Lakhimpur Kheri Massacre| ರಾಷ್ಟ್ರಪತಿ ಭೇಟಿ ಮಾಡಿ ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹಿಸಿದ ಕಾಂಗ್ರೆಸ್ ನಿಯೋಗ

ನ್ಯಾಯಯುತವಾದ ನ್ಯಾಯಾಂಗ ವಿಚಾರಣೆ ನಡೆಯಬೇಕು ಮತ್ತು ಹಿಂಸಾಚಾರಕ್ಕೆ ರೂವಾರಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.

ಲಖೀಂಪುರ್​ಖೇರಿ ಹಿಂಸಾಚಾರ.

ಲಖೀಂಪುರ್​ಖೇರಿ ಹಿಂಸಾಚಾರ.

  • Share this:
ನವದೆಹಲಿ, ಅ. 13: ಉತ್ತರಪ್ರದೇಶದ (Uttar Pradesh) ಲಖೀಂಪುರ್​ ಖೇರಿ (Lakhimpur Kheri) ಎಂಬಲ್ಲಿ ಅಕ್ಟೋಬರ್​ 03ರಂದು ರೈತರ ಹತ್ಯಾಕಾಂಡ (Lakhimpur Kheri Massacre) ನಡೆದಿತ್ತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶೀಶ್​ ಮಿಶ್ರಾ (Ashish Mishra) ತಮ್ಮ ದುಬಾರಿ ಕಾರ್​ ಅನ್ನು ರೈತ ಹೋರಾಟಗಾರರ ಮೇಲೆ ಹರಿಸಿದ್ದರು. ಈ ಘಟನೆಯಲ್ಲಿ ಕನಿಷ್ಟ 4 ಜನ ರೈತರು ಮೃತಪಟ್ಟಿದ್ದರು. ಇದರಿಂದ ದೊಡ್ಡ ಗಲಭೆಯೂ ಉಂಟಾಗಿತ್ತು. ಗಲಭೆಯಲ್ಲಿ ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು. ಒಟ್ಟು 9 ಜನರ ಸಾವಿಗೆ ಕಾರಣವಾಗಿದ್ದ ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಕೇಂದ್ರ ಸಚಿವ ಮತ್ತು ಆತನ ಪುತ್ರನೇ ನೇರ ಕಾರಣ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ (Supreme Court) ಸಹ ಮಧ್ಯಪ್ರವೇಶಿಸಿದ್ದು, ಸಚಿವ ಅಜಯ್ ಮಿಶ್ರಾ ಮತ್ತು ಆಶೀಶ್ ಮಿಶ್ರಾ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೂ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿಲ್ಲ‌. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಿಯೋಗ ಇಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್ (President Ramanath Kovind) ಅವರನ್ನು ಭೇಟಿ ಮಾಡಿದೆ.

ರಾಷ್ಟ್ರಪತಿ ಬಳಿ ಕಾಂಗ್ರೆಸ್​ ನಿಯೋಗ:

ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದ ‌ನಿಯೋಗದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (AICC General Secretry Priyanka Gandhi), ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Oppostion Leader of Rajyasabha Mallikarjuna Karge), ರಾಜ್ಯಸಭೆಯ ಪ್ರತಿಪಕ್ಷದ ಮಾಜಿ ನಾಯಕ ಗುಲಾಂನಭಿ ಆಜಾದ್ (Former Oppostion Leader of Rajyasabha Gulam Nabhi Azad) ಮತ್ತು ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ (Former Union Minister A.K. Antony) ಇದ್ದರು. ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿಯ ಅವರನ್ನು ಭೇಟಿ ಮಾಡಿ  ಲಖೀಂಪುರ್​ ಖೇರಿ ರೈತ ಹತ್ಯಾಕಾಂಡದ ಬಗ್ಗೆ ಚರ್ಚೆ ನಡೆಸಿದೆ. ಅಲ್ಲದೆ, ಈ ಘಟನೆಗೆ ಕಾರಣವಾದ ಸಚಿವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಒತ್ತಾಯಿಸಿದೆ.

ಕೇಂದ್ರ ಸಚಿವರ ವಜಾಕ್ಕೆ ಆಗ್ರಹ;

ರಾಷ್ಟ್ರಪತಿ ಭೇಟಿಯ ಬಳಿಕ‌ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್ ಗಾಂಧಿ ಅವರು,‌ 'ಅಪರಾಧ ನಡೆದ ನಂತರ ಸರ್ಕಾರ ಮತ್ತು ಆಡಳಿತವು ಎಚ್ಚೆತ್ತುಕೊಳ್ಳದೆ ಅವು ಅನ್ಯಾಯ ಮಾಡಲಲು ಮುಂದಾದಾಗ ನಾವು ಧ್ವನಿ ಎತ್ತುವುದು ಅಗತ್ಯ. ಹಾಗಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ದೂರು ನೀಡಿದ್ದೇವೆ.

ಲಖೀಂಪುರ್ ಖೇರಿ ಹಿಂಸಾಚಾರ  ಪ್ರಕರಣದಲ್ಲಿ ನಮಗೆ ಎರಡು ಬೇಡಿಕೆಗಳಿವೆ. ಮೊದಲನೆಯದಾಗಿ ಈ ಬಗ್ಗೆ ನ್ಯಾಯಯುತವಾದ ನ್ಯಾಯಾಂಗ ವಿಚಾರಣೆ ನಡೆಯಬೇಕು. ಇನ್ನೊಂದು ತಕ್ಷಣವೇ ಹಿಂಸಾಚಾರಕ್ಕೆ ಕಾರಣಕರ್ತ ಎನ್ನಲಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ  ವಜಾ ಮಾಡಬೇಕು' ಎಂದು ಹೇಳಿದ್ದಾರೆ.

ಇದನ್ನೂ ಓದಿ: Lakhimpur Kheri Massacre| ಲಖೀಂಪುರ್​ ರೈತ ಹತ್ಯಾಕಾಂಡ; ಹುತಾತ್ಮರಿಗೆ ದೇಶದ ಎಲ್ಲಾ ರೈತ ಸಮೂಹದಿಂದ ಅಂತಿಮ ನಮನ!

ಅನ್ಯಾಯದ ವಿರುದ್ಧ ದನಿ ಎತ್ತಿದ್ದೇವೆ; ಕಾಂಗ್ರೆಸ್

ಲಖೀಂಪುರ್ ಖೇರಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದಂತೆ ಅಲ್ಲಿಗೆ ಹೋಗಲು ಯತ್ನಿಸಿ ಮೂರು ದಿನ ಉತ್ತರ ಪ್ರದೇಶ ಪೊಲೀಸರು (Uttar Pradesh Police) ವಿಧಿಸಿದ ಗೃಹ ಬಂಧನದಲ್ಲಿದ್ದ (Home Arrest) ಪ್ರಿಯಾಂಕಾ ಗಾಂಧಿ ಅವರು ಕೂಡ ಇಂದಿನ ಕಾಂಗ್ರೆಸ್ ನಿಯೋಗದಲ್ಲಿ ಇದ್ದಿದ್ದು ಅಚ್ಚರಿಯಾಗಿತ್ತು. ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ, ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ (Uttar Pradesh Congress In Charge) ಆಗಿರುವ ಪ್ರಿಯಾಂಕಾ ಗಾಂಧಿ ನಿನ್ನೆ ಕೂಡ ಲಖೀಂಪುರ್ ಖೇರಿಗೆ ತೆರಳಿ‌ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.

ಇದನ್ನೂ ಓದಿ: Lakhimpur Kheri Massacre: ಉಪ್ರ. ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಲಖೀಂಪುರ್​ ರೈತ ಹತ್ಯಾಕಾಂಡ; ಬಿಜೆಪಿಯಲ್ಲಿ ತಳಮಳ

ರಾಷ್ಟ್ರಪತಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ಲಖಿಂಪುರ್-ಖೇರಿ ರೈತ ಹತ್ಯಾಕಾಂಡದ ಘಟನೆಯ ಕುರಿತು, ಇಂದು ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ನ್ಯಾಯದ ಪರವಾಗಿ ಧ್ವನಿಯನ್ನು ಎತ್ತಿದ್ದೇವೆ' ಎಂದು ಹೇಳಿದ್ದಾರೆ.
Published by:MAshok Kumar
First published: