Bharat Jodo Yatra: ದ್ವೇಷದ ರಾಜಕಾರಣದಿಂದ ಅಪ್ಪನನ್ನು ಕಳೆದುಕೊಂಡೆ, ಈಗ ದೇಶವನ್ನು ಬಲಿಯಾಗಲು ಬಿಡಲ್ಲ: ರಾಹುಲ್ ಗಾಂಧಿ!

ಇನ್ನು ರಾಜೀವ್‌ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ರಾಹುಲ್, "ದ್ವೇಷ ಮತ್ತು ವಿಭಜನೆಯ ರಾಜಕಾರಣ"ದಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಆದರೀಗ ಇದೇ ಕಾರಣದಿಂದ "ಪ್ರೀತಿಯ ದೇಶ"ವನ್ನೂ ಕಳೆದುಕೊಳ್ಳುಲು ತಯಾರಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ(ಸೆ.07): ಇಂದಿನಿಂದ ಕಾಂಗ್ರೆಸ್ ನ 'ಭಾರತ್ ಜೋಡೋ ಯಾತ್ರೆ' (Congress Bharat Jodo) ಆರಂಭವಾಗಿದೆ. ಯಾತ್ರೆ ಆರಂಭಿಸುವ ಮುನ್ನ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ಶ್ರೀಪೆರಂಬದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಕನ್ಯಾಕುಮಾರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (tamil Nadu Chief Mibister MK Stalin) ರಾಹುಲ್ ಗಾಂಧಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಿದ್ದಾರೆ. ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಟಾಲಿನ್ ಸಹ ಉಪಸ್ಥಿತರಿದ್ದು, ನಂತರ ರಾಹುಲ್ ಗಾಂಧಿ ಇತರ ಕಾಂಗ್ರೆಸ್ ನಾಯಕರೊಂದಿಗೆ ಯಾತ್ರೆಯು ಔಪಚಾರಿಕವಾಗಿ ಪ್ರಾರಂಭವಾಗುವ ಸಾರ್ವಜನಿಕ ರ್ಯಾಲಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಇನ್ನು ರಾಜೀವ್‌ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ರಾಹುಲ್, "ದ್ವೇಷ ಮತ್ತು ವಿಭಜನೆಯ ರಾಜಕಾರಣ"ದಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಆದರೀಗ ಇದೇ ಕಾರಣದಿಂದ "ಪ್ರೀತಿಯ ದೇಶ"ವನ್ನೂ ಕಳೆದುಕೊಳ್ಳುಲು ತಯಾರಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ. ಭರವಸೆ ಭಯವನ್ನು ಸೋಲಿಸುತ್ತದೆ. ಒಟ್ಟಾಗಿ, ನಾವು ಜಯಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! ಮತದಾರರಿಗೆ ರಾಹುಲ್ ಗಾಂಧಿ ಭರವಸೆ

ಕನ್ಯಾಕುಮಾರಿಯಿಂದ ಶ್ರೀನಗರದವರೆಗಿನ 3,570 ಕಿ.ಮೀ ದೂರದ ಪ್ರಯಾಣದ ಔಪಚಾರಿಕ ಆರಂಭವು ರ‍್ಯಾಲಿಯಲ್ಲಿ ನಡೆಯಲಿದೆ. ಈ ಪಾದಯಾತ್ರೆ ಸೆ.11ರಂದು ಕೇರಳ ತಲುಪಲಿದ್ದು, ಮುಂದಿನ 18 ದಿನಗಳ ಕಾಲ ರಾಜ್ಯಗಳ ಮೂಲಕ ಸಾಗಿ ಸೆ.30ರಂದು ಕರ್ನಾಟಕ ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಈ ಪಯಣ ನಡೆಯಲಿದ್ದು, ನಂತರ ಉತ್ತರ ರಾಜ್ಯಗಳಿಗೆ ತೆರಳಲಿದೆ. ಕೇರಳದ ತಿರುವನಂತಪುರ ಮತ್ತು ಕೊಚ್ಚಿ, ಕರ್ನಾಟಕದ ಮೈಸೂರು, ಮಹಾರಾಷ್ಟ್ರದ ನಾಂದೇಡ್, ಮಧ್ಯಪ್ರದೇಶದ ಇಂದೋರ್, ರಾಜಸ್ಥಾನದ ಕೋಟಾ, ಉತ್ತರ ಪ್ರದೇಶದ ಬುಲಂದ್‌ಶಹರ್, ದೆಹಲಿ, ಹರಿಯಾಣದ ಅಂಬಾಲಾ, ಪಂಜಾಬ್‌ನ ಪಠಾಣ್‌ಕೋಟ್ ಮತ್ತು ಜಮ್ಮು ಮೂಲಕ ಶ್ರೀನಗರದಲ್ಲಿ ಪ್ರಯಾಣ ಕೊನೆಗೊಳ್ಳಲಿದೆ.


ರಾಹುಲ್ ಗಾಂಧಿ ಘೋಷಣೆ

ಕಳೆದ ತಿಂಗಳು, ಕಾಂಗ್ರೆಸ್ ಯಾತ್ರೆಗೆ ಸಂಬಂಧಿಸಿದ ಲೋಗೋ, ಅಡಿಬರಹ, ವೆಬ್‌ಸೈಟ್ ಮತ್ತು ಕಿರುಪುಸ್ತಕವನ್ನು ಬಿಡುಗಡೆ ಮಾಡಿತು ಮತ್ತು ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ವಿಭಜನೆಗಳ ದೃಷ್ಟಿಯಿಂದ 'ದೇಶಹಿತ'ದ ಸಲುವಾಗಿ ಯಾತ್ರೆ ಅಗತ್ಯ ಎಂದು ಹೇಳಿದೆ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸುತ್ತಾ ಮಾತನಾಡಿದ ರಾಹುಲ್ ಗಾಂಧಿ 'ಒಂದು ನಿನ್ನ ಹೆಜ್ಜೆ, ಒಂದು ನನ್ನ ಹೆಜ್ಜೆ ಸೇರಿದರೆ ನಮ್ಮ ದೇಶವೇ ಒಂದಾಗುತ್ತದೆ. ಬನ್ನಿ ಒಟ್ಟಿಗೆ ಸೇರಿ ಭಾರತವನ್ನು ಒಂದಾಗಿಸೋಣ' ಎಂದು ಬರೆದಿದ್ದಾರೆ.

ಪ್ರಾರಂಭದಿಂದ ಕೊನೆಯವರೆಗೆ 100 ಪಾದಚಾರಿಗಳು

ಆರಂಭದಿಂದ ಅಂತ್ಯದವರೆಗೆ ನಡೆಯುವ ಈ ಯಾತ್ರೆಯಲ್ಲಿ 100 ಜನ ಪಾದಯಾತ್ರೆ ನಡೆಸಲಿದ್ದಾರೆ ಎಂಬುದು ಕಾಂಗ್ರೆಸ್ ನ ಅಭಿಪ್ರಾಯ. ಅವರು 'ಭಾರತ ಯಾತ್ರಿ' ಆಗಲಿದ್ದಾರೆ. ಈ ಪ್ರಯಾಣವು ಹಾದುಹೋಗದ ರಾಜ್ಯಗಳಲ್ಲಿ, 100-100 ಜನರು ಅದರಲ್ಲಿ ಭಾಗಿಯಾಗುತ್ತಾರೆ, ಇವರೆಲ್ಲರೂ ಅತಿಥಿ ಪ್ರಯಾಣಿಕರಾಗಿರುತ್ತಾರೆ. ಪ್ರಯಾಣವು ಹಾದುಹೋಗುವ ರಾಜ್ಯಗಳಿಂದ 100-100 ಪ್ರಯಾಣಿಕರು ತೊಡಗಿಸಿಕೊಳ್ಳುತ್ತಾರೆ. ಇವರು ರಾಜ್ಯದ ಪ್ರಯಾಣಿಕರಾಗಿರುತ್ತಾರೆ. ಒಂದೇ ಬಾರಿಗೆ 300 ಪಾದಚಾರಿಗಳು ಇದರಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ: Rahul Gandhi: ಅವಧಿಗೂ ಮುನ್ನವೇ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ?

ಪ್ರತಿದಿನ 20-25 ಕಿ.ಮೀ

ಗಾಂಧಿ ಸೇರಿದಂತೆ 118 ನಾಯಕರನ್ನು ಪಕ್ಷವು 'ಭಾರತ ಯಾತ್ರಿಗಳು' ಎಂದು ವರ್ಗೀಕರಿಸಿದೆ, ಅವರು ಕನ್ಯಾಕುಮಾರಿಯಿಂದ ಶ್ರೀನಗರದವರೆಗಿನ ದೂರವನ್ನು ಕ್ರಮಿಸುತ್ತಾರೆ. ಅವರು ಪ್ರತಿದಿನ ಸರಾಸರಿ 20-25 ಕಿ.ಮೀ ದೂರ ಕ್ರಮಿಸಲಿದ್ದಾರೆ.118 'ಭಾರತ ಯಾತ್ರಿ'ಗಳ ಪೈಕಿ ರಾಹುಲ್ ಗಾಂಧಿ ಸೇರಿದಂತೆ ಒಂಬತ್ತು ನಾಯಕರು 51-60 ವರ್ಷ ವಯಸ್ಸಿನವರಾಗಿದ್ದಾರೆ. 118 ನಾಯಕರಲ್ಲಿ 20 ಮಂದಿ 25-30 ವರ್ಷ ವಯಸ್ಸಿನವರು ಎಂದು ಅವರು ಹೇಳಿದರು; 51 ಮಂದಿಯ ವಯಸ್ಸು 31-40ರ ನಡುವೆ ಇದ್ದರೆ, 38 ಮಂದಿ 41-50 ವಯಸ್ಸಿನವರಾಗಿದ್ದಾರೆ.
Published by:Precilla Olivia Dias
First published: