ಕಾಂಗ್ರೆಸ್​ ರಕ್ತದಲ್ಲೇ ಬ್ರಾಹ್ಮಣತ್ವ ಇದೆ, ರಾಹುಲ್ ಗಾಂಧಿ ಶಿವ ಭಕ್ತ: 'ಕೈ' ವಕ್ತಾರ ಸುರ್ಜೇವಾಲಾ


Updated:September 5, 2018, 1:43 PM IST
ಕಾಂಗ್ರೆಸ್​ ರಕ್ತದಲ್ಲೇ ಬ್ರಾಹ್ಮಣತ್ವ ಇದೆ, ರಾಹುಲ್ ಗಾಂಧಿ ಶಿವ ಭಕ್ತ: 'ಕೈ' ವಕ್ತಾರ ಸುರ್ಜೇವಾಲಾ

Updated: September 5, 2018, 1:43 PM IST
ನ್ಯೂಸ್​ 18 ಕನ್ನಡ

ಹರ್ಯಾಣ(ಸೆ.05): ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತಾರ ರಣ್ದೀಪ್​ ಸುರ್ಜೇವಾಲಾ ಸದ್ಯ ತಮ್ಮ ಹೇಳಿಕೆಯಿಂದ ಚರ್ಚೆಯಲ್ಲಿದ್ದಾರೆ. ಹರ್ಯಾಣದ ಕುರುಕ್ಷೇತ್ರದಲ್ಲಿ ಬ್ದರಾಹ್ಮಣ ಸಮಾಜ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಬ್ರಾಹ್ಮಣರನ್ನು ಓಲೈಸಲು ಯತ್ನಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ನ ರಕ್ತದಲ್ಲಿ ಬ್ರಾಹ್ಮಣ ಸಮಾಜದ ಡಿಎನ್​ಎ ಇದೆ ಎಂದಿದ್ದಾರೆ.

ಸುರ್ಜೇವಾಲಾ ಹೇಳಿದ್ದೇನು?

ಬ್ರಾಹ್ಮಣರನ್ನು ಓಲೈಸಲು ಯತ್ನಿಸಿದ ಸುರ್ಜೇವಾಲಾರವರು "ನನ್ನ ಸಹೋದ್ಯೋಗಿಯೊಬ್ಬರು ಬ್ರಾಹ್ಮಣ ಸಮ್ಮೇಳನವನ್ನು ರಾಹುಲ್​ ಗಾಂಧಿಯವರ ಭಾವಚಿತ್ರ ಯಾಕೆ ಮಾಡುತ್ತಿದ್ದೀರಿ? ಕಾಂಗ್ರೆಸ್​ ಪಕ್ಷದ ಧ್ವಜ ಅಥವಾ ತ್ರಿವರ್ಣ ಧ್ವಜ ಹಿಡಿದು ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದರು. ಅಂದು ನಾನು ಈ ಪ್ರಶ್ನೆಗೆ ವೇದಿಕೆಯೊಂದರಲ್ಲಿ ಉತ್ತರಿಸುತ್ತೇನೆಂದಿದ್ದೆ. ಕಾಂಗ್ರೆಸ್​ ತನ್ನ ರಕ್ತದಲ್ಲಿ ಬ್ರಾಹ್ಮಣತ್ವದ ಡಿಎನ್​ಎ ಹೊಂದಿರುವ ಪಕ್ಷವಾಗಿದೆ" ಎಂದಿದ್ದಾರೆ.

ತಮ್ಮ ಮಾತಿಗೆ ಮತ್ತಷ್ಟು ವಿವರಣೆ ನೀಡಿರುವ ಅವರು "ಸ್ವಾತಂತ್ರ್ಯದ ಮೊದಲ ಹೋರಾಟ ಮಂಗಲ್ ಪಾಂಡೆಯವರಿಂದ ಆರಂಭವಾಗಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಮ್​ ಪ್ರಸಾದ್​ ಬಿಸ್ಮಿಲ್​, ಮದನ ಮೋಹನ ಮಾಳವೀಯ, ಬಾಲ ಗಮಗಾಧರ ತಿಲಕ್​, ಚಂದ್ರಶೇಖರ್​ ಆಜಾದ್​, ಪಂಡಿತ್​ ಮೋತಿಲಾಲ್ ನೆಹರೂ ಹಾಗೂ ಜವಾಹರಲಾಲ್​ ನೆಹರೂ ಇವರೆಲ್ಲರೂ ಬ್ರಾಹ್ಮಣರಾಗಿದ್ದರು" ಎಂದಿದ್ದಾರೆ.

ರಅಹುಲ್​ ಗಾಂಧಿಯನ್ನು ಶಿವ ಭಕ್ತ ಎಂದ ಸರ್ಜೇವಾಲಾ:
Loading...

ರಾಹುಲ್​ ಗಾಂಧಿ ಕೈಗೊಂಡಿದ್ದ ಕೈಲಾಶ ಮಾನಸ ಸರೋವರ ಯಾತ್ರೆ ವಿಚಾರವಾಗಿ ಬಿಜೆಪಿಯು ಟೀಕೆ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮದಲ್ಲೇ ತಿರುಗೇಟು ನೀಡಿರುವ ಸುರ್ಜೇವಾಲಾರವರು 'ಕಾಂಗ್ರೆಸ್​ನ ನೇತೃತ್ವ ವಹಿಸಿರುವ ನಿಮ್ಮ ಒಬ್ಬ ಮಗ ಮಮಾನಸ ಸರೋವರ ಯಾತ್ರೆಗೆ ಏಕಾಂಗಿಯಾಗಿ ಹೋಗುತ್ತಿದ್ದಾರೆ. ಬ್ರಾಹ್ಮಣ ಹಾಗೂ ದಾನವರ ನಡುವೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಯಾರಾದರೂ ಒಬ್ಬರು ಶಿವನನ್ನು ಪೂಜಿಸುತ್ತಾರೆಂದಾದರೆ ದಾನವರು ವಿಘ್ನ ತಂದೊಡ್ಡುತ್ತಾರೆ. ಇಂದು ಕೂಡಾ ಶಿವ ಭಕ್ತ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ ಶಿವನ ಸನ್ನಿಧಿ ಕೈಲಾಸ ಮಾನಸ ಸರೋವರದ ಯಾತ್ರೆ ಕೈಗೊಮಡಿದ್ದಾರೆ. ಹೀಗಿರುವಾಗ ಬಿಜೆಪಿಯು ಇದನ್ನು ವಿಫಲಗೊಳಿಸುವ ಯತ್ನ ನಡೆಸುತ್ತಿದೆ" ಎಂದಿದ್ದಾರೆ. ಈ ಮೂಲಕ ಬಿಜೆಪಿಯು ಬ್ರಾಹ್ಮಣರನ್ನು ಅವಮಾನಿಸುತ್ತಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626