡಿಸೆಂಬರ್ ನಿಂದ ಯಾವ ಮುಖಂಡರು ಪಕ್ಷದ ರಾಜ್ಯ ಕೇಂದ್ರ ಕಚೇರಿಗೆ ಭೇಟಿ ನೀಡಿಲ್ಲ.

ಇದನ್ನೂ ಓದಿ : ರೈತ ಹೋರಾಟದ ಬಗ್ಗೆ ನಟಿ ಕಂಗನಾ ಆಕ್ಷೇಪಾರ್ಹ ಟ್ವೀಟ್; ಕ್ಷಮೆ ಕೋರುವಂತೆ ಸಿಖ್ ಮಂಡಳಿಯಿಂದ ಲೀಗಲ್ ನೊಟೀಸ್!

ಉತ್ತರಪ್ರದೇಶ ರಾಜಕೀಯದಲ್ಲಿ ಸಕ್ರಿಯವಾಗಿ ನೆಲೆಗೊಳ್ಳಲು ಕಾಂಗ್ರೆಸ್ ತುಂಬಾ ಹೆಣಗಾಡುತ್ತಿದೆ. ಇತ್ತೀಚಿನ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್, ಒಟ್ಟು ಮತಗಳಲ್ಲಿ ಶೇಕಡಾ 7.53 ರಷ್ಟು ಮಾತ್ರ ಮತ ಪಡೆದಿತ್ತು. ಅದರಲ್ಲೂ, ಕಾಂಗ್ರೆಸ್ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ ತಮ್ಮ ಠೇವಣಿ ಕಳೆದುಕೊಂಡಿದ್ದರು.
Youtube Video

ಸದ್ಯ ಪ್ರಿಯಾಂಕಾ ಗಾಂಧಿ ಲಖನೌ ಮತ್ತು ಪ್ರಯಾಗರಾಜ್‌ಗಳಲ್ಲಿ ಮನೆ ಹುಡುಕುತ್ತಿರುವುದು ಪಕ್ಷ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಪಕ್ಷ ಸಂಘಟನೆ ನಡೆಸಲು ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತಿದೆ.
Published by: MAshok Kumar
First published: December 4, 2020, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories