• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Congress vs BJP: 9 ವರ್ಷ ತುಂಬಿದ ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ಒಂಭತ್ತು ಪ್ರಶ್ನೆ! ಮೌನ ಮುರಿಯಲು ಆಗ್ರಹ

Congress vs BJP: 9 ವರ್ಷ ತುಂಬಿದ ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ಒಂಭತ್ತು ಪ್ರಶ್ನೆ! ಮೌನ ಮುರಿಯಲು ಆಗ್ರಹ

ಬಿಜೆಪಿಗೆ ಕಾಂಗ್ರೆಸ್‌ನಿಂದ 9 ಪ್ರಶ್ನೆ

ಬಿಜೆಪಿಗೆ ಕಾಂಗ್ರೆಸ್‌ನಿಂದ 9 ಪ್ರಶ್ನೆ

ಕೇಂದ್ರದಲ್ಲಿ ಒಂಭತ್ತು ವರ್ಷ ಪೂರೈಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ 9 ಪ್ರಶ್ನೆಗಳನ್ನು ಕೇಳಿದ್ದು, ಈ ಎಲ್ಲ ಪ್ರಶ್ನೆಗಳಿಗೆ ಮೌನ ಮುರಿದು ಉತ್ತರಿಸುವಂತೆ ಒತ್ತಾಯಿಸಿದೆ.

 • Share this:

ನವದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಒಂಭತ್ತು ವರ್ಷಗಳಾಗುತ್ತಿವೆ. ಬಿಜೆಪಿ ಸರ್ಕಾರ (BJP Govt) ಈ ಒಂಭತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ 9 ಪ್ರಶ್ನೆಗಳನ್ನು ಕೇಳುವ ಮೂಲಕ ಮೌನ ಮುರಿದು ಉತ್ತರಿಸುವಂತೆ ಒತ್ತಾಯಿಸಿದೆ. ಅಷ್ಟು ಮಾತ್ರವಲ್ಲದೇ ಕೇಂದ್ರದಲ್ಲಿ 9 ವರ್ಷ ಪೂರೈಸಿದ ದಿನವನ್ನು ಮಾಫಿ ದಿವಸ ಎಂದು ಆಚರಿಸಬೇಕು ಎಂದು ಕಾಂಗ್ರೆಸ್ (Congress) ಒತ್ತಾಯಿಸಿದೆ.


ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪವನ್ ಖೇರಾ, ಸುಪ್ರಿಯಾ ಶ್ರೀನೇತ ಸೇರಿದಂತೆ ಇನ್ನಿತರ ನಾಯಕರು, ಮೋದಿ ಸರ್ಕಾರದ ಕುರಿತ ‘ನೌ ಸಾಲ್, ನೌ ಸವಾಲ್’ (9 ವರ್ಷ, 9 ಪ್ರಶ್ನೆ) ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಜೈರಾಮ್ ರಮೇಶ್, ನಾವು ಉತ್ತರಕ್ಕಾಗಿ ಬೇಡಿಕೆ ಇಟ್ಟಾಗ 900 ವರ್ಷಗಳ ಹಿಂದೆ ಹೋಗಬೇಡಿ, ನೀವು ಒಂಬತ್ತು ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಪ್ರತಿಯೊಬ್ಬರೂ ತಿಳಿಯಲು ಬಯಸುತ್ತಿದ್ದಾರೆ. ಪ್ರಧಾನಿ ಮೋದಿ ಮೌನ ಮುರಿದು ಈ 9 ಪ್ರಶ್ನೆಗಳಿಗೆ ಉತ್ತರಿಸಬೇಕು ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ದ್ರೋಹಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.


ಇದನ್ನೂ ಓದಿ: Special ₹75 Coin: ಸಂಸತ್ ಭವನದ ಉದ್ಘಾಟನೆ ದಿನ ₹75 ನಾಣ್ಯ ಅನಾವರಣ, ಏನಿದರ ವಿಶೇಷತೆ ಗೊತ್ತಾ?


ಕಾಂಗ್ರೆಸ್ ಕೇಳಿದ 9 ಪ್ರಶ್ನೆಗಳು ಇಲ್ಲಿವೆ.


 • ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಹೆಚ್ಚಾಗುತ್ತಿದೆ? ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಬಡವರು ಬಡವರಾಗಿದ್ದಾರೆ? ಹೀಗಾಗಿ ಆರ್ಥಿಕ ಅಸಮಾನತೆಗಳು ಹೆಚ್ಚುತ್ತಿರುವಾಗ ಸಾರ್ವಜನಿಕ ಆಸ್ತಿಯನ್ನ ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತರಿಗೆ ಏಕೆ ಮಾರಾಟ ಮಾಡಲಾಗುತ್ತಿದೆ?

 • ಮೂರು ಕೃಷಿ ಕಾನೂನುಗಳನ್ನ ರದ್ದುಗೊಳಿಸುವಾಗ ರೈತರ ಜೊತೆ ಮಾಡಿದ ಒಪ್ಪಂದಗಳನ್ನ ಯಾಕೆ ಗೌರವಿಸಿಲ್ಲ? ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಯಾಕೆ ಖಾತ್ರಿಪಡಿಸಿಲ್ಲ? ಕಳೆದ 9 ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟಾಗಲಿಲ್ಲ ಯಾಕೆ?

 • ಎಲ್ಐಸಿ ಮತ್ತು ಎಸ್‌ಬಿಐನಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನ ಪ್ರಧಾನಿ ತಮ್ಮ ‘ಗೆಳೆಯ’ ಅದಾನಿಗೆ ಲಾಭವಾಗುವಂತೆ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಯಾಕೆ? ಕಳ್ಳರನ್ನು ತಪ್ಪಿಸಿಕೊಳ್ಳಲು ಬಿಡುತ್ತಿದ್ದೀರಿ ಯಾಕೆ? ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ನೀವು ಮೌನವಾಗಿದ್ದೀರಿ ಯಾಕೆ ಮತ್ತು ಭಾರತೀಯರನ್ನು ತೊಂದರೆ ಅನುಭವಿಸಲು ಬಿಡುತ್ತಿರೋದು ಯಾಕೆ?

 • 2020 ರಲ್ಲಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ ನಂತರವೂ ಅವರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸುವುದನ್ನು ನಿಲ್ಲಿಸಿಲ್ಲ ಯಾಕೆ?

 • ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕ ದ್ವೇಷದ ರಾಜಕೀಯವನ್ನು ಮಾಡುತ್ತಿದ್ದೀರಿ ಯಾಕೆ ಮತ್ತು ಸಮಾಜದಲ್ಲಿ ಭಯದ ವಾತಾವರಣವನ್ನು ಉತ್ತೇಜಿಸುತ್ತಿರುವುದು ಯಾಕೆ?

 • ಮಹಿಳೆಯರು, ದಲಿತರು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ನೀವು ಮೌನವಾಗಿರೋದು ಯಾಕೆ? ಜಾತಿ ಜನಗಣತಿಯ ಬೇಡಿಕೆಯನ್ನು ನೀವು ನಿರ್ಲಕ್ಷಿಸುತ್ತಿದ್ದೀರಿ ನಿಜ ಅಲ್ಲವೇ?

 • ಬಡವರು, ನಿರ್ಗತಿಕರು ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಅವರ ಬಜೆಟ್‌ಗಳನ್ನ ಕಡಿತಗೊಳಿಸುವ ಮೂಲಕ ಮತ್ತು ನಿರ್ಬಂಧಿತ ನಿಯಮಗಳನ್ನು ಮಾಡುವ ಮೂಲಕ ಸರ್ಕಾರವು ಆ ಯೋಜನೆಗಳನ್ನು ದುರ್ಬಲಗೊಳಿಸಿರೋದು ಯಾಕೆ?

 • ಕಳೆದ 9 ವರ್ಷಗಳಲ್ಲಿ ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ ಯಾಕೆ? ನೀವು ವಿರೋಧ ಪಕ್ಷಗಳು ಮತ್ತು ನಾಯಕರ ವಿರುದ್ಧ ಸೇಡಿನ ರಾಜಕೀಯವನ್ನು ಏಕೆ ಮಾಡುತ್ತಿದ್ದೀರಿ ಮತ್ತು ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ನೀವು ಹಣದ ಮೂಲಕ ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ಯಾಕೆ?

 • ಕೊರೊನಾ ಸೋಂಕಿನಿಂದಾಗಿ 40 ಲಕ್ಷಕ್ಕೂ ಹೆಚ್ಚು ಜನರು ದುರಂತ ಮೃತಪಟ್ಟರೂ ನರೇಂದ್ರ ಮೋದಿ ಸರ್ಕಾರ ಅವರ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸಿರೋದು ಯಾಕೆ? ಕೊರೊನಾ ಸಮಯದಲ್ಲಿ ನೀವು ಇದ್ದಕ್ಕಿದ್ದಂತೆ ಲಾಕ್​ಡೌನ್​ ವಿಧಿಸಿದ್ದು ಯಾಕೆ? ಅದು ಲಕ್ಷಾಂತರ ಕಾರ್ಮಿಕರನ್ನು ಮನೆಗೆ ಮರಳುವಂತೆ ಮಾಡಿದ್ದು ಮಾತ್ರವಲ್ಲದೇ ಯಾವುದೇ ಸಹಾಯವನ್ನೂ ಮಾಡಲಿಲ್ಲ? ಇದಕ್ಕೆಲ್ಲಾ ನೀವು ಮೌನ ಮುರಿದು ಉತ್ತರಿಸಲೇಬೇಕು.




ಸದ್ಯ ಕಾಂಗ್ರೆಸ್‌ ಕೇಳಿರುವ ಒಂಭತ್ತು ಪ್ರಶ್ನೆಗಳಿಗೆ ಬಿಜೆಪಿ ಯಾವ ರೀತಿ ಉತ್ತರ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

top videos
  First published: