ಹರಿಯಾಣ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ; ಕಾಂಗ್ರೆಸ್​ನಿಂದ ರಣ್​ದೀಪ್​ ಸುರ್ಜೆವಾಲ, ಬಿಜೆಪಿಯಿಂದ ಕೃಷ್ಣ ಮಿಡಾ ಸ್ಪರ್ಧೆ

Harshith AS | news18
Updated:January 10, 2019, 1:45 PM IST
ಹರಿಯಾಣ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ; ಕಾಂಗ್ರೆಸ್​ನಿಂದ ರಣ್​ದೀಪ್​ ಸುರ್ಜೆವಾಲ, ಬಿಜೆಪಿಯಿಂದ ಕೃಷ್ಣ ಮಿಡಾ ಸ್ಪರ್ಧೆ
Harshith AS | news18
Updated: January 10, 2019, 1:45 PM IST
ನವದೆಹಲಿ (ಜ.10): ಮುಂಬರುವ ಹರಿಯಾಣ ಲೋಕಸಭಾ ಉಪಚುನಾವಣೆಗೆ ಎಲ್ಲ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್​ನಿಂದ ಹಿರಿಯ ನಾಯಕ ರಣ್​ದೀಪ್​ ಸುರ್ಜೆವಾಲ ಹಾಗೂ ಬಿಜೆಪಿ ಕ್ಷೇತ್ರದಿಂದ ರಾಷ್ಟ್ರೀಯ ಲೋಕದಳದ (ಐಎನ್​ಎಲ್​ಡಿ ) ಶಾಸಕ ಛಾಂದ್​ ಮಿಡಾರವರ ಮಗ ಕೃಷ್ಣ ಮಿಡಾರನ್ನು ಸ್ಪರ್ಧಿಸಲಿದ್ದಾರೆ.

ಜಿಂದ್​ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯ ಸ್ಪರ್ಧೆಗೆ ಕಾಂಗ್ರೆಸ್​ನಿಂದ ಹಲವು ನಾಯಕರ ಹೆಸರುಗಳು ಕೇಳಿ ಬಂದಿದ್ದವು. ಹಾಗಾಗಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನೇತೃತ್ವದ ಸಭೆಯಲ್ಲಿ ರಣ್​ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್​ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹರಿಯಾಣದ ಪ್ರಭಾವಿ ನಾಯಕರ ಪೈಕಿ ಸರ್ಜೆವಾಲ ಕೂಡ ಒಬ್ಬರು . 2005 ರಲ್ಲಿ ಭಾರತ ರಾಷ್ಟ್ರೀಯ ಲೋಕದಳದ ನಾಯಕ ಓಂ ಪ್ರಕಾಶ್ ಚೌಟಾಲ​​ ಅವರನ್ನು ಸೋಲಿಸಿದ್ದರು. ಉಪ ಚುನಾವಣೆಗೆ ಸರ್ಜೆವಾಲ ಸಂವಹನ ಉಸ್ತುವಾರಿಯಾಗಿ ಹಾಗೂ ಉಪಚುನಾವಣೆಯಲ್ಲಿಯೂ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್​ ಹಿಂದೆ ಪ್ರಧಾನಿ ಮೋದಿ ಹೆದರಿ ಅಡಗಿ ಕುಳಿತಿದ್ದಾರೆ; ರಾಹುಲ್​ ಗಾಂಧಿ ವ್ಯಂಗ್ಯ

ಜಿಂದ್​  ಕ್ಷೇತ್ರದ ಉಪ ಚುನಾವಣೆ ಜ.28 ರಂದು ನಡೆಯಲಿದ್ದು, ಜ.31 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ನಾಮನಿರ್ದೇಶನ ಪ್ರಕ್ರೀಯೆ ಜನವರಿ 3 ರಿಂದ 10 ವರೆಗೆ ನಡೆಯಲಿದೆ. ಸುರ್ಜೆವಾಲ ಹರಿಯಾಣದ ಕೈಥಾಲ್​ ಕ್ಷೇತ್ರದ ಶಾಸಕ.
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ