UP Election: 2017ರ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಚುನಾವಣಾ ಕಣಕ್ಕೆ ಇಳಿಸಲು ಸಜ್ಜಾದ ಕಾಂಗ್ರೆಸ್​

ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಆಗಿದ್ದು,  ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

 • Share this:
  ಉತ್ತರ ಪ್ರದೇಶದಲ್ಲಿ ಚುನಾವಣೆ (Uttar Pradesh Election) ಘೋಷಣೆಯಾಗಿದ್ದು, ರಾಜಕೀಯದಲ್ಲಿ ಭಾರೀ ಬಿರುಸಿನ ಚಟುವಟಿಕೆ ನಡೆದಿದೆ. ಒಂದು ಕಡೆ ನಾಯಕರು ಪಕ್ಷಾಂತರ ನಡೆಸಿದ್ದು, ಮತ್ತೊಂದು ಕಡೆ ಅಭ್ಯರ್ಥಿಗಳ ಆಯ್ಕೆಗೆ ಪಕ್ಷಗಳು ಮುಂದಾಗಿವೆ. ಈ ನಡುವೆ ಕಾಂಗ್ರೆಸ್​ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ (Unnao Rape Victim Mother) ತಾಯಿಯನ್ನು ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ತಯಾರಿ ನಡೆಸಿದೆ. ಇನ್ನೊಂದು ತಿಂಗಳು ಬಾಕಿ ಇರುವ ಚುನಾವಣೆಗೆ ಇಂದು ಅಭ್ಯರ್ಥಿಗಳ ಹೆಸರಿಸುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ 19 ವರ್ಷದ ಸಂತ್ರಸ್ತೆಯ ತಾಯಿಯ ಹೆಸರನ್ನು ಅಭ್ಯರ್ಥಿಯಾಗಿ ಹೆಸರಿಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಆಗಿದ್ದು,  ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

  ಅಪರಾಧಿಯ ಕ್ಷೇತ್ರದಲ್ಲೇ ಕಣಕ್ಕೆ 

  ಉನ್ನಾವೋದ ಬಂಗಾರ್ಮೌ ಕ್ಷೇತ್ರದಿಂದ 2017 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೆಂಗಾರ್ ಕಣಕ್ಕೆ ಇಳಿದು ಗೆದ್ದಿದ್ದರು. ಪ್ರಕರಣದಲ್ಲಿ ಶಿಕ್ಷೆಯಾಗುವವರೆಗೂ ಶಾಸಕರಾಗಿದ್ದರು. ಇದಾದ ಬಳಿಕ ನಡೆದ ಕ್ಷೇತ್ರದ ಉಪಚುನಾವಣೆಯೂ ಬಿಜೆಪಿ ಪಾಲಾಯಿತು. ಇದೀಗ ಈ ಕ್ಷೇತ್ರಕ್ಕೆ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಲ್ಲಿಸಲು ಮುಂದಾಗಿದೆ.

  ಸಂತ್ರಸ್ತ ಮಹಿಳೆಯರ ಜೊತೆ ಕಾಂಗ್ರೆಸ್​​ ಜೊತೆಗಿದೆ

  ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ನೀವು ಕಿರುಕುಳ ಮತ್ತು ಚಿತ್ರಹಿಂಸೆಗೆ ಬಲಿಯಾಗಿದ್ದರೆ, ಕಾಂಗ್ರೆಸ್ ನಿಮ್ಮನ್ನು ಬೆಂಬಲಿಸುತ್ತದೆ ಕಾಂಗ್ರೆಸ್​ ಇದೆ ಎಂಬ ಸಂದೇಶ ಸಾರಿದೆ. . ಇನ್ನು ಉತ್ತರ ಪ್ರದೇಶದಲ್ಲಿ ಲಡ್ಕಿ ಹೂಂ, ಲಾಡ್ ಸಕ್ತಿ ಹೂಂ (ಹುಡುಗಿ ಆದರೂ ಹೋರಾಡಬಹುದು) ಎಂಬ ಧ್ಯೇಯ ವಾಕ್ಯದೊಂದಿಗೆ ಚುನಾವಣಾ ಪ್ರಚಾರ ನಡೆಸಿದ್ದಾರೆ.

  ಇದನ್ನು ಓದಿ: ಸ್ವಂತ ಅಕ್ಕಂದಿರೊಂದಿಗೆ ಅಕ್ರಮ ಸಂಬಂಧ; ಮೂರನೇ ಅವಳ ಸಂಬಂಧ ಅರಸಿ ಹೋಗಿ ಕೊಲೆಯಾದ

  ಮಹಿಳೆಯರಿಗೆ ಶೇ 40 ರಷ್ಟು ಟಿಕೆಟ್​ ಮೀಸಲು
  ಈ ಬಾರಿ ಶೇ 40ರಷ್ಟು ಟಿಕೆಟ್​ ಅನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದೇವೆ. ನಮ್ಮ ಪಕ್ಷವನ್ನು ಬಲಪಡಿಸುವುದು ಮತ್ತು ನಮ್ಮ ಅಭ್ಯರ್ಥಿಗಳು ಜನರ ಸಮಸ್ಯೆಗಳ ಮೇಲೆ ಹೋರಾಡುವುದು ನಮ್ಮ ಗುರಿಯಾಗಿದೆ. ನಾವು ನಕಾರಾತ್ಮಕ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ನಮ್ಮ ಅಭಿಯಾನವು ಅಭಿವೃದ್ಧಿ ಮತ್ತು ದಲಿತರು ಮತ್ತು ಹಿಂದುಳಿದವರ ಪ್ರಗತಿಯ ಬಗ್ಗೆ ಇರುತ್ತದೆ ಎಂದು ಪ್ರಿಯಾಂಕಾ ಘೋಷಿಸಿದ್ದಾರೆ.
  ಉತ್ತರ ಪ್ರದೇಶದಲ್ಲಿ ನಾನು ಏನನ್ನು ಆರಂಭಿಸಿದ್ದೇನೆಯೋ ಅದನ್ನು ಮುಂದುವರಿಸುತ್ತೇನೆ. ಚುನಾವಣೆಯ ನಂತರವೂ ರಾಜ್ಯದಲ್ಲಿಯೇ ಇರುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ.

  ಇದನ್ನು ಓದಿ:  ಹೊಸ ಬದಲಾವಣೆಗಳೊಂದಿಗೆ BARCನಿಂದ ಟಿವಿ ಚಾನೆಲ್​​ಗಳ TRP ರೇಟಿಂಗ್ ಪುನಾರಂಭ

  ಕಳೆದ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಂಪೂರ್ಣವಾಗಿ ಕುಸಿದಿತ್ತು. ಈ ಹಿನ್ನಲೆ ಪ್ರಿಯಾಂಕಾ ರಾಜ್ಯದಲ್ಲಿ ಉಸ್ತುವಾರಿ ವಹಿಸಿದ್ದು, ಪಕ್ಷ ಬಲಪಡಿಸಲು ನಿರತರಾಗಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳ ದೃಷ್ಟಿಯಿಂದ ಲಿಂಗ ಸಮಾನತೆಯ ಮೇಲೆ ಕೇಂದ್ರೀಕರಿಸಿದ್ದಾರೆ. ದೇಶದೆಲ್ಲಡೆ ಖಂಡನೆ ವ್ಯಕ್ತವಾದ ಹತ್ರಾಸ್‌ನಲ್ಲಿ ದಲಿತ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಮತ್ತು ಉನ್ನಾವೋ ಪ್ರಕರಣ ಸೇರಿದಂತೆ ಪ್ರಮುಖ ಘಟನೆಗಳ ಕುರಿತು ಧ್ವನಿ ಎತ್ತಿ ಗಮನಸೆಳೆದಿದೆ.

  ಏನಿದು ಉನ್ನಾವೋ ಪ್ರಕರಣ
  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ನಂತರ ಉನ್ನಾವೋ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತನ್ನ 55 ವರ್ಷದ ತಂದೆಯನ್ನು ಸೆಂಗರ್ ಸಹೋದರರು ಥಳಿಸಿದ ನಂತರ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದಳು. ಮರುದಿನ ಆಜೆ ಸಾವನ್ನಪ್ಪಿದರು. ಈ ಘಟನೆಯು ರಾಷ್ಟ್ರವ್ಯಾಪಿ ಕೋಲಾಹಲಕ್ಕೆ ಕಾರಣವಾಯಿತು, ನಾಗರಿಕ ಸಂಸ್ಥೆಗಳು ಮತ್ತು ನಾಗರಿಕರು ಅಪ್ರಾಪ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು

  .2017ರಲ್ಲಿ ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ ಪ್ರತ್ಯೇಕ ಪ್ರಕರಣದಲ್ಲಿ ಡಿಸೆಂಬರ್ 2019 ರಲ್ಲಿ ಸೆಂಗರ್ ಗೆ ಅಪರಾಧಿ ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಯಿತು.
  Published by:Seema R
  First published: