ಪಂಜಾಬ್​ ಕಾಂಗ್ರೆಸ್​ ಬಲ ಪ್ರದರ್ಶನ; ಸಿಧು 62 -ಕ್ಯಾಪ್ಟನ್​ 15: ಈಗ ಆಟ ಶುರು ಎಂದ ಬಿಜೆಪಿ

ನಂಬರ್ ಗೇಮ್‌ ಆಟವು, ಕಾಂಗ್ರೆಸ್‌ನಲ್ಲಿ ಇರುವ ಅಧಿಕಾರದ ಜಗಳವನ್ನು ಮತ್ತೆ ಬಟಾಬಯಲು ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದ್ದು. "ಈಗ ಆಟ ಶುರು. ಸಿಧು 62, ಕ್ಯಾಪ್ಟನ್ 15, ’’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್ ಟ್ವೀಟ್ ಮಾಡಿದ್ದಾರೆ.

ಅಮೃತಸರದಲ್ಲಿ ಕಾಂಗ್ರೆಸ್​ ಶಾಸಕರೊಂದಿಗೆ ಸಿಧು

ಅಮೃತಸರದಲ್ಲಿ ಕಾಂಗ್ರೆಸ್​ ಶಾಸಕರೊಂದಿಗೆ ಸಿಧು

 • Share this:
  ಕಳೆದ ಭಾನುವಾರ  ಹೊಸದಾಗಿ ಪಂಜಾಬ್ ಕಾಂಗ್ರೆಸ್  ಅಧ್ಯಕ್ಷರಾಗಿ ನೇಮಕಗೊಂಡ  ನವಜೋತ್ ಸಿಂಗ್ ಸಿಧು ಅವರು ತಮಗೆ ಬೆಂಬಲ ಸೂಚಿಸಿರುವ  62 ಶಾಸಕರ ಗುಂಪಿನ ಜೊತೆ ಅಮೃತಸರದ ಗೋಲ್ಡನ್ ಟೆಂಪಲ್​ ಬಳಿ ಬುಧವಾರ ಬಂದು ಪ್ರಾರ್ಥನೆ ಸಲ್ಲಿಸಿದರು.

  ಇದು ಹೆಸರಿಗಷ್ಟೇ ಪ್ರಾರ್ತನೆಯಾಗಿತ್ತೇ ಹೊರತು ಇದನ್ನು ಶಕ್ತಿ ಪ್ರದರ್ಶನ ಎಂದು ಕರೆಯಬಹುದು. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಗುದ್ದಾಟಕ್ಕೆ ಇದು ಪ್ರತ್ಯುತ್ತರ ಎಂದು ಕರೆಯಲಾಗುತ್ತಿದೆ. ಅಲ್ಲದೇ ಹೊಸದಾಗಿ ನೇಮಕಗೊಂಡ ಅಧ್ಯಕ್ಷರು ಸಾರ್ವಜನಿಕವಾಗಿ ನನ್ನ ವಿರುದ್ದ ಮಾಡಿದಂತಹ ಆರೋಪಗಳಿಗೆ ಕ್ಷಮೆ ಕೇಳದ ಹೊರತು ಭೇಟಿ ಹಾಗೂ ಮಾತುಕತೆ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಇಡೀ ಶಾಸಕರ ಪಡೆಯೇ ಸಿಧು ಪರವಾಗಿ ನಿಂತಿರುವುದು ನೋಡಿದರೆ ಯಾರು ಅಖಾಡದಲ್ಲಿ ಗೆಲ್ಲಬಹುದು ಎನ್ನುವ ಕುತೂಹಲ ಜೋರಾಗಿದೆ.

  ಅಮೃತಸರದ ಗುರುದ್ವಾರದ ಬೇಟಿಯ ನಂತರ ನಂತರ ಅವರು ದುರ್ಗಿ ಮಂದಿರ ಮತ್ತು ರಾಮ ತೀರ್ಥ ಸ್ಥಳಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

  ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ  ಔಪಚಾರಿಕವಾಗಿ ವಹಿಸಿಕೊಳ್ಳುವ ಮೊದಲು ಗೋಲ್ಡನ್ ಟೆಂಪಲ್‌ನಲ್ಲಿ ಪೂಜೆ ಸಲ್ಲಿಸುವ ಕುರಿತು ಎಲ್ಲಾ 77 ಕಾಂಗ್ರೆಸ್ ಶಾಸಕರನ್ನು ಸಿಧು ಆಹ್ವಾನಿಸಿದ್ದರು, ಆದರೆ ಅವರಲ್ಲಿ ಕೇವಲ 62 ಮಂದಿ ಮಾತ್ರ ಅಮೃತಸರದ ಅವರ ನಿವಾಸಕ್ಕೆ ತೆರಳಿದ್ದರು ಎಂದು ಅವರ ಸಹಾಯಕರು ತಿಳಿಸಿದ್ದಾರೆ.

  ಸಿಧು ಅವರ ಮನೆಯಲ್ಲಿ ಜಿರಾಕ್‌ಪುರದ ಹಿರಿಯ ಕಾಂಗ್ರೆಸ್ ಮುಖಂಡ ಪರ್ನೀತ್ ಕೌರ್ ಅವರ ಆಪ್ತ ದೀಪಿಂದರ್ ಧಿಲ್ಲಾನ್ ಸೇರಿದಂತೆ, ರಾಜಾ ವಾರಿಂಗ್, ಡಾ. ರಾಜ್ ಕುಮಾರ್ ವರ್ಕಾ, ಇಂದರ್ಬೀರ್ ಬೊಲಾರಿಯಾ, ಬರೀಂದರ್ ಧಿಲ್ಲಾನ್, ಮದನ್ ಲಾಲ್ ಜಲಪುರಿ, ಹರ್ಮಿಂದರ್ ಗಿಲ್, ಹರ್ಜೋತ್ ಕಮಲ್, ಹರ್ಮಿಂದರ್ ಜಸ್ಸಿ, ಜೋಗಿಂದರ್ ಪಾಲ್, ಪರಗತ್ ಸಿಂಗ್, ಗೋಬಯಾ ಮತ್ತು ಸುಖ್ಜಿಂದರ್ ಇತರ ಪ್ರಮುಖ ಶಾಸಕರು ಗೋಲ್ಡನ್​ ಟೆಂಪಲ್​ಗೆ ಬಂದಿದ್ದರು.

  ನಂಬರ್ ಗೇಮ್‌ ಆಟವು, ಕಾಂಗ್ರೆಸ್‌ನಲ್ಲಿ ಇರುವ ಅಧಿಕಾರದ ಜಗಳವನ್ನು ಮತ್ತೆ ಬಟಾಬಯಲು ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದ್ದು. "ಈಗ ಆಟ ಶುರು. ಸಿಧು 62, ಕ್ಯಾಪ್ಟನ್ 15, ’’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್ ಟ್ವೀಟ್ ಮಾಡಿದ್ದಾರೆ.

  ಪಕ್ಷದ ಶಾಸಕರನ್ನು ಭೇಟಿಯಾಗುವ ಕುರಿತು ಅಮರಿಂದರ್ ಇಲ್ಲಿಯವರೆಗೆ ಮೌನವಾಗಿದ್ದರೂ, ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಮಂಗಳವಾರ ಸಿಧು  ಅವರನ್ನು ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಭೇಟಿಯಾಗುವುದಿಲ್ಲ ಎಂದು ಪುನರುಚ್ಚರಿಸಿದ್ದರು. ಈ ಹಿಂದೆ ಕ್ಯಾಪ್ಟನ್​ ವಿರುದ್ಧದ "ಅವಹೇಳನಕಾರಿ" ಹೇಳಿಕೆಗಳಿಗೆ ಕ್ಷಮೆಯಾಚಿಸುವವರೆಗೂ ಸಿಎಂ ಅವರನ್ನು ಭೇಟಿ ಮಾಡುವುದಿಲ್ಲ.

  ಕ್ಯಾಪ್ಟನ್ಅಮರೀಂದರ್ ಅವರನ್ನು ಭೇಟಿ ಮಾಡಲು ಸಮಯ ಕೋರಿ ಬಂದಿರುವ ವರದಿಗಳು ಸಂಪೂರ್ಣವಾಗಿ ಸುಳ್ಳು. ಯಾವುದೇ ಸಮಯವನ್ನು ಭೇಟಿಗೆ ಕೇಳಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ.  ಸಿಎಂ ಅವರನ್ನು ನವಜೋತ್ ಸಿಂಗ್ ಸಿಧು  ವೈಯಕ್ತಿಕವಾಗಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದು ಈ ವಿಚಾರಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಭೇಟಿಯಾಗುವುದಿಲ್ಲ ”ಎಂದು ತುಕ್ರಲ್ ಟ್ವೀಟ್ ಮಾಡಿದ್ದಾರೆ.

  ಹಿರಿಯ ಕ್ಯಾಬಿನೆಟ್ ಸಚಿವ ಬ್ರಹ್ಮ್ ಮೋಹಿಂದ್ರಾ ಅವರು ಸಿಧು ಮತ್ತು ಅಮರಿಂದರ್ ನಡುವಿನ ಸಮಸ್ಯೆಗಳು ಬಗೆಹರಿಯುವವರೆಗೂ ಸಿಧು ಅವರನ್ನು ಭೇಟಿಯಾಗುವುದಿಲ್ಲ ಎಂದು ತಿಳಿಸಿ ಸಿಎಂಗೆ ಬೆಂಬಲ ನೀಡಿದ್ದಾರೆ.

  ಇದನ್ನೂ ಓದಿ: Sonia Gandhi: 2024ರವರೆಗೂ ಸೋನಿಯಾ ಗಾಂಧಿಯೇ ಕಾಂಗ್ರೆಸ್​ ಅಧ್ಯಕ್ಷೆ

  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪಂಜಾಬ್ ಕಾಂಗ್ರೆಸ್​ ಘಟಕದ ನೂತನ ಅಧ್ಯಕ್ಷರನ್ನಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಕ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಹಾಗೂ ಅಧಿಕಾರ ಹಿಡಿಯುವ ಸಲುವಾಗಿ ಸಿಧು ಅವರಿಗೆ ಸಹಾಯ ಮಾಡಲು ನಾಲ್ಕು ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಲಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: