Captain Amarinder Singh Meets Amit Shah; ದೆಹಲಿಯಲ್ಲಿ ಅಮಿತ್ ಶಾ ನಿವಾಸದಲ್ಲಿ ಕಾಂಗ್ರೆಸ್ ಕ್ಯಾಪ್ಟನ್; ಬಿಜೆಪಿ ಸೇರ್ಪಡೆ ಸಾಧ್ಯತೆ

ಕೃಷಿ ಕಾನೂನು ವಿರೋಧಿಸಿದ್ದರಿಂದ ಬಿಜೆಪಿ ಸೇರ್ಪಡೆಯಾದ್ರೆ ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗಿದೆ ಎನ್ನಲಾಗಿದೆ. ಅಮಿತ್ ಶಾ ಜೊತೆಗಿನ ಮೊದಲ ಭೇಟಿಯಲ್ಲೇ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಅಮರೀಂದರ್ ಸಿಂಗ್ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.

ಅಮರೀಂದರ್ ಸಿಂಗ್ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.

  • Share this:
    ನವದೆಹಲಿ: 10 ದಿನಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್  (Captain Amarinder Singh) ಇವತ್ತು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನ ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದರು. ನ್ಯೂಸ್ 18 ಪ್ರಕಾರ, ಎಲ್ಲ ಆಯ್ಕೆಗಳು ಮುಕ್ತವಾಗಿವೆ ಎಂದು ತಿಳಿದು ಬಂದಿದೆ. ಇಬ್ಬರು ನಾಯಕರು ರೈತರ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೀನಾಮೆ ಬಳಿಕ ಮೊದಲ ಬಾರಿಗೆ ಮಂಗಳವಾರ ದೆಹಲಿ ತಲುಪಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಯಾವ ನಾಯಕರನ್ನು ಭೇಟಿಯಾಗುತ್ತಿಲ್ಲ ಎಂದು ಹೇಳಿದ್ದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು (Navjot singh sidhu) ಜೊತೆಗಿನ ಸುದೀರ್ಘ ಸಂಘರ್ಷದ ಬಳಿಕ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಇತ್ತ ಮಂಗಳವಾರ ನವಜೋತ್ ಸಿಂಗ್ ಸಿಧು ರಾಜೀನಾಮೆ ಬಳಿಕ ಪಂಜಾಬ್ ಕಾಂಗ್ರೆಸ್ (Punjab Congress)ನಲ್ಲಿ ಸಂಚಲನ ಉಂಟಾಗಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇದೀಗ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಅಮಿತ್ ಶಾ ಭೇಟಿ ಮತ್ತಷ್ಟು ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನ ಹಲವು ಬಾರಿ ಭೇಟಿಯಾಗಿದ್ದರು. ಆದ್ರೆ ರಾಜೀನಾಮೆ ಬಳಿಕ ಭೇಟಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಕೆಲವರ ಪ್ರಕಾರ ಕ್ಯಾಪ್ಟನ್ ಬಿಜೆಪಿ ಸೇರ್ಪಡೆಯಾಗೋದು ಖಚಿತ ಎಂದು ಹೇಳುತ್ತಿದ್ದಾರೆ.

    ಬಿಜೆಪಿ ಸೇರ್ಪಡೆಗೆ ಕೃಷಿ ಕಾನೂನು ಅಡ್ಡಿ

    ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೃಷಿ ಕಾನೂನು (farms Law) ವಿರೋಧಿಸಿ ರೈತರ ಧರಣಿಯನ್ನು ಬೆಂಬಲಿಸಿದ್ದರು. ಜೊತೆಗೆ ನೂತನ ಮೂರು ಕೃಷಿ ಕಾನುನುಗಳನ್ನು ಹಿಂಪಡೆಯುವಂತೆ ಕೇಂದ್ರಕ್ಕೂ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಕೃಷಿ ಕಾನೂನು ವಿರೋಧಿಸಿದ್ದರಿಂದ ಬಿಜೆಪಿ ಸೇರ್ಪಡೆಯಾದ್ರೆ ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗಿದೆ ಎನ್ನಲಾಗಿದೆ. ಅಮಿತ್ ಶಾ ಜೊತೆಗಿನ ಮೊದಲ ಭೇಟಿಯಲ್ಲೇ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವ ಬಗ್ಗೆ ವರದಿಯಾಗಿದೆ.

    ಕ್ಯಾಪ್ಟನ್ ಎಂಟ್ರಿಯಾದ್ರೆ ಬಿಜೆಪಿ ಪ್ಲಾನ್ ಏನು?

    ಒಂದು ವೇಳೆ ಕ್ಯಾಪ್ಟನ್ ಬಿಜೆಪಿ ಸೇರ್ಪಡೆಯಾದರೆ ಸಹಜವಾಗಿ ಪಂಜಾನ್ ವಿಧಾನಸಭಾ ಚುನಾವಣೆಗೆ ಸಹಕಾರಿಯಾಗಲಿದೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಡುವೆ ಸೇತುವೆಯಾಗಿ ಕ್ಯಾಪ್ಟನ್ ಅವರನ್ನ ಬಿಜೆಪಿ ಬಳಸಿಕೊಳ್ಳಬಹುದು. ಈ ಮೂಲಕ ರೈತರನ್ನ ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಬಹುದು. ಆದರೆ ಕ್ಯಾಪ್ಟನ್ ಮಧ್ಯಸ್ಥಿಕೆಯ ಕೆಲಸವನ್ನು ಯಾವಾಗ ಮಾಡಬೇಕು ಎಂಬುದನ್ನು ಕೇಂದ್ರ ಕೃಷಿ ಸಚಿವರ ಜೊತೆಗಿನ ಚರ್ಚೆಯ ಬಳಿಕ ನಿರ್ಧಾರವಾಗುವ ಸಾಧ್ಯತೆಗಳಿವೆ.

    ಬಿಜೆಪಿ ಸೇರ್ಪಡೆಯ ಸುಳಿವು

    ಕ್ಯಾಪ್ಟನ್ ಸಿಎಂ ಕುರ್ಚಿ ತೊರೆದಾಗ ಮುಂದಿನ ನಡೆ ಏನು ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿತ್ತು. ರಾಜೀನಾಮೆ ನೀಡಿದ ದಿನದಂದೇ ಬಿಜೆಪಿ ಸೇರುವ ಸುಳಿವನ್ನು ಕ್ಯಾಪ್ಟನ್ ನೀಡಿದ್ದರು. 2017ರಲ್ಲಿಯೂ ಪ್ರತ್ಯೇಕವಾಗಿ ಜಾಟ್ ಸಮುದಾಯದ ಸಮಾವೇಶ ಆಯೋಜಿಸುವ ಮೂಲಕ ಕಾಂಗ್ರೆಸ್ ಗೆ ಟಕ್ಕರ್ ನೀಡಿದ್ದ ಕ್ಯಾಪ್ಟನ್ ಕಮಲ ಹಿಡಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ಅಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಅಮರೀಂದರ್ ಸಿಂಗ್ ಅವರನ್ನ ಉಳಿಸಿಕೊಂಡಿತ್ತು.

    ಇದನ್ನು ಓದಿ: Pension New Rule: ಈ ದಾಖಲಾತಿ ಸಲ್ಲಿಸದಿದ್ದರೆ ಇನ್ಮುಂದೆ ಪಿಂಚಣಿ ಹಣ ಬರಲ್ಲ.. ಸಂಪೂರ್ಣ ಮಾಹಿತಿ ಇಲ್ಲಿದೆ

    ನವಜೋತ್ ಸಿಂಗ್ ಸಿಧು ವಿರುದ್ಧ ವಾಗ್ದಾಳಿ

    ರಾಜೀನಾಮೆ ಬಳಿಕ ತಮ್ಮನ್ನು ಅವಮಾನಿಸಿದ್ದ ನವಜೋತ್ ಸಿಂಗ್ ಸಿಧು ವಿರುದ್ಧ ಕ್ಯಾಪ್ಟನ್ ಕಿಡಿ ನುಡಿಗಳನ್ನಾಡಿದ್ದರು. ಸಿಧು ಓರ್ವ ಆ್ಯಂಟಿ ನ್ಯಾಶನಲ್ ವ್ಯಕ್ತಿಯಾಗಿದ್ದು, ಅವರನ್ನ ಪಂಜಾಬ್ ಮುಖ್ಯಮಂತ್ರಿಯಾಗಲು ಬಿಡಲ್ಲ. ಸಿಧು ಗೆಲುವಿನ ಕುದುರೆಯನ್ನ ಕಟ್ಟಿ ಹಾಕಲು ಒಳ್ಳೆಯ ಅಭ್ಯರ್ಥಿಯನ್ನು ಹಾಕಲಾಗುವುದು. ಇದೇ ವೇಳೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಅನುಭವದ ಕೊರತೆ ಇದೆ ಎಂದು ಹೇಳಿದ್ದರು.

    ವರದಿ: ಮೊಹ್ಮದ್​​ ರಫೀಕ್​ ಕೆ
    Published by:HR Ramesh
    First published: