ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್​​​ ಹಿರಿಯ ನಾಯಕ; ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ!

17 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಏಪ್ರಿಲ್​​​ 11ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್​​ ಮತ್ತು ಟಿಆರ್​​​ಎಸ್​​ ನೇರ ಪೈಪೋಟಿ ಏರ್ಪಡಲಿದೆ.

Ganesh Nachikethu | news18
Updated:April 1, 2019, 4:24 PM IST
ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್​​​ ಹಿರಿಯ ನಾಯಕ; ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ!
ರಾಜೀನಾಮೆ ನೀಡಿದ ಕಾಂಗ್ರೆಸ್​​ ಹಿರಿಯ ನಾಯಕ ಸುಧಾಕರ್​​​ ರೆಡ್ಡಿ
  • News18
  • Last Updated: April 1, 2019, 4:24 PM IST
  • Share this:
ಹೈದರಾಬಾದ್​​(ಮಾ.04): ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಕಾಂಗ್ರೆಸ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​-ಟಿಡಿಪಿ ನೇತೃತ್ವದ ಮೈತ್ರಿ ಟಿಆರ್​​ಎಸ್​​​ ಎದುರು ಹೀನಾಯವಾಗಿ ಸೋಲು ಕಂಡಿತ್ತು. ಬಳಿಕ ಇಲ್ಲಿ ಕಾಂಗ್ರೆಸ್​​​ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬೆನ್ನಲ್ಲೀಗ ಕಾಂಗ್ರೆಸ್​​ ಪ್ರಬಲ ನಾಯಕ ಬಿಜೆಪಿ ಸೇರಲು ಮುಂದಾಗಿದ್ದು, ಹೈಕಮಾಂಡ್​​ ಅನ್ನು ಚಿಂತೆಗೀಡು ಮಾಡಿದೆ.

ತೆಲಂಗಾಣದಲ್ಲೀಗ ಪಕ್ಷಾಂತರ ಪರ್ವ ಜೋರಾಗಿದೆ. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಕಾಂಗ್ರೆಸ್​​ ಹಿರಿಯ ನಾಯಕ ಪೊಂಗುಲೇಟಿ ಸುಧಾಕರ್ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಭೇಟಿ ಮಾಡಿರುವ ಸುಧಾಕರ್​​ ರೆಡ್ಡಿ, ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬಿರುಸಿನಿಂದ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸುಧಾಕರ್​​ ರೆಡ್ಡಿ ಕಾಂಗ್ರೆಸ್ಸಿನ ಪ್ರಬಲ ನಾಯಕರಾಗಿದ್ದರು. ಇತ್ತೀಚೆಗಷ್ಟೇ ಓರ್ವ ಕಾಂಗ್ರೆಸ್​​ನಾಯಕ ಮತ್ತು ಶಾಸಕ ಡಿ.ಕೆ. ಅರುಣಾ ಬಿಜೆಪಿ ಸೇರಿದರು. ಈ ಬೆನ್ನಲ್ಲೇ ಮತ್ತೋರ್ವ ನಾಯಕ ಕಾಂಗ್ರೆಸ್​​ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದು, ರಾಹುಲ್​​ ಪಡೆಗೆ ಭಾರೀ ಹಿನ್ನಡೆಯಾಗಿದೆ. ಈಗಾಗಲೇ ರೆಡ್ಡಿಯ ಕಾಂಗ್ರೆಸ್ ಸದಸ್ಯತ್ವದ ಅವಧಿ ಮುಕ್ತಾಯವಾಗಿದೆ. ಅಲ್ಲದೇ ಬಿಜೆಪಿ ಸೇರ್ಪಡೆ ಆಗುತ್ತಿರುವ ಎರಡನೇ ಕಾಂಗ್ರೆಸ್​​ ನಾಯಕರು ಇವರಾಗಿದ್ಧಾರೆ.

ಇದನ್ನೂ ಓದಿ: ತೆಲಂಗಾಣ ಲೋಕಸಭಾ ಚುನಾವಣೆ: ಸಿಎಂ ಕೆಸಿಆರ್​​​ ಪುತ್ರಿ ವಿರುದ್ಧ 250ಕ್ಕೂ ಹೆಚ್ಚು ರೈತರು ನಾಮಪತ್ರ ಸಲ್ಲಿಕೆ!

ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರಿಗೆ ರೆಡ್ಡಿ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಹಾಗೆಯೇ ಚುನಾವಣೆ ಟಿಕೆಟ್​​ಗಳನ್ನು ದುಡ್ಡಿಗಾಗಿ ಕಾಂಗ್ರೆಸ್​​ ಮಾರಾಟ ಮಾಡುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್​​ಗಾಗಿ ದುಡಿದಿದ್ದೇನೆ. ಇಷ್ಟು ದಿನ ಸರಿಯಾಗಿದ್ದ ಪಕ್ಷವೀಗ ಬದಲಾಗಿದೆ. ಹಾಗಾಗಿ ಉತ್ತಮ ರಾಜಕೀಯ ಮಾಡಲು ಬಿಜೆಪಿ ಸೇರುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: 'ನಾವೇ ನಿಜವಾದ ಹಿಂದುಗಳು, ನೀವೆಲ್ಲಾ ಕೇವಲ ಬೋಗಸ್'; ಬಿಜೆಪಿ ವಿರುದ್ಧ ಸಿಎಂ ಕೆಸಿಆರ್​​​​ ಕಿಡಿ!

17 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಏಪ್ರಿಲ್​​​ 11ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್​​ ಮತ್ತು ಟಿಆರ್​​​ಎಸ್​​ ನೇರ ಪೈಪೋಟಿ ಏರ್ಪಡಲಿದೆ.--------------
First published:April 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ