ನಾಲ್ಕು ತಿಂಗಳ ಬಳಿಕ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಮಾಜ್ ಸದ್ದು

"ನಾನು ಮನೆಯಲ್ಲಿ ಕುಳಿತಿದ್ದಾಗ ಜಾಮಿಯಾ ಮಸೀದಿಯಿಂದ ಪ್ರಾರ್ಥನಾ ಕರೆ ಕೇಳಿಸಿತು. ನನ್ನ ಕಿವಿಗಳನ್ನು ನಾನೇ ನಂಬಲಾಗಲಿಲ್ಲ. ಕೂಡಲೇ ಓಡಿ ಹೋಗಿ ಪ್ರಾರ್ಥನೆ ಸಲ್ಲಿಸಿದೆ. ನಾಲ್ಕೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಜನರು ಜಾಮಿಯಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು," ಎಂದು 55 ವರ್ಷದ ಮೊಹಮ್ಮದ್​ ಇಕ್ಭಾಲ್​ ಹೇಳಿದ್ದಾರೆ.

ಜಾಮಿಯಾ ಮಸೀದಿ

ಜಾಮಿಯಾ ಮಸೀದಿ

  • Share this:
ನವದೆಹಲಿ(ಡಿ.18) ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್​ 5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಇಂದು ಶ್ರೀನಗರದ ಜಾಮಿಯಾ ಮಸೀದಿ ಬಾಗಿಲನ್ನು ಪುನಃ​ ತೆರೆಯಲಾಗಿದೆ. ಕಳೆದ 4 ತಿಂಗಳಲ್ಲಿ ಇದೇ ಪ್ರಥಮ ಬಾರಿಗೆ ಅಧಿಕಾರಿಗಳು ಐತಿಹಾಸಿಕ ಜಾಮಿಯಾ ಮಸೀದಿಯ ಬಾಗಿಲು ತೆರೆದಿದ್ದು, ಈ ವಾರ ಪ್ರಾರ್ಥನೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಆಗಸ್ಟ್​ 5ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಮಸೀದಿ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.  ಸತತ 136 ದಿನಗಳ ಬಳಿಕ ಇಂದು ಮಧ್ಯಾಹ್ನ ಮುಸ್ಲಿಂ ಬಾಂಧವರು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು 100 ರಿಂದ150 ಜನರು ಮಸೀದಿ ಒಳಗೆ ಕೂತು ಪ್ರಾರ್ಥನೆ ಸಲ್ಲಿಸಿದರು.

"ಭದ್ರತಾ ಪಡೆಯನ್ನು ತೆರವುಗೊಳಿಸಿದ ಬಳಿಕ ಮಸೀದಿಯನ್ನು ಪುನಃ ತೆರೆಯುವ ಬಗ್ಗೆ ನಿನ್ನೆ ಸಭೆ ನಡೆಸಲಾಗಿತ್ತು. ಇಂದು ಮಧ್ಯಾಹ್ನ(ಜುಹರ್​) ಮತ್ತು ತಡ ಮಧ್ಯಾಹ್ನ(ಅಸರ್) ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾರುಕಟ್ಟೆಯನ್ನು ಸಹ ತೆರೆಯಲಾಗಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ," ಎಂದು ಮಸೀದಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

10,000 ಜನರು, 246 ಶಂಕಿತರು: ಒಂದು ಶರ್ಟ್ ಬಟನ್ ಇಟ್ಟುಕೊಂಡು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಈ ಪ್ರದೇಶದಲ್ಲಿ ಕೆಲವು ವಾರಗಳ ಬಳಿಕ ಭದ್ರತಾ ನಿರ್ಬಂಧವನ್ನು ತೆರವುಗೊಳಿಸಿದ್ದರೂ ಸಹ, ಸ್ಥಳೀಯ ನಿವಾಸಿಗಳು ಜಾಮಿಯಾ ಮಸೀದಿಗೆ ತೆರಳಲು ನಿರಾಕರಿಸಿದ್ದರು.

"ನಾನು ಇಂದು ನಮಾಜ್​ ಮಾಡಿ ಬಂದೆ. ಈಗ ನಾನು ಬಹಳ ಸಂತೋಷವಾಗಿದ್ದೇನೆ. ಬರುವ ಶುಕ್ರವಾರವೂ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ಮತ್ತೆ ಮಸೀದಿ ಬಾಗಿಲನ್ನು ಮುಚ್ಚದಂತೆ ನಾನು ಒಂದು ಮನವಿ ಮಾಡುತ್ತೇನೆ. ಇದು ದೇವರ ಮನೆ. ಇಲ್ಲಿ ಕರ್ಫ್ಯೂ  ಹೇರಬೇಡಿ," ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

"ನಾನು ಮನೆಯಲ್ಲಿ ಕುಳಿತಿದ್ದಾಗ ಜಾಮಿಯಾ ಮಸೀದಿಯಿಂದ ಪ್ರಾರ್ಥನಾ ಕರೆ ಕೇಳಿಸಿತು. ನನ್ನ ಕಿವಿಗಳನ್ನು ನಾನೇ ನಂಬಲಾಗಲಿಲ್ಲ. ಕೂಡಲೇ ಓಡಿ ಹೋಗಿ ಪ್ರಾರ್ಥನೆ ಸಲ್ಲಿಸಿದೆ. ನಾಲ್ಕೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಜನರು ಜಾಮಿಯಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು," ಎಂದು 55 ವರ್ಷದ ಮೊಹಮ್ಮದ್​ ಇಕ್ಭಾಲ್​ ಹೇಳಿದ್ದಾರೆ.

ಕನ್ನಡದ ‘ಕುದಿ ಎಸರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಇಲ್ಲಿದೆ 23 ಪ್ರಶಸ್ತಿ ವಿಜೇತರ ಪಟ್ಟಿ

ಕೆಲ ತಿಂಗಳ ಹಿಂದೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಬಳಿಕ ಈ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗ ಮಾಡಿದೆ. ಆಗಿನಿಂದಲೂ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ವಿವಿಧ ರೀತಿಯ ನಿರ್ಬಂಧ ಮತ್ತು ನಿಷೇಧಾಜ್ಞೆಗಳು ಜಾರಿಯಲ್ಲಿವೆ. ಅನೇಕ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

 
Published by:Latha CG
First published: