Bharat Jodo Yatra: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ಲೋಪ; ಅಮಿತ್ ಶಾಗೆ ಖರ್ಗೆ ಪತ್ರ

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ನಾವು ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಶ್ಲಾಘಿಸುತ್ತೇವೆ ಮತ್ತು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಪ್ರಯಾಣದ ಅಂತ್ಯದವರೆಗೆ ಸಂಪೂರ್ಣ ಭದ್ರತೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಸಹ ಪ್ರಶಂಸಿಸುತ್ತಾರೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿ: ಭದ್ರತಾ ಲೋಪದ ಹಿನ್ನೆಲೆ ನಿನ್ನೆ ಒಂದು ದಿನದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ((Jammu Kashmir) ಭಾರತ್ ಜೋಡೋ (Bharat Jodo Yatra) ಯಾತ್ರೆಯನ್ನು ಕಾಂಗ್ರೆಸ್ (Congress) ರದ್ದುಗೊಳಿಸಿತ್ತು. ಇದಾದ ಒಂದು ದಿನದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು ಭಾರತ್ ಜೋಡೋ ಯಾತ್ರೆಗೆ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು (Security Lapse) ನಿಯೋಜಿಸುವಂತೆ ಮನವಿ ಮಾಡಿದ್ದಾರೆ. ಶುಕ್ರವಾರ ಖಾಜಿಗುಂಡ್‌ನಲ್ಲಿ (Qazigun) ನಡೆದ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಸ್ವಾಗತ ಕೋರಲು ಸಾಕಷ್ಟು ಮಂದಿ ಜಮಾಯಿಸಿದ್ದರು. ಆದರೆ ಈ ಜನರು ನಿಯಂತ್ರಿಸಲು ಯಾವುದೇ ಪೊಲೀಸರು ಇರಲಿಲ್ಲ. ಹೀಗಾಗಿ ಭಾರತ್ ಜೋಡೋ ಯಾತ್ರೆಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಬೇಕಾಯಿತು ಎಂದು ಕಾಂಗ್ರೆಸ್​ ಆರೋಪಿಸಿತ್ತು.


Rahul Gandhi finally wears a jacket as Bharat Jodo Yatra
ರಾಹುಲ್ ಗಾಂಧಿ


ಭದ್ರತೆ ಒದಗಿಸುವಂತೆ ಶಾಗೆ ಮಲ್ಲಿಕಾರ್ಜುನ ಖರ್ಗೆ ಪತ್ರ


ಜನವರಿ 30 ರಂದು ಶ್ರೀನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬೃಹತ್ ಸಮಾವೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜ.30ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಹಾಗೂ ಇತರೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸುತ್ತಿದ್ದಾರೆ. ಈ ವಿಚಾರದಲ್ಲಿ ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಯಾತ್ರೆ ಮತ್ತು ಶ್ರೀನಗರದಲ್ಲಿ ನಡೆಯುವ ಕಾರ್ಯಕ್ರಮದ ಪರಾಕಾಷ್ಠೆಯವರೆಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡುವಂತೆ ಕೋರುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.


ರಾಹುಲ್​ ಭದ್ರತಾ ಸಿಬ್ಬಂದಿ ನೀಡಿದ ಸಲಹೆ ಮೇರೆಗೆ ಯಾತ್ರೆ ಸ್ಥಗಿತ


ಭಾರತ್ ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ ಉಂಟಾದ ಹಿನ್ನೆಲೆ ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿದರು. ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿ ನೀಡಿದ ಸಲಹೆಯ ಮೇರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು ಎಂದರು.


ನಾವು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಶ್ಲಾಘನೆ ವ್ಯಕ್ತಪಡಿಸಿದ ಖರ್ಗೆ


ನಾವು ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಶ್ಲಾಘಿಸುತ್ತೇವೆ ಮತ್ತು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಪ್ರಯಾಣದ ಅಂತ್ಯದವರೆಗೆ ಸಂಪೂರ್ಣ ಭದ್ರತೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಸಹ ಪ್ರಶಂಸಿಸುತ್ತಾರೆ.


ಭಾರತ್ ಜೋಡೋ ಯಾತ್ರೆಗೆ ಪ್ರತಿದಿನ ಬರುತ್ತಿರುವ ಸಾಕಷ್ಟು ಮಂದಿ


ಪ್ರತಿದಿನ ಭಾರತ್ ಜೋಡೋ ಯಾತ್ರೆಯಲ್ಲಿ ಸಾಕಷ್ಟು  ಮಂದಿ ಸೇರುತ್ತಾರೆ.  ಜನಸಾಮಾನ್ಯರು ಯಾತ್ರೆಗೆ ಸೇರುವುದು ಸ್ವಯಂಪ್ರೇರಿತ ಸೂಚಕವಾಗಿರುವುದರಿಂದ ಆಯೋಜಕರಿಗೆ ದಿನದಲ್ಲಿ ಎಷ್ಟು ಜನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಎಂದು ನಿಖರವಾಗಿ ಹೇಳುವುದು ಕಷ್ಟ.


ಇದನ್ನೂ ಓದಿ: Mood Of the Nation: ಭಾರತ್ ಜೋಡೋ ಯಾತ್ರೆ ಮತವಾಗಿ ಪರಿವರ್ತಿತವಾಗಬಲ್ಲುದೇ? ಇಲ್ಲಿದೆ ಜನರ ಅಭಿಪ್ರಾಯ




ಜನವರಿ 30 ರಂದು ಮುಕ್ತಾಯಗೊಳ್ಳಲಿರುವ ಭಾರತ್ ಜೋಡೋ ಯಾತ್ರೆ


ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರು ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾಯಿತು ಮತ್ತು 12 ರಾಜ್ಯಗಳಲ್ಲಿ ಸಂಚರಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಮುಕ್ತಾಯಗೊಳ್ಳಲಿದೆ. 3500 ಕಿಮೀ ಪಾದಯಾತ್ರೆಯು ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸುವ ಗುರಿಯನ್ನು ಹೊಂದಿದೆ. ಆದರೆ ಈ ಯಾತ್ರೆಯು ರಾಜಕೀಯ ದೃಷ್ಟಿಯಿಂದಲ್ಲ. ದೇಶದಲ್ಲಿ ಹೆಚ್ಚುತ್ತಿರುವ  "ದ್ವೇಷ"ವನ್ನು ಕೊನೆಗೊಳಿಸಿ ಭಾರತವನ್ನು ಒಂದುಗೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಕ್ಷವು ಹೇಳಿಕೊಳ್ಳುತ್ತಿದೆ.

Published by:Monika N
First published: