Ayodhya Ram Mandir: ರಾಮ ಎಲ್ಲರಲ್ಲೂ ಇದ್ದಾನೆ, ಅಯೋಧ್ಯೆ ಕಾರ್ಯಕ್ರಮ ದೇಶದ ಏಕತೆಗೆ ದಾರಿಯಾಗಲಿ: ಪ್ರಿಯಾಂಕಾ ಗಾಂಧಿ

ರಾಮ ಮಂದಿರ ನಿರ್ಮಾಣದ ಕುರಿತು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆ, ಧೀನಬಂದು ಎಂಬುದು ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:August 4, 2020, 4:27 PM IST
Ayodhya Ram Mandir: ರಾಮ ಎಲ್ಲರಲ್ಲೂ ಇದ್ದಾನೆ, ಅಯೋಧ್ಯೆ ಕಾರ್ಯಕ್ರಮ ದೇಶದ ಏಕತೆಗೆ ದಾರಿಯಾಗಲಿ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
  • Share this:
ನವ ದೆಹಲಿ (ಆಗಸ್ಟ್ 04); "ರಾಮ ಎಲ್ಲರಲ್ಲೂ ಇದ್ದಾನೆ. ಎಲ್ಲರೊಂದಿಗೂ ಇದ್ದಾನೆ. ವಿವಾದಿತ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಾಳೆ ನಡೆಯುವ ಸಮಾರಂಭ ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ದಾರಿಯಾಗಲಿ" ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಶಿಸಿದ್ದಾರೆ.

ಆಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಆಗಸ್ಟ್ 05ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಸ್ತುತ ಈ ಸಮಾರಂಭ ಕೊರೋನಾ ನಡುವೆಯೂ ನಡೆಯುತ್ತಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಸಮಾರಂಭದ ಕುರಿತು ಕಾಂಗ್ರೆಸ್ ಪಕ್ಷದ ನಿಲುವೇನು? ಎಂಬ ಕುರಿತು ಪ್ರಶ್ನೆಗಳು ಎದ್ದಿದ್ದವು. ಆದರೆ, ಪ್ರಿಯಾಂಕಾ ಗಾಂಧಿ ಎಲ್ಲಾ ಪ್ರಶ್ನೆಗೆ ಒಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

ರಾಮ ಮಂದಿರ ನಿರ್ಮಾಣದ ಕುರಿತು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, "ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆ, ಧೀನಬಂದು ಎಂಬುದು ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ.ಭಗವಾನ್ ರಾಮ ಮತ್ತು ತಾಯಿ ಸೀತಾ ಅವರ ಸಂದೇಶ ಮತ್ತು ಅನುಗ್ರಹದಿಂದ ರಾಮಲಲ್ಲಾ ದೇವಾಲಯದ ಭೂಮಿ ಪೂಜೆ ಸಮಾರಂಭವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ದಾರಿಯಾಗಲಿ" ಎಂದು ಹಾರೈಸಿದ್ದಾರೆ. ಈ ಮೂಲಕ ಆಯೋಧ್ಯೆ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಕೊರೋನಾ ಸೋಂಕು ದೇಶದಲ್ಲಿ ನಿಯಂತ್ರಣಕ್ಕೆ ಸಿಗದಂತೆ ದಿನದಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೇ ಇದೆ. ರಾಮ ಜನ್ಮಭೂಮಿ ಕಾರ್ಯಕ್ರಮದ ಹೊಣೆ ಹೊತ್ತಿದ್ದ ಪ್ರಧಾನ ಅರ್ಚಕ ಸೇರಿದಂತೆ ಅನೇಕರಿಗೆ ಈಗಾಗಲೇ ಸೋಂಕು ತಗುಲಿದೆ. ಗೃಹ ಸಚಿವ ಅಮಿತ್ ಶಾ ಅವರಿಗೂ ಸೋಂಕು ತಗುಲಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಪಿ. ಚಿದಂಬರಂ ಸೇರಿದಂತೆ ಅನೇಕರು ಈ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಈ ಕಾರ್ಯಕ್ರಮದ ಮೂಲಕ ಹಲವರಿಗೆ ಸೋಂಕು ಹರಡಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಧಾನಿ ಆಯೋಧ್ಯೆಗೆ ಆಗಮಿಸಿ ಶಂಕು ಸ್ಥಾಪನೆ ಮಾಡುವುದು ಖಚಿತವಾಗಿದೆ.

ರಾಮ ಜನ್ಮಭೂಮಿ ಎಂದು ನಂಬಲಾಗಿರುವ ಅಯೋಧ್ಯೆಯಲ್ಲಿ ಮೊಘಲ್ ಚಕ್ರವರ್ತಿ ಬಾಬರ್ 16 ನೇ ಶತಮಾನದಲ್ಲಿ ಬಾಬರ್ ಮಸೀದಿಯನ್ನು ನಿರ್ಮಿಸಿದ್ದ ಎನ್ನಲಾಗುತ್ತಿದೆ. ಹೀಗಾಗಿ 1992 ರ ಡಿಸೆಂಬರ್ 6 ರಂದು ಸಾವಿರಾರು ಬಲಪಂಥೀಯ ಸ್ವಯಂ ಸೇವಕರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು.

ಇದನ್ನೂ ಓದಿ : Ayodhya Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ - ಹೇಗಿರಲಿದೆ ಗೊತ್ತಾ ದೇವಾಲಯ?

ಈ ಘಟನೆ ದೇಶದಲ್ಲಿ ದೊಡ್ಡ ಮಟ್ಟದ ಕೋಮು ಗಲಭೆಗೆ ಸಾಕ್ಷಿಯಾಗಿತ್ತು. ಅಲ್ಲದೆ, ಅಂದಿನಿಂದ ಇಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಹಿಂದೂ ಪರ ಸಂಘಟನೆಗಳ ಕೋರಿಕೆಯಾಗಿತ್ತು.ಸರಿಸುಮಾರು ಒಂದು ಶತಮಾನಕ್ಕೂ ಅಧಿಕ ಕಾಲ ನ್ಯಾಯಾಲಯದಲ್ಲಿ ವ್ಯಾಜ್ಯವಾಗಿಯೇ ಉಳಿದಿದ್ದ ಈ ಭೂಮಿ ಮೇಲಿನ ಹಕ್ಕಿಗೆ ಸಂಬಂಧಿಸಿದಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ಕೊನೆಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿತ್ತು. ಹೀಗಾಗಿ ಈ ಅಯೋಧ್ಯೆಯಲ್ಲಿ ಇದೀಗ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ.
Published by: MAshok Kumar
First published: August 4, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading