‘ಬಿಜೆಪಿ ಸೇರಲು 35 ಕೋಟಿ ರೂ. ಆಫರ್​​ ನೀಡಿದ್ದ ಮಾಜಿ ಡಿಸಿಎಂ ಸಚಿನ್​​ ಪೈಲಟ್​​​‘ - ಕಾಂಗ್ರೆಸ್​ ಶಾಸಕ

ನನಗೆ ಮಾಜಿ ಡಿಸಿಎಂ ಸಚಿನ್​​ ಪೈಲಟ್​​ ಅವರ ಮನೆಯಲ್ಲೇ ಹೀಗೆ ಬಿಜೆಪಿ ಸೇರಲು 35 ಕೋಟಿ ಆಫರ್​​ ನೀಡಿದಾಗ ನಾನು ತಿರಸ್ಕರಿಸಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ತೊರೆಯುವುದಿಲ್ಲ. ಬಿಜೆಪಿ ಸೇರುವ ಮಾತೇ ಇಲ್ಲ ಎಂದು ಸಚಿನ್​​ ಪೈಲಟ್​​ಗೆ ಖಡಕ್​​ ಆಗಿ ಹೇಳಿದೆ ಎಂದರು ಗಿರಿರಾಜ್​​.

ಅಶೋಕ್ ಗೆಹ್ಲೋಟ್​- ಸಚಿನ್​ ಪೈಲಟ್​

ಅಶೋಕ್ ಗೆಹ್ಲೋಟ್​- ಸಚಿನ್​ ಪೈಲಟ್​

 • Share this:
  ಜೈಪುರ(ಜು.20): ಬಿಜೆಪಿ ಸೇರಲು ಮಾಜಿ ಉಪ ಮುಖ್ಯಮಂತ್ರಿ ಸಚಿನ್​​ ಪೈಲಟ್​​​​ 35 ಕೋಟಿ ರೂ. ನೀಡುವುದಾಗಿ ಹಣದ ಆಮಿಷವೊಡ್ಡಿದ್ದರು ಎಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಗಂಭೀರ ಆರೋಪ ಎಸಗಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಗಿರಿರಾಜ್​ ಸಿಂಗ್​​​, ಸಚಿನ್​​ ಪೈಲೆಟ್​​​ ಒಮ್ಮೆ ಮನೆಗೆ ಕರೆದಿದ್ದರು. ಇವರ ಮನೆಯಲ್ಲೇ ಸಚಿನ್​​ ಪೈಲಟ್​​ ನನಗೆ ಬಿಜೆಪಿ ಸೇರಿದರೆ 30ರಿಂದ 35 ಕೋಟಿ ರೂ. ನೀಡುವ ಆಫರ್​​ ನೀಡಿದ್ದರು. ಆದರೆ, ನಾನು ಮಾತ್ರ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಉಳಿಸುತ್ತೇನೆ ಹೊರತು ಉರುಳಿಸುವುದಿಲ್ಲ ಎಂದು ವಾರ್ನ್​​ ಮಾಡಿ ಬಂದೆ ಎಂದರು.

  ನನಗೆ ಮಾಜಿ ಡಿಸಿಎಂ ಸಚಿನ್​​ ಪೈಲಟ್​​ ಅವರ ಮನೆಯಲ್ಲೇ ಹೀಗೆ ಬಿಜೆಪಿ ಸೇರಲು 35 ಕೋಟಿ ಆಫರ್​​ ನೀಡಿದಾಗ ನಾನು ತಿರಸ್ಕರಿಸಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ತೊರೆಯುವುದಿಲ್ಲ. ಬಿಜೆಪಿ ಸೇರುವ ಮಾತೇ ಇಲ್ಲ ಎಂದು ಸಚಿನ್​​ ಪೈಲಟ್​​ಗೆ ಖಡಕ್​​ ಆಗಿ ಹೇಳಿದೆ ಎಂದರು ಗಿರಿರಾಜ್​​.

  ನಾನು ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ನನ್ನ ಕ್ಷೇತ್ರದ ಜನರಿಗೆ ಹೇಗೆ ಮುಖ ತೋರಿಸಲಿ. ನಾನು ನನ್ನ ತಾಯಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಕಾಂಗ್ರೆಸ್​ ತೊರೆಯುವ ಮಾತೇ ಇಲ್ಲ ಎಂದ ಗಿರಿರಾಜ್​​ ಬಿಜೆಪಿ ಸೇರಲು ನಿರ್ದಿಷ್ಟವಾಗಿ ಎಷ್ಟು ಹಣದ ಆಫರ್ ಬಂದಿತ್ತು ಎಂಬುದನ್ನು ಮಾತ್ರ ಹೇಳಿಲ್ಲ. ಬದಲಿಗೆ 30ರಿಂದ 35 ಕೋಟಿ ರೂ. ಎಂದು ಹೇಳುವ ಮೂಲಕ ಮಾಧ್ಯಮದವರ ಪ್ರಶ್ನೆಗೆ ಉತ್ತರ ಉತ್ತರಿಸದೇ ನುಣುಚಿಕೊಂಡರು.

  ಇತ್ತೀಚೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಅವಕಾಶ ಕೋರಿದ್ದಾರೆ. ಆದರೆ, ಇದರ ಬೆನ್ನಿಗೆ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಇವರನ್ನು ರವಾನಿಸಿರಬಹುದೇ? ಎಂಬ ಸಂದೇಹ ಇದೀಗ ಮನೆ ಮಾಡಿದೆ. ಅಲ್ಲದೆ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಎರಡನೇ ಸುತ್ತಿನ ಚಟುವಟಿಕೆಗಳು ಆರಂಭವಾಗಿವೆಯೇ? ಎಂಬ ಅನುಮಾನಗಳೂ ಬಲಗೊಳ್ಳುತ್ತಿವೆ.

  ಇದನ್ನೂ ಓದಿ: Karnataka SSLC Result 2020: ಆಗಸ್ಟ್ ಮೊದಲ ವಾರದಲ್ಲೇ ಎಸ್​ಎಸ್​ಎಲ್​​ಸಿ ಫಲಿತಾಂಶ - ಸಚಿವ ಸುರೇಶ್ ಕುಮಾರ್

  ಇದಲ್ಲದೆ, ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದ್ದು, ಇಬ್ಬರನ್ನೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ಬೆಳವಣಿಗೆಯಿಂದಲೂ ಸಚಿನ್ ಪೈಲಟ್ ಬಣ ಕೆರಳಿದೆ, ಪರಿಣಾಮ 18 ಶಾಸಕರ ಬಹುಮತ ಯಾಚನೆಗೂ ಮುನ್ನ ದಿಢೀರ್ ಕಾಣೆಯಾಗಿದ್ದಾರೆ ಎನ್ನಲಾಗಿದೆ.
  Published by:Ganesh Nachikethu
  First published: