Viral Video: ಪ್ರಿಯಾಂಕಾ ಗಾಂಧಿ ಬದಲು ಪ್ರಿಯಾಂಕಾ ಚೋಪ್ರಾಗೆ ಜೈಕಾರ; ಕಾಂಗ್ರೆಸ್ ಸಮಾವೇಶದಲ್ಲಿ ಎಡವಟ್ಟು!

Viral Video: ದೆಹಲಿಯ ಕಾಂಗ್ರೆಸ್ ಸಮಾವೇಶದಲ್ಲಿ ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದ ನಂತರ ಪ್ರಿಯಾಂಕಾ ಗಾಂಧಿ ಎಂದು ಹೇಳುವ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜಿಂದಾಬಾದ್​ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:December 2, 2019, 2:21 PM IST
Viral Video: ಪ್ರಿಯಾಂಕಾ ಗಾಂಧಿ ಬದಲು ಪ್ರಿಯಾಂಕಾ ಚೋಪ್ರಾಗೆ ಜೈಕಾರ; ಕಾಂಗ್ರೆಸ್ ಸಮಾವೇಶದಲ್ಲಿ ಎಡವಟ್ಟು!
ಪ್ರಿಯಾಂಕಾ ಗಾಂಧಿ- ಪ್ರಿಯಾಂಕಾ ಚೋಪ್ರಾ
  • Share this:
ನವದೆಹಲಿ (ಡಿ. 2): ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿಗೆ ಪಕ್ಷದಲ್ಲಿ ಸಾಕಷ್ಟು ಅನುಯಾಯಿಗಳಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೆ ಏರಿದ ನಂತರ ಪ್ರಿಯಾಂಕಾ ಗಾಂಧಿ ವರ್ಚಸ್ಸು ಕೂಡ ಹೆಚ್ಚಾಗಿದೆ. ಆದರೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಆದ ಒಂದು ಯಡವಟ್ಟಿನಿಂದ ಪ್ರಿಯಾಂಕಾ ಗಾಂಧಿ ಹೆಸರು ಈಗ ಟ್ರೋಲ್ ಆಗುತ್ತಿದೆ.

ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸುರೇಂದ್ರ ಕುಮಾರ್ ಕೈ ನಾಯಕರ ಹೆಸರುಗಳನ್ನು ಹೇಳಿ ಜೈಕಾರ ಹಾಕುತ್ತಿದ್ದರು. ಈ ವೇಳೆ ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದ ನಂತರ ಪ್ರಿಯಾಂಕಾ ಗಾಂಧಿ ಎಂದು ಹೇಳುವ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜಿಂದಾಬಾದ್​ ಎಂದು ಹೇಳಿಬಿಟ್ಟಿದ್ದಾರೆ. ಬಾಯ್ತಪ್ಪಿನಿಂದಾದ ಈ ಎಡವಟ್ಟಿನಿಂದ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಮುಜುಗರಕ್ಕೀಡಾಗಿದ್ದಾರೆ.

ಸಾಕುನಾಯಿ ಬೊಗಳಿದ್ದಕ್ಕೆ ಅಟ್ಟಾಡಿಸಿ ಕೊಂದ ಫುಡ್ ಡೆಲಿವರಿ ಬಾಯ್​; ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ

ಸುರೇಶ್ ಕುಮಾರ್ ಕಾಂಗ್ರೆಸ್ ನಾಯಕರ ಹೆಸರನ್ನು ಘೋಷಣೆ ಕೂಗುವ ವೇಳೆ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಸುಭಾಷ್ ಚೋಪ್ರಾ ಕೂಡ ವೇದಿಕೆಯಲ್ಲಿದ್ದರು. ಹೀಗಾಗಿ, ಪ್ರಿಯಾಂಕಾ ಗಾಂಧಿ ಮತ್ತು ಸುಭಾಷ್ ಚೋಪ್ರಾ ಇಬ್ಬರನ್ನೂ ಸೇರಿಸಿ ಒಂದೇ ಬಾರಿ ಘೋಷಣೆ ಕೂಗಿರಬಹುದು ಎಂದು ಹಲವರು ಲೇವಡಿ ಮಾಡಿದ್ದಾರೆ.


ಎಎನ್​ಐ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದೆ. 'ಪ್ರಿಯಾಂಕಾ ಚೋಪ್ರಾ ಜಿಂದಾಬಾದ್​' ಎಂದು ಘೋಷಣೆ ಕೂಗಿದಾಗ ಪಕ್ಕದಲ್ಲೇ ನಿಂತಿದ್ದ ಕಾಂಗ್ರೆಸ್ ನಾಯಕ ಸುಭಾಷ್ ಚೋಪ್ರಾ ಅವಾಕ್ಕಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರನ್ನು ಟ್ರೋಲ್ ಮಾಡಲಾಗುತ್ತಿದೆ. ಬಾಲಿವುಡ್ ನಟಿ ಯಾವಾಗ ಕಾಂಗ್ರೆಸ್ ಸೇರಿಕೊಂಡರು? ದೇಸಿ ಗರ್ಲ್ ಪ್ರಿಯಾಂಕಾಗೆ ಅಭಿನಂದನೆಗಳು ಎಂದೆಲ್ಲ ಟ್ವಿಟ್ಟರ್​ನಲ್ಲಿ ಲೇವಡಿ ಮಾಡಲಾಗುತ್ತಿದೆ.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading