'ದೆಹಲಿಯಲ್ಲಿ ಕಾಂಗ್ರೆಸ್​ಗೆ ಒಂದು ಸ್ಥಾನವೂ ಸಿಗುವುದಿಲ್ಲ, ಬಿಜೆಪಿಯನ್ನು ಸೋಲಿಸಲು ನಾವೇ ಸರಿ'; ಕೇಜ್ರಿವಾಲ್

ಒಂದು ವೇಳೆ ದೆಹಲಿಯಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ ಎಂದು ನನಗೆ ಅನಿಸಿದ್ದರೆ ದೆಹಲಿಯಲ್ಲಿರುವ ಆಪ್​ನ ಎಲ್ಲ 7 ಕ್ಷೇತ್ರಗಳನ್ನೂ ಕಾಂಗ್ರೆಸ್​ಗೆ ಬಿಟ್ಟುಕೊಡಲು ನಾನು ಸಿದ್ಧನಿದ್ದೆ. ಆದರೆ, ಇಲ್ಲಿನ ಪರಿಸ್ಥಿತಿ ಬೇರೆಯೇ ಇದೆ ಎಂದು ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

sushma chakre | news18
Updated:January 24, 2019, 9:21 AM IST
'ದೆಹಲಿಯಲ್ಲಿ ಕಾಂಗ್ರೆಸ್​ಗೆ ಒಂದು ಸ್ಥಾನವೂ ಸಿಗುವುದಿಲ್ಲ, ಬಿಜೆಪಿಯನ್ನು ಸೋಲಿಸಲು ನಾವೇ ಸರಿ'; ಕೇಜ್ರಿವಾಲ್
ಅರವಿಂದ್​ ಕೇಜ್ರಿವಾಲ್​
sushma chakre | news18
Updated: January 24, 2019, 9:21 AM IST
ನವದೆಹಲಿ (ಜ. 24): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿಯನ್ನು ಮಣಿಸಬೇಕೆಂದರೆ ಅದು ಆಮ್​ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅರವಿಂದ್​ ಕೇಜ್ರಿವಾಲ್, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್​ ಒಂದು ಸ್ಥಾನ ಪಡೆಯಲೂ ಸಾಧ್ಯವಿಲ್ಲ. ಆದರೆ, ಜನರು ಮುಂದಿನ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್​ನವರಾಗಿರುವುದರಿಂದ ಈ ಬಾರಿ ಕಾಂಗ್ರೆಸ್​ಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾಗಿ, ನಾವು ಕಾಂಗ್ರೆಸ್​ಗೆ ಬೆಂಬಲ ನೀಡಿ ಅವರ ಪಕ್ಷದವರನ್ನು ಪ್ರಧಾನಿಯಾಗಿ ಆರಿಸಲು ಸಿದ್ಧರಿದ್ದೇವೆ. ಆದರೆ, ದೆಹಲಿಯಲ್ಲಿ ಕಾಂಗ್ರೆಸ್​ ಸ್ಪರ್ಧಿಸಿದರೆ ಒಂದು ಸೀಟೂ ಬರುವುದಿಲ್ಲ. ಹೀಗಾಗಿ, ಇಲ್ಲಿ ಬಿಜೆಪಿಯನ್ನು ಮಣಿಸಲು ಆಮ್​ ಆದ್ಮಿ ಪಕ್ಷಕ್ಕೆ ಮತ ಹಾಕಿ. ಆ ಮೂಲಕ ಕಾಂಗ್ರೆಸ್​ನ ಪ್ರಧಾನಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಎಂಟ್ರಿ ನಂತರ ಉ.ಪ್ರ.ದಲ್ಲಿ ಕಾಂಗ್ರೆಸ್ ಗುರಿ ಮಿಷನ್-30

ಒಂದು ವೇಳೆ ದೆಹಲಿಯಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ ಎಂದು ನನಗೆ ಅನಿಸಿದ್ದರೆ ದೆಹಲಿಯಲ್ಲಿರುವ ಆಪ್​ನ ಎಲ್ಲ 7 ಕ್ಷೇತ್ರಗಳನ್ನೂ ಕಾಂಗ್ರೆಸ್​ಗೆ ಬಿಟ್ಟುಕೊಡಲು ನಾನು ಸಿದ್ಧನಿದ್ದೆ. ಆದರೆ, ಇಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ಇಲ್ಲಿ ಒಂದುವೇಳೆ ಕಾಂಗ್ರೆಸ್​ ಸ್ಪರ್ಧಿಸಿದರೆ ಮತಗಳು ಒಡೆದುಹೋಗುತ್ತವೆ. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ನಿಮ್ಮ ಮತಗಳು ವಿಭಜನೆಯಾದರೆ ಅದರ ಪರಿಣಾಮ ಮುಂದಿನ ಸರ್ಕಾರ ರಚನೆಯ ಸಂದರ್ಭದಲ್ಲಿ ಗೋಚರವಾಗುತ್ತದೆ.  ಹಾಗಾಗಿ, ಆಮ್​ ಆದ್ಮಿಗೆ ಮತ ಹಾಕಿ, ನಾವು ಕಾಂಗ್ರೆಸ್​ಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಆಗ ಶೇ. 46ರಷ್ಟು ಮತ ಚಲಾವಣೆ ಆಗಿತ್ತು. ಅದರಲ್ಲಿ ಶೇ. 33ರಷ್ಟು ಮತಗಳು ಬಿಜೆಪಿಗೆ ಲಭಿಸಿದ್ದವು. ಈ ಬಾರಿಯೂ ಹಾಗೇ ಆದರೆ ಮತ್ತೆ ಬಿಜೆಪಿ ಜಯ ಸಾಧಿಸುತ್ತದೆ. ಈಗಾಗಲೇ ಮಾಧ್ಯಮಗಳು ಈ ಬಾರಿಯ ಚುನಾವಣೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಹಣಾಹಣಿಯಾಗಲಿದೆ ಎಂದು ಹೇಳುತ್ತಿವೆ. ಆದರೆ, ಅದೊಂದೇ ನಿಜವಲ್ಲ. ಬೇರೆ ಪಕ್ಷಗಳೂ ಈ ಬಾರಿಯ ಚುನಾವಣೆಯಲ್ಲಿ ಪೈಪೋಟಿ ನೀಡಲಿವೆ. ಅವರಿಬ್ಬರನ್ನೂ ಬಿಟ್ಟು ಬೇರೆ ಯಾರಾದರೂ ಪ್ರಧಾನಿ ಅಭ್ಯರ್ಥಿಯಾದರೆ ನಾವು ಬೆಂಬಲ ನೀಡುತ್ತೇವೆ ಎಂದು ಮಹಾಘಟಬಂಧನ್​ ಕುರಿತು ಪರೋಕ್ಷವಾಗಿ ಕೇಜ್ರಿವಾಲ್​ ಮಾತನಾಡಿದ್ದಾರೆ.

ಇದನ್ನೂ ಓದಿ: ಜೇಟ್ಲಿ ಈಗ ಖಾತೆ ಇಲ್ಲದ ಮಂತ್ರಿ; ಪಿಯೂಶ್ ಗೋಯೆಲ್ ಅವರಿಂದಲೇ ಈ ಬಾರಿ ಬಜೆಟ್ ಮಂಡನೆ

ಹೇಗೆ ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್​ ತಮ್ಮ ಪಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕಿಸಲು ಪ್ರಯತ್ನ ನಡೆಸಿದ್ದಾರೋ ಹಾಗೇ ದೆಹಲಿಯಲ್ಲಿ ಆಪ್​ ಮೋದಿ ಮತ್ತು ಅಮಿತ್​ ಷಾ ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಲಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಹಿಟ್ಲರ್​ ಅಧಿಕಾರದ ವಾತಾವರಣ ನಿರ್ಮಾಣವಾಗಲಿದೆ. ಆ ರೀತಿ ಆಗಲು ನಾವು ಬಿಡುವುದಿಲ್ಲ ಎಂದು ಕೇಜ್ರಿವಾಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Loading...

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ