ಹಲವಾರು ಉದ್ಯೋಗಗಳಿವೆ, ಯೋಗ್ಯ ಅಭ್ಯರ್ಥಿಗಳಿಲ್ಲ: ಸಿಎಂ ಯೋಗಿ ಆದಿತ್ಯನಾಥ್​


Updated:September 2, 2018, 4:53 PM IST
ಹಲವಾರು ಉದ್ಯೋಗಗಳಿವೆ, ಯೋಗ್ಯ ಅಭ್ಯರ್ಥಿಗಳಿಲ್ಲ: ಸಿಎಂ ಯೋಗಿ ಆದಿತ್ಯನಾಥ್​

Updated: September 2, 2018, 4:53 PM IST
ನ್ಯೂಸ್​ 18 ಕನ್ನಡ

ಲಕ್ನೋ(ಸೆ.02): ಕಾಂಗ್ರೆಸ್​ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಯೋಗಿ ಆದಿತ್ಯನಾಥ್​ರವರು ಯೋಗ್ಯ ಹಾಗೂ ಅಕ್ಷರಸ್ಥ ಆದರೆ ನಿರುದ್ಯೋಗಿ ಯುವಕರಿಗೆ ಘೋರ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್​ ಹೇಳಿಕೆ ನೀಡಿದೆ. ಅಷ್ಟಕ್ಕೂ ಕಾಂಗ್ರೆಸ್​ನ ಈ ಅರೋಪಕ್ಕೆ ಕಾರಣವೇನು? ಸಿಎಂ ಯೋಗಿ ಆದಿತ್ಯನಾಥ್​ ಯುವಕರ ಕುರಿತಅಗಿ ಏನು ಹೇಳಿದ್ದಾರೆ ಅಂತೀತರಾ? ಇಲ್ಲಿದೆ ವಿವರ

ಯೋಗಿ ಆದಿತ್ಯನಾಥ್​ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್​ "ಯೋಗಿ ಆದಿತ್ಯನಾಥ್​ ರಾಜ್ಯದಲ್ಲಿ ಹಲವಾರು ಉದ್ಯೋಗಗಳಿವೆ, ಆದರೆ ಯೋಗ್ಯ ಅಭ್ಯರ್ಥಿಗಳಿಲ್ಲ" ಎಂದು ಹೇಳಿರುವುದು ಹಾಸ್ಯಾಸ್ಪದ ಹಾಗೂ ಖಂಡನಾರ್ಹ ವಿಚಾರ ಎಂದಿದೆ. ಇನ್ನು ಪ್ರಾದೇಶಿಕ ಕಾಂಗ್ರೆಸ್​ ವಕ್ತಾರ ಡಾ. ಉಮಾಶಂಕರ್​ ಪಾಂಡೆ ಮಾತನಾಡುತ್ತಾ 'ಬಹುಶಃ ಮುಖ್ಯಮಂತ್ರಿಯವರಿಗೆ ಈ ಪ್ರದೇಶವು, ಪ್ರತಿವರ್ಷ ನಮ್ಮ ದೇಶಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಐಎಎಸ್​ ಅಧಿಕಾರಿಗಳನ್ನು ನೀಡುತ್ತದೆ ಎಂಬ ವಿಚಾರ ತಿಳಿದಂತಿಲ್ಲ. ದೇಶದ ಶೇ. 15ರಷ್ಟು ಐಎಎಸ್​ ಅಧಿಕಾರಿಗಳು ಉತ್ತರ ಪ್ರದೇಶದಿಂದ ಬರುತ್ತಾರೆ. ಒಂದು ವರದಿಯನ್ವಯ, 4443 ಐಎಎಸ್​ ಅಧಿಕಾರಿಗಳಲ್ಲಿ 671 ಮಂದಿ ಉತ್ತರ ಪ್ರದೇಶದವರಾಗಿದ್ದಾರೆಂದು ತಿಳಿದು ಬಂದಿದೆ. 1972 ರಿಂದ 2017ರವರೆಗೆ ಉತ್ತರ ಪ್ರದೇಶದ ಯುವಕರು 5 ಬಾರಿ ಐಎಎಸ್​ನಲ್ಲಿ ಟಾಪ್​ ಮಾಡಿದ್ದಾರೆ. ಲಕ್ನೋದಲ್ಲಿರುವ ಕೆಜಿಎಮ್​ಯು ಇಡೀ ದೇಶದಲ್ಲಿ ಅತ್ಯುನ್ನತವೆಂದು ಹೇಳಲಾಗುತ್ತದೆ. ಇಲ್ಲಿ ಕಲಿತು ವೈದ್ಯರಾದವರು ದೇಶ ಹಾಗೂ ವಿದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ "ಉತ್ತರ ಪ್ರದೇಶ ಸರ್ಕಾರ ತನ್ನ ತಪ್ಪನ್ನು ಮುಚ್ಚಿಹಾಕಲು ಇಂತಹ ಉಪಯೋಗಕ್ಕೆ ಬಾರದ ಹೇಳಿಕೆಗಳನ್ನು ಕೊಡುತ್ತದೆ. ಇಂದು ಪತ್ರಿಕೆಗಳಲ್ಲಿ 46 ಸಾವಿರ ಶಿಕ್ಷಕರನ್ನು ನೇಮಕ ಮಾಡುವ ಬದಲಾಗಿ, 9 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿರುವ ಸುದ್ದಿ ಬಂದಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವವಿಲ್ಲ, ಅಧಿಕಾರಶಾಹಿ ಧೋರಣೆ ನೆಲೆಯೂರಿದೆ" ಎಂದಿದ್ದಾರೆ.

5ನೇ ತರಗತಿ ವಿದ್ಯಾರ್ಹತೆ ಹುದ್ದೆಗೆ 50 ಸಾವಿರ ಪದವೀಧರರು, 3700 ಪಿಎಚ್​ಡಿ ಪದವೀಧರರು!

ಸಿಎಂ ಯೋಗಿ ಆದಿತ್ಯನಾಥ್​ರವರ ಈ ಹೇಳಿಕೆಯ ಬೆನ್ನಲ್ಲೇ ಇಲ್ಲಿನ ಪೊಲೀಸ್​ ಇಲಾಖೆಯಲ್ಲಿ ಕನಿಷ್ಟ 5 ನೆ ತರಗತಿ ವಿದ್ಯಾರ್ಹತೆಯ ಟೆಲಿಕಾಂ ಮೆಸೆಂಜರ್​ ಹುದ್ದೆಗೆ 50 ಸಾವಿರಕ್ಕೂ ಅಧಿಕ, 28 ಸ್ನಾತಕೋತ್ತರ ಹಾಗೂ 3700 ಪಿಎಚ್​ಡಿ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದಿಗೆ ಬಂದಿರುವ ಒಟ್ಟು 93 ಸಾವಿರ ಅಭ್ಯರ್ಥಿಗಳ ಪೈಕಿ 7400 ಅಭ್ಯರ್ಥಿಗಳು ಮಾತ್ರ 5 ರಿಂದ 7ನೇ ತರಗತಿವರೆಗೆ ಶಿಕ್ಷಣ ಪಡೆದವರಾಗಿದ್ದಾರೆ.
Loading...

ಬರೋಬ್ಬರಿ 12 ವರ್ಷಗಳ ಬಳಿಕ ಇಲ್ಲಿನ ಪಿಯೋನ್​-ಮೆಸೆಂಜರ್​ ವಿಭಾಗದ 62 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...