ಭೋಪಾಲ್: ಶಾಲೆ (School) ಎಂದರೆ ದೇವಾಲಯ ಎನ್ನಲಾಗುತ್ತದೆ, ಪಾಠ ಹೇಳುವ ಗುರುಗಳನ್ನ (Teacher) ದೇವರಂತೆ ಭಾವಿಸಲಾಗುತ್ತದೆ. ಆದರೆ ಇಲ್ಲೊಂದು ಶಾಲೆಯ ಪ್ರಾಂಶುಪಾಲರ (Principal) ಕೊಠಡಿಯಲ್ಲಿ ಮದ್ಯದ ಬಾಟಲಿಗಳು (Liquor Bottles), ಕಾಂಡೋಮ್ ಪಾಕೆಟ್ಗಳು (Condom Packets) ಪತ್ತೆಯಾಗಿದ್ದು, ಈ ವಿಷಯ ವಿದ್ಯಾರ್ಥಿಗಳ ಪೋಷಕರಿಗೆ ಆಘಾತವನ್ನುಂಟು ಮಾಡಿದೆ. ಮಧ್ಯಪ್ರದೇಶದ (Madhya Pradesh) ಮೊರೆನಾ ಜಿಲ್ಲೆಯಲ್ಲಿ ಮಿಷನರಿ ಆಂಗ್ಲ ಮಾಧ್ಯಮ ಶಾಲೆಯೊಂದರ ಮೇಲೆ ಮಕ್ಕಳ ರಕ್ಷಣಾ ಆಯೋಗ ಹಾಗೂ ಜಿಲ್ಲಾ ಶೈಕ್ಷಣಿಕ ಅಧಿಕಾರಿಗಳ ತಂಡ ತಪಾಸಣೆ ನಡೆಸಿದ ವೇಳೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಈ ವಸ್ತುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಾಳಿ
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ನಿವೇದಿತಾ ಶರ್ಮಾ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎ.ಕೆ ಪಾಠಕ್ ಅವರು ಶಾಲೆಯಲ್ಲಿ ದಿಢೀರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಶಾಲಾ ಪ್ರಿನ್ಸಿಪಲ್ ಕೊಠಡಿಯಲ್ಲಿ ಪ್ಯಾಕೆಟ್ಗಟ್ಟಲೇ ಕಾಂಡೋಮ್ಗಳು ಪತ್ತೆಯಾಗಿದೆ. ಇಷ್ಟೇ ಅಲ್ಲ ವಿದೇಶಿ ಮದ್ಯದ ಬಾಟಲಿಗಳು ಹಾಗೂ ಹಲವು ಧರ್ಮ ಪ್ರಚಾರದ ಪುಸ್ತಕಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ದಿಢೀರ್ ದಾಳಿಯಿಂದ ಕರ್ಮಕಾಂಡ ಬಯಲು
ಕೆಲವು ವಿದ್ಯಾರ್ಥಿಗಳಿಂದ ಶಾಲೆ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಕುರಿತು ಕೆಲವು ರಹಸ್ಯ ಮಾಹಿತಿಗಳನ್ನು ಪಡೆದ ಮಕ್ಕಳ ಹಕ್ಕುಗಳ ಆಯೋಗ, ಯಾವುದೇ ಸೂಚನೆ ನೀಡದೇ ದಿಢೀರ್ ಆಗಿ ಶಾಲೆ ಮೇಲೆ ಪೊಲೀಸರ ತಂಡದ ಜೊತೆ ದಾಳಿ ಮಾಡಿದೆ. ಈ ವೇಳೆ ಪ್ರಿನ್ಸಿಪಲ್ ರೂಮ್ನಲ್ಲಿ ಕಾಂಡೋಮ್, ವಿದೇಶಿ ಮದ್ಯದ ಬಾಟಲಿ ಹಾಗೂ ಶಾಲೆಯ ಗ್ರಂಥಾಲಯದಲ್ಲಿ ನಿರ್ದಿಷ್ಟ ಧರ್ಮದ ಪ್ರಚಾರಕ ಸಾಮಗ್ರಿಗಳನ್ನು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Condom: ಕುರಿ ಕರುಳಿನಿಂದ ಕಾಂಡೋಮ್ ಮಾಡ್ತಾರಾ? ಇದು ಸಿಕ್ಕಾಪಟ್ಟೆ ಕಾಸ್ಟ್ಲಿ
ಶಾಲೆಯ ವಶಕ್ಕೆ ಶಿಫಾರಸು
ಶಾಲೆಯಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾದ ಹಿನ್ನಲೆ ಆಯೋಗ ಶಾಲೆಯನ್ನು ವಶಪಡಿಸಿಕೊಳ್ಳಲು ಮೊರೆನಾ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದೆ. ಇನ್ನೂ ವಿದೇಶಿ ಮದ್ಯ ಪತ್ತೆಯಾಗಿರುವ ಕಾರಣ ಜಿಲ್ಲಾ ಅಬಕಾರಿ ಇಲಾಖೆಯೂ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಘಟನೆ ಮಾಹಿತಿ ಪಡೆದ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಶಾಲೆಯನ್ನು ವಶಕ್ಕೆ ಪಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಸತಿ ವ್ಯವಸ್ಥೆಯಿದ್ದ ಕಟ್ಟಡ
ನಾವು ಸಾಮಾನ್ಯ ತಪಾಸಣೆಗಾಗಿ ಶಾಲೆಗೆ ಭೇಟಿ ನೀಡಿದ್ದೆವು. ಆದರೆ ನಾವು ಕ್ಯಾಂಪಸ್ ಅನ್ನು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪರಿಶೀಲಿಸಿದಾಗ, ಒಂದು ಮೂಲೆಯಲ್ಲಿದ್ದ ಕಟ್ಟಡದ ಬಗ್ಗೆ ಅನುಮಾನ ಬಂದಿತು. ಆದರೆ ಅಲ್ಲಿ ಕರೆದೊಯ್ಯಲು ಯಾರೂ ಸಿದ್ಧರಿರಲಿಲ್ಲ, ಆದ್ದರಿಂದ ನಾವು ಖುದ್ದಾಗಿ ಹೋಗಿ ಪರಿಶೀಲಿಸಿದೆವು. ಆದರೆ ಆ ಕಟ್ಟಡವನ್ನು ಪ್ರವೇಶಿಸಿದಾಗ, ಅದು ವಸತಿ ವ್ಯವಸ್ಥೆಇರುವ ಕಟ್ಟಡ ಎಂಬುದು ನಮ್ಮ ಅರಿವಿಗೆ ಬಂದಿತು. ಅಲ್ಲದೆ ಅಲ್ಲಿ ವಾಸಿಸುತ್ತಿದ್ದ ಹೆಚ್ಚಿನ ಜನರು ಕಟ್ಟಡದಿಂದ ಹೊರಬಂದರು. ಅದನ್ನು ವಸತಿಗಾಗಿ ಬಳಸಲಾಗುತ್ತಿತ್ತು ನಿವೇದಿತಾ ಶರ್ಮಾ ಹೇಳಿದ್ದಾರೆ.
ಕಾನೂನಿನ ಉಲ್ಲಂಘನೆ
ಆ ರೂಮಿನಲ್ಲಿ ಕೆಲವು ವಸ್ತುಗಳು ಸಿಕ್ಕಿರುವುದು, ಅವರ ವೈಯಕ್ತಿಕ ವಿಚಾರ ಎಂದು ಹೇಳಬಹುದು. ಆದರೆ ಶಾಲಾ ಆವರಣದಲ್ಲಿ ಮದ್ಯವನ್ನು ಅನುಮತಿಸಲಾಗುವುದಿಲ್ಲ. ಇಲ್ಲಿ ಸ್ಪಷ್ಟ ಕಾನೂನಿನ ಉಲ್ಲಂಘನೆಯಾಗಿದೆ. ಹಾಗಾಗಿ ಅಬಕಾರಿ ಇಲಾಖೆ ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ, ಏಕೆಂದರೆ ಯಾರೂ ಅಷ್ಟು ಪ್ರಮಾಣದ ಮದ್ಯವನ್ನು ಇಟ್ಟುಕೊಳ್ಳಬಾರದು. ಕಾಂಡೋಮ್ಗಳು ಸೇರಿದಂತೆ ಇತರ ಕೆಲವು ಆಕ್ಷೇಪಾರ್ಹ ವಸ್ತುಗಳು ಸಹ ಕಂಡುಬಂದಿವೆ ಎಂದು ನಿವೇದಿತಾ ಶರ್ಮಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ