Membership Drive: ಡಿಜಿಟಲ್ ಸದಸ್ಯತ್ವ, ಕಾಂಗ್ರೆಸ್​ಗೆ 2.6 ಕೋಟಿ ಹೊಸ ಸದಸ್ಯರು ಸೇರ್ಪಡೆ

ಅಭಿಯಾನವು ಪಕ್ಷದ ಆಂತರಿಕ ಚುನಾವಣೆಗಳಿಗೆ ಮತ್ತು ಸಂಘಟನೆಯ ನಿರ್ಮಾಣಕ್ಕೆ ಆಧಾರವಾಗಿದೆ. ಸದಸ್ಯತ್ವ ಅಭಿಯಾನವು ಮಾರ್ಚ್ 31 ರಂದು ಕೊನೆಗೊಳ್ಳಬೇಕಿತ್ತು. ಆದರೆ ಬಹಳ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಏ. 16): ಶುಕ್ರವಾರ ಕೊನೆಗೊಂಡ ತನ್ನ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ (Congress Digital Membership Drive) 2.6 ಕೋಟಿ ಹೊಸ ಸದಸ್ಯರು ನೊಂದಣಿ ಆಗಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರು ಕೂಡ ನಿಯಮಗಳ ಪ್ರಕಾರ ಪಕ್ಷದ ಡಿಜಿಟಲ್ ಸದಸ್ಯತ್ವ ಪಡೆದಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Former prime minister Manmohan Singh) ಅವರು ಗುರುವಾರ ಪಕ್ಷದ ಡಿಜಿಟಲ್ ಸದಸ್ಯತ್ವ ಪಡೆದಿದ್ದರು. ಅಭಿಯಾನ ಆರಂಭವಾದ ಮೊದಲ ದಿನವಾದ ಕಳೆದ ನವೆಂಬರ್ 1 ರಂದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (AICC Former President Rahul Gandhi) ಅವರು ಸದಸ್ಯತ್ವ ಪಡೆದಿದ್ದರು.

ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

2022-2027ರ ಅವಧಿಗೆ ಪ್ರಮಾಣಿತ ಕಾಗದದ ಸದಸ್ಯತ್ವದ ಜೊತೆಗೆ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನೂ ಕಾರ್ಯಗತಗೊಳಿಸಬೇಕು ಎಂದು ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (CWC) ಸಭೆ ನಿರ್ಧರಿಸಿದೆ. ಡಿಜಿಟಲ್ ಸದಸ್ಯತ್ವ ಅಭಿಯಾನವು ದೇಶದ ಜನರಿಂದ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಕಿರಿಯ ಬೆಂಬಲಿಗರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿರುವುದು ಸಂತಸದ ವಿಷಯವಾಗಿದೆ ಎಂದು ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷವು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಬೂತ್‌ಗಳಲ್ಲಿ ಇದುವರೆಗೆ 2.6 ಕೋಟಿ ಸದಸ್ಯರನ್ನು ಹೊಂದಿದಿ ಎಂದು ಅವರು ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ದಾಖಲೆಗಳ ಪರಿಶೀಲನೆ

ಹೊಸದಾಗಿ ನೊಂದಣಿ ಆಗಿರುವವರೆಲ್ಲರೂ ಪರಿಶೀಲಿಸಿದ ಸದಸ್ಯರು. ಕಾಂಗ್ರೆಸ್ ಸದಸ್ಯತ್ವ ಅಪ್ಲಿಕೇಶನ್ ಎಂಬ ಸ್ವಾಮ್ಯದ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಗೊತ್ತುಪಡಿಸಿದ ನೋಂದಣಿದಾರರಿಂದ ಪಕ್ಷಕ್ಕೆ ದಾಖಲಾಗಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Just Escape: ವೇದಿಕೆಗೆ ಬಿದ್ದ ಕಬ್ಬಿಣದ ರಚನೆ, ಕೇಂದ್ರ ಸಚಿವರು ಜಸ್ಟ್ ಬಚಾವ್, 1 ಸಾವು ನಾಲ್ವರು ಗಾಯ

ಇದಲ್ಲದೇ, ಭೌತಿಕ/ಕಾಗದದ ಸದಸ್ಯತ್ವದ ಪ್ರತಿಗಳ ಮೂಲಕ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಕೆಲವು ದಿನಗಳಲ್ಲಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಮುಗಿಯಲಿದ್ದು ನಂತರ ಒಟ್ಟಾರೆ‌ ಸದಸ್ಯರ ಸಂಖ್ಯೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಅಭಿಯಾನದ ಕಾಲಾವಧಿ ವಿಸ್ತರಣೆ

ಕಾಂಗ್ರೆಸ್ ಪಕ್ಷವು ತನ್ನ 135 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಪಕ್ಷದ ಆಂತರಿಕ ಚುನಾವಣೆಗಳಿಗೆ ಮತ್ತು ಸಂಘಟನೆಯ ನಿರ್ಮಾಣಕ್ಕೆ ಆಧಾರವಾಗಿದೆ. ಸದಸ್ಯತ್ವ ಅಭಿಯಾನವು ಮಾರ್ಚ್ 31 ರಂದು ಕೊನೆಗೊಳ್ಳಬೇಕಿತ್ತು ಆದರೆ ಅನೇಕರ ಆಸಕ್ತಿಯ ನಂತರ ಏಪ್ರಿಲ್ 15 ರವರೆಗೆ ವಿಸ್ತರಿಸಲಾಯಿತು ಎಂದು ತಿಳಿಸಿದ್ದಾರೆ.

3 ಹಂತದಲ್ಲಿ ಪರಿಶೀಲನೆ

ದಾಖಲೆಗಳ ಪರಿಶೀಲನೆಯ ನಂತರ ಪ್ರತಿಯೊಬ್ಬ ಡಿಜಿಟಲ್ ಸದಸ್ಯರೂ ದೃಢೀಕರಣಕ್ಕಾಗಿ ಕ್ಯೂಆರ್-ಕೋಡೆಡ್ ಡಿಜಿಟಲ್ ಐಡಿ ಕಾರ್ಡ್ ಅನ್ನು ಪಡೆಯುತ್ತಾರೆ. 5 ಲಕ್ಷಕ್ಕೂ ಹೆಚ್ಚು ಪಕ್ಷದ ಅನುಮೋದಿತ ದಾಖಲಾತಿಗಳ ಜಾಲವು ದೇಶಾದ್ಯಂತ ಮನೆ ಮನೆಗೆ ತಲುಪಿದೆ. ಈ ಅಭಿಯಾನ ಪ್ರಾರಂಭ ಮಾಡಿದಾಗಿನಿಂದಲೂ ಸದಸ್ಯತ್ವದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದೆ. ಕೇವಲ ಪ್ರಮಾಣವಲ್ಲ,

ಇದನ್ನೂ ಓದಿ: Free electricity: ಪ್ರತಿಮನೆಗೆ 300 ಯುನಿಟ್ ಫ್ರೀ ವಿದ್ಯುತ್, ಮಾನ್​ ಸೌಲಭ್ಯಕ್ಕೆ ಮನಸೋತ ಜನ

ಪ್ರತಿ ಸದಸ್ಯರನ್ನು ಮೂರು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ - ಮತದಾರರ ಗುರುತಿನ ಚೀಟಿ, ಛಾಯಾಚಿತ್ರ ಮತ್ತು ಫೋನ್ ಸಂಖ್ಯೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿದ ಬಳಿಕ ಮಾತ್ರ ನೋಂದಣಿ ಮಾಡಬಹುದಾದ ಆ್ಯಪ್ ಬಳಸಲಾಗಿದೆ ಎಂದು ಡಿಜಿಟಲ್ ಅಭಿಯಾನ ಮುನ್ನಡೆಸುತ್ತಿರುವ ಎಐಸಿಸಿ ಡೇಟಾ ಅನಾಲಿಟಿಕ್ಸ್ ವಿಭಾಗದ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ತಿಳಿಸಿದ್ದಾರೆ.
Published by:Divya D
First published: