• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Congress: ಇಂದಿನಿಂದ 3 ದಿನ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ, 2024ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ!

Congress: ಇಂದಿನಿಂದ 3 ದಿನ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ, 2024ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿ, ಆರ್ಥಿಕಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಾಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು  ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. 

ಮುಂದೆ ಓದಿ ...
  • Share this:

ನವದೆಹಲಿ(ಮೇ.13): ನಿರ್ಣಾಯಕವಾಗಿರುವ 2024ರ ಲೋಕಸಭಾ ಚುನಾವಣೆಗೆ (2024 Parliament Elections) ತಯಾರಿ ಆರಂಭಿಸುತ್ತಿರುವ ಕಾಂಗ್ರೆಸ್ ಪಕ್ಷವು (Congress Party) ಪಕ್ಷ ನೀತಿ ನಿಲುವುಗಳನ್ನು ರೂಪಿಸಲು ಇಂದು, ನಾಳೆ ಮತ್ತು ನಾಳಿದ್ದು ರಾಜಸ್ಥಾನದ (Rajasthan) ಉದಯಪುರದಲ್ಲಿ ಚಿಂತನ ಶಿಬಿರ (Chinthana Shivir) ಆಯೋಜಿಸಿದೆ. ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ನೇತೃತ್ವದಲ್ಲಿ ನಡೆಯುವ  ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಸೇರಿದಂತೆ 400ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು (Congress Leaders) ಭಾಗಿಯಾಗಲಿದ್ದಾರೆ (Participate) ಎಂದು ತಿಳಿದುಬಂದಿದೆ.


ಚುನಾವಣೆಗಳೇ ಟಾರ್ಗೆಟ್


ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಆಗುತ್ತದೆ ಎಂದು ತಿಳಿದುಬಂದಿದೆ. ಮೊದಲನೆಯದಾಗಿ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೇಗೆ ಸಜ್ಜಾಗಬೇಕು ಎಂದು. ಎರಡನೇಯದಾಗಿ  2024ರ ಲೋಕಸಭಾ ಚುನಾವಣೆಗೂ (Loksabha Election) ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ (Assembly Elections) ಯಾವ ರೀತಿಯ ಸನ್ನದ್ಧವಾಗಬೇಕು ಎಂದು.


ಚಿಂತನ ಶಿಬಿರದಲ್ಲಿ ಏನು ಚರ್ಚೆ?


ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಲೋಕಸಭಾ ಚುನಾವಣೆಗೆ ಪಕ್ಷದ ಪರ ವಾತಾವರಣ ನಿರ್ಮಿಸುವ ಬಗ್ಗೆಯೂ ಚಿಂತನ ಶಿಬಿರದಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.


ಹಲವು ಆಯಾಮಗಳಲ್ಲಿ ಚರ್ಚೆ


ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿ, ಆರ್ಥಿಕಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಾಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರು (Minorities) ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಈ ಎಲ್ಲಾ ವಿಷಯಗಳ ಮೇಲೆ ಹೇಗೆ ಚರ್ಚೆ ಮಾಡಬೇಕೆಂದು ಕಾರ್ಯಸೂಚಿ ರೂಪಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರು ಸಮಿತಿಗಳನ್ನು ರಚನೆ  ಮಾಡಿದ್ದಾರೆ.


ಕರ್ನಾಟಕದ ಐವರಿಗೆ ಅವಕಾಶ


ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ‌ ಅವರು ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ, ಆರ್ಥಿಕತೆ, ಸಂಘಟನೆ, ರೈತರು ಮತ್ತು ಕೃಷಿ ಹಾಗೂ ಯುವಕರು ಮತ್ತು ನಿರುದ್ಯೋಗ ಎಂಬ ಆರು ವಿಭಾಗಗಳಿಗೆ ಸಮಿತಿ‌ ರಚಿಸಿದ್ದು ಈ ಆರು ಸಮಿತಿಗಳಲ್ಲಿ ಕರ್ನಾಟಕದ ಐವರು‌ ನಾಯಕರಿಗೆ ಸ್ಥಾನ ನೀಡಲಾಗಿದೆ.


ನೀತಿ ನಿಲುವು ರೂಪಿಸಬೇಕಾದ ಹೊಣೆಗಾರಿಕೆ


ರಾಜ್ಯಸಭೆಯ ಪ್ರತಿಪಕ್ಷದ ನಾಯಕರೂ ಆದ ಮುತ್ಸದಿ ರಾಜಕಾರಣಿ‌ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯವಾಗಿ ನೀತಿ ನಿಲುವು ರೂಪಿಸಬೇಕಾದ ಹೊಣೆಗಾರಿಕೆ ನೀಡಲಾಗಿದೆ. ದೇಶದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕರ ಸಿದ್ದರಾಮಯ್ಯ ಅವರಿಗೆ ದೇಶದ ಆರ್ಥಿಕತೆ ಬಗ್ಗೆ ರೂಪಿಸಬೇಕಾದ ಸಮಿತಿಯಲ್ಲಿ ಜವಾಬ್ದಾರಿ ನೀಡಲಾಗಿದೆ.


ಇದನ್ನೂ ಓದಿ: Tomato Flu: ಕೇರಳದಲ್ಲಿ ನಿಗೂಢ ಕಾಯಿಲೆ ಟೊಮಾಟೋ ಜ್ವರ; ಮೈಸೂರು ಗಡಿಯಲ್ಲಿ ಕಟ್ಟೆಚ್ಚರ


ಇದೇ ಸಮಿತಿಯಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರೊ.‌ ರಾಜೀವಗೌಡ ಅವರಿಗೂ ಅವಕಾಶ ನೀಡಲಾಗಿದೆ. ದೇಶದಲ್ಲಿ ಇಂದು ನಿರುದ್ಯೋಗ ತಾರಕಕ್ಕೇರುತ್ತಿದ್ದು ಯುವಕರು ತೀವ್ರವಾದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಪರಿಹಾರೋಪಾಯಗಳನ್ನು ಸೂಚಿಸಬೇಕಾದ ಸಮಿತಿಯಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ.‌ ಮತ್ತು ಮಾಜಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಸ್ಥಾನ ನೀಡಲಾಗಿದೆ.

Published by:Divya D
First published: